For Quick Alerts
  ALLOW NOTIFICATIONS  
  For Daily Alerts

  OMG ! ಲುಂಗಿ ಡ್ಯಾನ್ಸ್ ಸಿಂಗರ್ ಬದುಕಿಲ್ವ?

  By ಜೇಮ್ಸ್ ಮಾರ್ಟಿನ್
  |

  ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅಭಿನಯದ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದ 'ಲುಂಗಿ ಡ್ಯಾನ್ಸ್' ಹಾಡಿನ ಗಾಯಕ ಯೋ ಯೋ ಹನಿ ಸಿಂಗ್ ಇನ್ನಿಲ್ಲ ಎಂಬ ಸುದ್ದಿ ಸೋಮವಾರ ಎಲ್ಲೆಡೆ ಹರಡಿ ಅಭಿಮಾನಿಗಳಿಗೆ ಗಾಬರಿ ಹುಟ್ಟಿಸಿತ್ತು.

  ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಪಾಪ್ ಗಾಯಕ ಹನಿಸಿಂಗ್ ಸಾವನ್ನಪ್ಪಿರುವ ಬಗ್ಗೆ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ವೈರಸ್ಸಿಗಿಂತ ವೇಗವಾಗಿ ನುಸುಳಿಕೊಂಡಿತ್ತು. ಕಾರು ಅಪಘಾತವೊಂದರಲ್ಲಿ ಹನಿಸಿಂಗ್ ತೀವ್ರವಾಗಿ ಗಾಯಗೊಂಡಿದ್ದಾರೆ ಅವರ ತಲೆಗೆ ಭಾರಿ ಪೆಟ್ಟು ಬಿದ್ದಿದೆ. ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹನಿಸಿಂಗ್ ಕೊನೆಯುಸಿರೆಳೆದಿದ್ದಾರೆ ಎಂದು ಸುದ್ದಿ ವ್ಯಾಟ್ಸಪ್, ಫೇಸ್ ಬುಕ್, ಟ್ವಿಟ್ಟರ್ ಅಲ್ಲದೆ ಪ್ರಮುಖ ವೆಬ್ ಸೈಟ್ ಗಳಲ್ಲೂ ಪ್ರಕಟಗೊಂಡಿತು.

  ಅಸಲಿ ವಿಷಯವೆಂದರೆ ಹನಿ ಸಿಂಗ್ ಗಟ್ಟಿಮುಟ್ಟಾಗಿದ್ದು, ಅವರ ಕೂದಲು ಕೂಡಾ ಕೊಂಕಿಲ್ಲ. ಆನ್ ಲೈನ್ ನಲ್ಲಿ ಬಂದಿರುವ ವರದಿಗಳು ಯಾರು ಹಬ್ಬಿಸಿದರೋ ಗೊತ್ತಿಲ್ಲ ಅಥವಾ ಮುಂಬರುವ ಮ್ಯೂಸಿಕ್ ಆಲ್ಬಂ ಪ್ರಚಾರಕ್ಕಾಗಿ ಹನಿ ಸಿಂಗ್ ಕಡೆಯವರದ್ದೇ ಪ್ರಚಾರ ತಂತ್ರ ಇದಾಗಿರಬಹುದು.ವೆಬ್ ಸೈಟ್ ಗಳಲ್ಲಿ ಬಂದಿರುವ ವರದಿ, ಚಿತ್ರಗಳ ಝಲಕ್ ನಿಮ್ಮ ಮುಂದೆ

  ಸಾಮಾಜಿಕ ಜಾಲ ತಾಣಗಳಿಂದ ಸತ್ತ ಸೆಲೆಬ್ರಿಟಿ

  ಸಾಮಾಜಿಕ ಜಾಲ ತಾಣಗಳಿಂದ ಸತ್ತ ಸೆಲೆಬ್ರಿಟಿ

  ಸಾಮಾಜಿಕ ಜಾಲ ತಾಣಗಳಿಂದ ಸತ್ತ ಸೆಲೆಬ್ರಿಟಿಗಳ ಪಟ್ಟಿಗೆ ಸೇರಿದ ಗಾಯಕ ಹನಿ ಸಿಂಗ್, ಕಾರು ಅಪಘಾತವೊಂದರಲ್ಲಿ ಹನಿಸಿಂಗ್ ತೀವ್ರವಾಗಿ ಗಾಯಗೊಂಡಿದ್ದಾರೆ ಎಂಬ ಸಚಿತ್ರ ವರದಿ ಪ್ರಕಟಗೊಂಡಿದ್ದು ಅಭಿಮಾನಿಗಳಿಗೆ ಆತಂಕ ಮೂಡಿಸಿತ್ತು.

  ಆಸ್ಪತ್ರೆಯಲ್ಲಿ ಮಲಗಿರೋದು ಯಾರು?

  ಆಸ್ಪತ್ರೆಯಲ್ಲಿ ಮಲಗಿರೋದು ಯಾರು?

  ಆಸ್ಪತ್ರೆಯಲ್ಲಿ ಮಲಗಿರೋದು ಯಾರು? ಅದು ಹನಿಸಿಂಗ್ ಅಲ್ವೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಬ್ರಿಂಗ್ ಮೀ ಬ್ಯಾಕ್ ಎಂಬ ಮ್ಯೂಸಿಕ್ ವಿಡಿಯೋ ಆಲ್ಬಂನಲ್ಲಿ ಬರುವ ದೃಶ್ಯವೊಂದರ ಚಿತ್ರ ಇದಾಗಿದ್ದು, ಈ ಚಿತ್ರ ಇಂದು ಹಲವರ ತಲೆಗೆ ಹುಳ ಬಿಟ್ಟಿತ್ತು.

  ದುಬೈಗೆ ತೆರಳಿದ್ದ ಗಾಯಕ ಹನಿ ಸಿಂಗ್

  ದುಬೈಗೆ ತೆರಳಿದ್ದ ಗಾಯಕ ಹನಿ ಸಿಂಗ್

  ಇತ್ತೀಚೆಗೆ ದುಬೈಗೆ ತೆರಳಿದ್ದ ಹನಿ ಸಿಂಗ್ ಅವರು ಗ್ಲೋಬಲ್ ಫೈಟಿಂಗ್ ಚಾಂಪಿಯನ್ ಶಿಪ್ ಹೆಸರಿನಲ್ಲಿ ಬಾಕ್ಸಿಂಗ್ ಲೀಗ್ ಗೆ ಚಾಲನೆ ನೀಡಿದ್ದರು. ಕೆಲ ಕಾಲ ಮಾಧ್ಯಮಗಳಿಂದ ದೂರವುಳಿದಿದ್ದು ಈಗ ಸಾವಿನ ಸುದ್ದಿಯೊಂದಿಗೆ ಜೀವಂತವಾಗಿದ್ದಾರೆ.

  ಯುವ ಪೀಳಿಗೆಯ ಹೃದಯ ಮಿಡಿತ ಹನಿ ಸಿಂಗ್

  ಯುವ ಪೀಳಿಗೆಯ ಹೃದಯ ಮಿಡಿತ ಹನಿ ಸಿಂಗ್

  ಹನಿ ಸಿಂಗ್ ಅವರ ನಿಜನಾಮ ಹೃದೇಶ್ ಸಿಂಗ್, 15 ಮಾರ್ಚ್ 1984ರಂದು ಜನನ, ಪಂಜಾಬಿನ ಗಾಯಕ ಯುಕೆಯ ಟ್ರಿನಿಟಿ ಕಾಲೇಜಿನಲ್ಲಿ ಸಂಗೀತ ಅಭ್ಯಾಸ ಮಾಡಿಕೊಂಡು ಬಂದಿದ್ದಾನೆ. ಗಾಯಕ, ಮಿಮಿಕ್ರಿ ಆರ್ಟಿಸ್ಟ್, ಡಿಜೆ ಆಗಿದ್ದು, 32 ಹಿಟ್ ಗೀತೆಗಳು 20 ಅಲ್ಬಂ ಹೊರ ತಂದಿದ್ದಾನೆ. ಪಾರ್ಟಿ ಆನ್ ಮೈ ಮೈಂಡ್, ಬಾಸ್, ಮಸ್ತ್ ಕಲಂದರ್, ಚಾರ್ ಬೋಟಲ್ ವೋಡ್ಕಾ, ಪಾರ್ಟಿ ವಿಥ್ ಭೂತ್ ನಾಥ್ ಹಿಟ್ ಗೀತೆಗಳು

  ಗಾಯಕ ಹನಿ ಸಿಂಗ್ ಮೊದಲಲ್ಲ

  ಗಾಯಕ ಹನಿ ಸಿಂಗ್ ಮೊದಲಲ್ಲ

  ಸುಳ್ಳು ಸುದ್ದಿಗೆ ಬಲಿಯಾದ ಸೆಲೆಬ್ರಿಟಿಗಳ ಪೈಕಿ ಹನಿ ಸಿಂಗ್ ಅವರೇನು ಮೊದಲಿಗರಲ್ಲ, ಮಾಧುರಿ ದೀಕ್ಷಿತ್, ಲತಾ ಮಂಗೇಷ್ಕರ್, ಆಶಾ ಪರೇಖ್, ದಿಲೀಪ್ ಕುಮಾರ್, ಅಂಬರೀಷ್ ಮುಂತಾದವರ ಸಾವಿನ ಸುದ್ದಿ ಸಾಮಾಜಿಕ ಜಾಲ ತಾಣಗಳ ಮೂಲಕ ಹರಿದು ಬಿಡಲಾಗಿತ್ತು.

  English summary
  Social Media Kills Singer Yo Yo Honey Singh. Yo Yo Honey Singh recently met with an accident, following which the rapper died at a hospital. Reports confirm that the singer is alive and this is just another death hoax news doing the rounds

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X