»   » ಅದಕ್ಕೂ ಇದಕ್ಕೂ ಸಂಬಂಧವಿಲ್ಲ, ಎಲ್ಲವೂ ಕಾಕತಾಳೀಯ!

ಅದಕ್ಕೂ ಇದಕ್ಕೂ ಸಂಬಂಧವಿಲ್ಲ, ಎಲ್ಲವೂ ಕಾಕತಾಳೀಯ!

By: ಹರಾ
Subscribe to Filmibeat Kannada

ನಟಿ ರಮ್ಯಾ ಭಾರತಕ್ಕೆ ವಾಪಸ್ಸಾಗಿದ್ದಾರೆ. ಹಾಗಂತ ರಮ್ಯಾ ಆಪ್ತ ವಲಯ ಹೇಳಿಕೊಂಡಿದೆ. ಆದ್ರೆ. ಲಕ್ಕಿ ಸ್ಟಾರ್ ಹೊರಗೆಲ್ಲೂ ಕಾಣಿಸಿಕೊಂಡಿಲ್ಲ. ರಮ್ಯಾ ಬೆಂಗಳೂರಿನಲ್ಲಿರುವುದು ಮಾಧ್ಯಮಗಳಿಗೆ ಪಕ್ಕಾ ಆಗಿಲ್ಲ.

ಆದ್ರೆ, ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಭಾರತಕ್ಕೆ ಮರಳಿದ ಬೆನ್ನಲ್ಲೇ, ರಮ್ಯಾ ವಾಪಸ್ಸಾಗಿರುವ ಸುದ್ದಿ ಸ್ಫೋಟಗೊಂಡಿರುವುದು 'ಒನ್ ಇಂಡಿಯಾ ಕನ್ನಡ' ಮತ್ತು 'ಫಿಲ್ಮಿಬೀಟ್ ಕನ್ನಡ' ಓದುಗರಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. [ನಾಪತ್ತೆಯಾಗಿದ್ದ ರಾಹುಲ್ ಗಾಂಧಿ ದೆಹಲಿಯಲ್ಲಿ ಪತ್ತೆ]

Speculations on Ramya's return to Bengaluru

ಏನಪ್ಪಾ ಇದು ಏನ್ ಸಮಾಚಾರ? ಇಬ್ಬರೂ ಬೇರೆ ಬೇರೆಯಾಗಿ ಬಂದರೋ, ಒಟ್ಟಿಗೆ ಬಂದರೋ ಅಂತ ಏನೇನೆಲ್ಲಾ ಮಾತನಾಡುತ್ತಿದ್ದಾರೆ. ಆದರೆ, ಸ್ಪಷ್ಟವಾಗಿ ಹೇಳಿ ಬಿಡುತ್ತೇವೆ. ಇದಕ್ಕೂ ಅದಕ್ಕೂ ಯಾವುದೇ ಸಂಬಂಧ ಇಲ್ಲ. ಎಲ್ಲವೂ ಕಾಕತಾಳೀಯ ಅಷ್ಟೇ. [ಬ್ರೇಕಿಂಗ್ ನ್ಯೂಸ್ ; ತಾಯ್ನಾಡಿಗೆ ಮರಳಿದ ರಮ್ಯಾ]

ಅಸಲಿಗೆ ರಾಜ್ಯಶಾಸ್ತ್ರ ಪಠಣ ಮಾಡುವುದಕ್ಕೆ ರಮ್ಯಾ ಲಂಡನ್ ಗೆ ತೆರಳಿದ್ದರು. ಏಪ್ರಿಲ್ ನಲ್ಲಿ ಮರಳಿ ಬರುವ ಬಗ್ಗೆ ಒಂದು ತಿಂಗಳ ಮುನ್ನವೇ ಟ್ವಿಟ್ಟರ್ ನಲ್ಲಿ ಸೂಚನೆ ನೀಡಿದ್ದರು. ಇತ್ತ ಲೋಕಸಭೆ ಚುನಾವಣೆಯಲ್ಲಿ ಭಾರಿ ಸೋಲು ಕಂಡ ನಂತರ ರಾಹುಲ್ ಗಾಂಧಿ ಕೂಡ ದೆಹಲಿಯಿಂದ ಮಾಯವಾಗಿದ್ದರು. [ರಾಹುಲ್ ಗಾಂಧಿ ಬಗ್ಗೆ ರಮ್ಯಾ ಮೌನ ಮಾತಾದಾಗ...]

ಸಾಮಾಜಿಕ ಜಾಲತಾಣಗಳಲ್ಲಿ #WhereIsRahul ಟ್ರೆಂಡಿಂಗ್ ಆಗುತ್ತಿದ್ದಂತೆ, ರಾಹುಲ್ ಗಾಂಧಿ ಪರ ರಮ್ಯಾ ದನಿಯೆತ್ತಿದ್ದರು. ಈಗ ರಾಹುಲ್ ಪ್ರತ್ಯಕ್ಷವಾಗ್ತಿದ್ದಂತೆ, ರಮ್ಯಾ ಮರಳಿ ಬಂದಿರುವ ಸುದ್ದಿ ಓದುಗರ ತಲೆಯಲ್ಲಿ ಹುಳ ಬಿಟ್ಹಂಗಾಗಿದೆ. ಆದ ಕಾರಣ ಎರಡಕ್ಕೂ ಲಿಂಕ್ ಮಾಡದೆ, ಮೊದಲು ರಮ್ಯಾ ಬೆಂಗಳೂರಲ್ಲಿ ಕಾಣಿಸಿಕೊಳ್ಳುವ ವರೆಗೂ ತಾಳ್ಮೆಯಿಂದಿರಿ.

English summary
Rumours mongers are busy linking up arrivals of Ramya and Rahul Gandhi within a span of couple of days in India. However, this could just be a co-incidence.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada