»   » ಧ್ರುವ ಸರ್ಜಾ ಚಿತ್ರಕ್ಕೆ ಶ್ರುತಿ ಹಾಸನ್ ಜೋಡಿಯಂತೆ.!

ಧ್ರುವ ಸರ್ಜಾ ಚಿತ್ರಕ್ಕೆ ಶ್ರುತಿ ಹಾಸನ್ ಜೋಡಿಯಂತೆ.!

Posted By:
Subscribe to Filmibeat Kannada
Shruthi Hassan Debut To Kannada With Dhruva Sarja | Filmibeat Kannada

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ಬೆನ್ನಲ್ಲೆ ನಟ ಧ್ರುವ ತಮ್ಮ ನಾಲ್ಕನೇ ಚಿತ್ರಕ್ಕೆ ಸಿದ್ದವಾಗಿದ್ದು, ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಸಕ್ಸಸ್ ಫುಲ್ ನಿರ್ದೇಶಕ ನಂದಕಿಶೋರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, 'ಪೊಗರು' ಎಂದು ಹೆಸರಿಡಲಾಗಿದೆ. ಈಗ 'ಪೊಗರು' ಚಿತ್ರಕ್ಕೆ ನಾಯಕಿ ಯಾರಾಗಬಹುದು ಎಂಬ ಚರ್ಚೆ ಶುರುವಾಗಿದ್ದು, ದಕ್ಷಿಣ ಭಾರತದ ಖ್ಯಾತಿ ನಟಿ ಶ್ರುತಿ ಹಾಸನ್ ಅವರನ್ನ ಕರೆತರುವ ಚಿಂತನೆಯಲ್ಲಿದ್ದಾರೆ ನಿರ್ದೇಶಕರು.

shruti hassan debut to Kannada with dhruva sarja

ಈಗಾಗಲೇ ಶ್ರುತಿ ಹಾಸನ್ ಜೊತೆ ಒಂದು ಸುತ್ತಿನ ಮಾತುಕಥೆ ಆಗಿದ್ದು, ಕಥೆ ಒಪ್ಪಿಕೊಂಡಿದ್ದಾರಂತೆ. ಹಣಕಾಸಿನ ವ್ಯವಹಾರದಲ್ಲಿ ಅಂದುಕೊಂಡಂತೆ ಆದ್ರೆ, ಶ್ರುತಿ ಹಾಸನ್ ಕನ್ನಡಕ್ಕೆ ಬರುವುದು ಖಚಿತಾವೆನ್ನುತ್ತಿದ್ದಾರೆ.

ಈ ಹಿಂದೆ ಕೂಡ ಶ್ರುತಿ ಹಾಸನ್ ಅವರನ್ನ ಕನ್ನಡಕ್ಕೆ ಕರೆತರುತ್ತೇವೆ ಎಂದು ಹಲವು ಚಿತ್ರತಂಡಗಳು ಹೇಳಿದ್ದವು. ಆದ್ರೆ, ಶ್ರುತಿ ಬರಲೇ ಇಲ್ಲ. ಈಗ 'ಪೊಗರು' ನಿರ್ದೇಶಕರು, ಧ್ರುವ ಸರ್ಜಾಗೆ ಶ್ರುತಿ ಹಾಸನ್ ಅವರನ್ನ ಜೋಡಿಯಾಗಿಸುವ ಉದ್ದೇಶ ಹೊಂದಿದ್ದಾರೆ.

ತೆಲುಗು, ತಮಿಳು, ಹಿಂದಿ ಹೀಗೆ ಬಹುಭಾಷೆಯಲ್ಲಿ ಖ್ಯಾತಿ ಗಳಿಸಿಕೊಂಡಿರುವ ಕಮಲ್ ಹಾಸನ್ ಪುತ್ರಿ ಈ ಬಾರಿಯಾದರೂ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಾರ ಎಂದು ಕಾದುನೋಡಬೇಕಿದೆ.

English summary
latest buzz from Gandhinagar has the filmmakers have approached Shruti Haasan to play the female lead opposite to dhruva sarja in pogaru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada