»   » ನಟಿ ಶ್ರುತಿ ಹಾಸನ್ ಹೊಸ ಕುಚಿಕು ಬಾಯ್ ಫ್ರೆಂಡ್

ನಟಿ ಶ್ರುತಿ ಹಾಸನ್ ಹೊಸ ಕುಚಿಕು ಬಾಯ್ ಫ್ರೆಂಡ್

By: ರವಿಕಿಶೋರ್
Subscribe to Filmibeat Kannada

ನಟಿ ಶ್ರುತಿ ಹಾಸನ್ ಸದ್ಯಕ್ಕೆ ಬಾಲಿವುಡ್, ಟಾಲಿವುಡ್, ಕಾಲಿವುಡ್ ನಲ್ಲಿ ಬಿಜಿಯಾಗಿರುವ ಬೆಡಗಿ. ಆರಂಭದಲ್ಲಿ ಶ್ರುತಿ ಅಭಿನಯದ ಚಿತ್ರಗಳು ಅಷ್ಟಾಗಿ ಹಿಟ್ ಆಗದಿದ್ದರೂ ಈಗ ಬಲು ಬೇಡಿಕೆಯ ತಾರೆಯಾಗಿ ಹೊರಹೊಮ್ಮಿದ್ದಾರೆ.

ಇದೀಗ ಶ್ರುತಿ ಹಾಸನ್ ಗೆ ಒಬ್ಬ ಕುಚಿಕು ಗೆಳೆಯ ಸಿಕ್ಕಿದ್ದಾನಂತೆ. ಹಾಗಂತ ಶ್ರುತಿ ಬಾಯ್ಬಿಟ್ಟು ಹೇಳದಿದ್ದರೂ ಬಾಲಿವುಡ್ ನಲ್ಲಿ ಮಾತ್ರ ಕುಚಿಕು ಬಾಯ್ ಫ್ರೆಂಡ್ ಬಗ್ಗೆ ಅಸುಕು, ಪಸುಕು ಲಸಕು ಮುಸುಕು ಸುದ್ದಿ ಹಬ್ಬಿದೆ.

Sidharth Malhotra Dated Shruti Haasan

ಈ ಹೊಸ ಗೆಳೆಯ ಬೇರಾರು ಅಲ್ಲ ಸಿದ್ಧಾರ್ಥ್ ಮಲ್ಹೋತ್ರಾ. ಇಷ್ಟು ದಿನ ಆಲಿಯಾ ಭಟ್ ಜೊತೆ ತಿರುಗಾಡುತ್ತಿದ್ದ ಸಿದ್ಧಾರ್ಥ್ ಈಗ ಶ್ರುತಿ ಹಾಸನ್ ಖಾಸಾ ಗೆಳೆಯ ಎನ್ನಲಾಗಿದೆ. ಈ ಹಿಂದೊಮ್ಮೆ ತನ್ನ ಮಾಜಿ ವಿದೇಶಿ ಗೆಳೆತಿ ಬಗ್ಗೆ ಸಿದ್ಧಾರ್ಥ್ ಬಹಿರಂಗವಾಗಿ ಹೇಳಿಕೊಂಡಿದ್ದ.

ವಿದೇಶಿ ಗೆಳತಿಯೊಂದಿಗಿನ ಸಂಬಂಧ ಮುರಿದುಬಿದ್ದ ಮೇಲೆ ಆಲಿಯಾ ಭಟ್ ಜೊತೆಗಿನ ಕಣ್ಣಾಮುಚ್ಚಾಲೆ ಬಹಿರಂಗವಾಗಿತ್ತು. ಈಗ ಶ್ರುತಿ ಹಾಸನ್ ಜೊತೆಗೆ ಜೂಟಾಟ ಶುರುವಾಗಿದೆಯಂತೆ. ಆದರೆ ಈ ಕುಚಿಕು ಗೆಳೆಯನ ಕೈಗೆ ಸಿಗಲು ಶ್ರುತಿಗೆ ಸಾಧ್ಯವಾಗುತ್ತಿಲ್ಲವಂತೆ.

ದಕ್ಷಿಣದಲ್ಲಿ ಬಿಜಿಯಾಗಿರುವ ಶ್ರುತಿ ತನ್ನ ಬಾಯ್ ಫ್ರೆಂಡ್ ಜೊತೆ ಕಳೆಯಲು ಕಾಲ ಸಿಗುತ್ತಿಲ್ಲವಂತೆ. ಇನ್ನೊಂದು ಕಡೆ ಸಿದ್ಧಾರ್ಥ್ ಅವರು ಬಾಲಿವುಡ್ ನಲ್ಲಿ ಬಿಜಿಯಾಗಿದ್ದಾರೆ. ಆರಂಭದಲ್ಲೇ ಇವರಿಬ್ಬರ ಲವ್ ಸ್ಟೋರಿಗೆ ಸದ್ಯಕ್ಕೆ ಅರ್ಧ ವಿರಾಮ ಬಿದ್ದಿದೆ.

English summary
Did you know Sidharth Malhotra dated Shruti Haasan? Well, shocking isn't it, the actor who is currently dating Alia Bhatt. Obviously things didn't work out, because both of these super hot actors have moved on and found love in their respective lives.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada