»   » ಸುರೇಶ್ ರೈನಾ ಜೊತೆ ಶ್ರುತಿ ಪ್ರೀತಿ ಗೀತಿ ಇತ್ಯಾದಿ

ಸುರೇಶ್ ರೈನಾ ಜೊತೆ ಶ್ರುತಿ ಪ್ರೀತಿ ಗೀತಿ ಇತ್ಯಾದಿ

By: ಉದಯರವಿ
Subscribe to Filmibeat Kannada

ದಕ್ಷಿಣದ ಸುಂದರಿ ಶ್ರುತಿ ಹಾಸನ್ ಕುರಿತ ಲವ್ ಸೆಕ್ಸ್ ಔರ್ ದೋಕಾ ಸುದ್ದಿಗಳು ಆಗಾಗ ಬರುತ್ತಲೇ ಇವೆ. ಶ್ರುತಿ ತನ್ನ ಪ್ರಿಯಕರನ್ನು ಬಟ್ಟೆ ಬದಲಾಯಿಸುವಂತೆ ಬದಲಾಯಿಸುತ್ತಿರುತ್ತಾರೆ ಎಂಬುದು ಅದರಲ್ಲಿ ಕೇಳಿಬರುತ್ತಿರುವ ಪ್ರಮುಖ ಆರೋಪ.

ಶ್ರುತಿ ಹಾಸನ್ ಅವರಿಗೆ ಸಂಬಂಧಿಸಿದ ತಾಜಾ ಸುದ್ದಿಯೊಂದು ಇದೀಗ ಬಾಲಿವುಡ್ ನಲ್ಲಿ ಬಿತ್ತರವಾಗೊಂಡಿದೆ. ಕ್ರಿಕೆಟರ್ ಸುರೇಶ್ ರೈನಾ ಜೊತೆ ಜೂಟಾಟ ಆಡುತ್ತಿದ್ದಾರೆಂದು, ಇವರಿಬ್ಬರ ಕಣ್ಣಾಮುಚ್ಚಾಲೆ ರಹಸ್ಯವಾಗಿ ನಡೆಯುತ್ತಿದೆ ಎಂಬ ಸುದ್ದಿಗಳು ಹಬ್ಬಿವೆ.

ಈ ಸುದ್ದಿ ಲೀಕ್ ಆಗಿದ್ದೇ ತಡ ಶ್ರುತಿ ಹಾಸನ್ ಹಾಗೂ ಸುರೇಶ್ ರೈನಾ ಇಬ್ಬರೂ ಹಾವು ತುಳಿದಂತೆ ಎಗರಾಡಿದ್ದಾರೆ. ಅದು ಅವರ ವೈಯಕ್ತಿಕ ವಿಚಾರವಾಯಿತು. ಮಾಧ್ಯಮಗಳು ಯಾಕೆ ಅವರಿಬ್ಬರ ಸಂಬಂಧದ ಬಗ್ಗೆ ಇಷ್ಟೆಲ್ಲಾ ತಲೆಕೆಡಿಸಿಕೊಳ್ಳುತ್ತಿವೆಯೋ ಎಂದೂ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಐಪಿಎಲ್ ಪಂದ್ಯಾವಳಿ ವೇಳೆ ಹತ್ತಿರವಾದ ಜೋಡಿ

ಐಪಿಎಲ್ ಪಂದ್ಯಾವಳಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಪ್ರಚಾರ ರಾಯಭಾರಿಯಾಗಿದ್ದ ಸಂದರ್ಭದಲ್ಲಿ ಶ್ರುತಿ ಅವರಿಗೆ ರೈನಾ ಪರಿಚಯವಾಯಿತು. ಆ ಬಳಿಕ ಇವರಿಬ್ಬರ ನಡುವೆ ಸ್ನೇಹ ಬಲಗೊಂಡಿತು.

ಸ್ನೇಹ ಸಂಬಂಧ ಪ್ರೀತಿಯಾಗಿ ಬದಲಾಯಿತು

ಸ್ನೇಹ ಎಂದ ಮೇಲೆ ಪ್ರೀತಿ ಚಿಗುರದಿರಲು ಸಾಧ್ಯವೆ? ಇಬ್ಬರೂ ಇನ್ನಷ್ಟು ಹತ್ತಿರವಾದರು. ಇದನ್ನು ನೋಡಿದವರು ನಾನಾ ತರಹ ಸುದ್ದಿ ಹಬ್ಬಿಸಲು ಶುರು ಮಾಡಿದರು. ಈ ಸುದ್ದಿ ಆ ಕಿವಿಯಿಂದ ಈ ಕಿವಿಗೆ ಬಿದ್ದು ಮಾಧ್ಯಮಗಳಲ್ಲಿ ಅಕ್ಷರ ರೂಪ ಪಡೆಯುವ ಹೊತ್ತಿಗೆ ಎಚ್ಚೆತ್ತುಕೊಂಡರು.

ಸುದ್ದಿಯನ್ನು ಇಬ್ಬರೂ ತಳ್ಳಿಹಾಕಿದರು

ಈ ಬಗ್ಗೆ ಸುರೇಶ್ ರೈನಾ ಹೇಳುವುದೇನೆಂದರೆ, ತಾನು ಯಾರನ್ನೂ ಪ್ರೇಮಿಸುತ್ತಿಲ್ಲ ಎಂದರು. ಈ ಬಗ್ಗೆ ಶ್ರುತಿ ಕೂಡ ತನ್ನ ಟ್ವಿಟ್ಟರ್ ನಲ್ಲಿ ತಮ್ಮಿಬ್ಬರ ಬಗ್ಗೆ ಬಂದ ಸುದ್ದಿಯನ್ನು ಖಂಡಿಸಿದರು. ಈ ರೀತಿಯ ಸುದ್ದಿಗಳಿಗೆ ಕಿವಿಗೊಡದೆ ತಮ್ಮತಮ್ಮ ಕೆಲಸ ನೋಡಿಕೊಳ್ಳುವುದು ಉತ್ತಮ ಎಂದರು.

ಪ್ರೀತಿ ಗೀತಿ ಇತ್ಯಾದಿ ಏನೂ ಇಲ್ಲವಂತೆ

ಆರಂಭದಲ್ಲಿ ಶ್ರುತಿ ಹೆಸರು ಸಿದ್ಧಾರ್ಥ್ ಜೊತೆ ಕೇಳಿಬಂದಿತ್ತು. ಆದರೆ ಇವರಿಬ್ಬರ ನಡುವಿನ ಪ್ರೀತಿ ಗೀತಿ ಇತ್ಯಾದಿ ಏನೂ ಇಲ್ಲ ಎನ್ನಲಾಯಿತು. ಇಬ್ಬರ ನಡುವೆ ಕೇವಲ ಸ್ನೇಹ ಸಂಬಂಧವಷ್ಟೇ ಇತ್ತು ಎಂಬ ಸುದ್ದಿಗಳು ಹರಿದಾಡಿದವು.

ಇದೆಲ್ಲಾ ಕಾಮನ್ ಬಿಡಿ ಅಂತಾರೆ ಕೆಲವರು

ಸದ್ಯಕ್ಕೆ ಸುರೇಶ್ ರೈನಾ ಜೊತೆ ಶ್ರುತಿ ಹೆಸರು ಥಳುಕು ಹಾಕಿಕೊಂಡಿದೆ. ಇದು ಹೊರತುಪಡಿಸಿದರೆ ಶ್ರುತಿ ಅತ್ತ ಟಾಲಿವುಡ್ ಇತ್ತ ತಮಿಳು ಚಿತ್ರರಂಗದಲ್ಲಿ ಸಖತ್ ಬೇಡಿಕೆಯುಳ್ಳ ತಾರೆ. ತೆಲುಗಿನಲ್ಲಂತೂ ಒಂದರ ಹಿಂದೆ ಒಂದು ಹಿಟ್ ಚಿತ್ರಗಳನ್ನು ಕೊಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಗಾಸಿಪ್ ಸುದ್ದಿಗಳು ಕಾಮನ್ ಬಿಡಿ ಎನ್ನುವವರೂ ಇದ್ದಾರೆ.

English summary
Shruti Hassan has not made any comment on her secret relationship with Suresh Raina. The actress was also linked with actors like Dhanush, Siddharth, Girish Kumar, Rithvik Dhanjani and few others in the past, but none of them has come out true.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada