»   » ದಕ್ಷಿಣ ಚಿತ್ರರಂಗಕ್ಕೆ ಅಡಿಯಿಡಲಿರುವ ಶ್ರೀದೇವಿ ಪುತ್ರಿ

ದಕ್ಷಿಣ ಚಿತ್ರರಂಗಕ್ಕೆ ಅಡಿಯಿಡಲಿರುವ ಶ್ರೀದೇವಿ ಪುತ್ರಿ

Posted By:
Subscribe to Filmibeat Kannada

ಬಾಲಿವುಡ್ ತಾರೆ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಬೆಳ್ಳಿಪರದೆಗೆ ಅಡಿಯಿಡಲು ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೆ ಆಕೆಗೆ ದಕ್ಷಿಣ ಚಿತ್ರರಂಗದಿಂದ ಕರೆ ಬಂದಿದೆ. ಆದರೆ ಜಾನ್ವಿ ಕಡೆಯಿಂದ ಇನ್ನೂ ಯಾವುದೇ ಸಿಗ್ನಲ್ ಸಿಕ್ಕಿಲ್ಲ.

ತೆಲುಗು ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ಹಾಗೂ ನಾಗಾರ್ಜುನ ಪುತ್ರ ನಾಗಚೈತನ್ಯ ಜೊತೆ ಅಭಿನಯಿಸಲು ಜಾನ್ವಿಗೆ ಕರೆಬಂದಿದೆಯಂತೆ. ಆದರೆ ಜಾನ್ವಿ ಪೋಷಕರು ಮಾತ್ರ ಈ ಬಗ್ಗೆ ಇನ್ನೂ ಏನೂ ಅಂದುಕೊಂಡಿಲ್ಲವಂತೆ.


ಜಾನ್ವಿ ಇನ್ನೂ ಓದುತ್ತಿದ್ದಾಳೆ. ಅವಳ ಓದು ಮುಗಿಯಲಿ, ಆಮೇಲೆ ಚಿತ್ರರಂಗದ ಬಗ್ಗೆ ಯೋಚಿಸೋಣ ಎನ್ನುತ್ತಿದ್ದಾರೆ. ಜಾನ್ವಿಗೆ ಇನ್ನೂ ಕೇವಲ ವಯಸ್ಸು ಹದಿನಾರು. ಈಗಲೇ ಚಿತ್ರರಂಗಕ್ಕೆ ಬರುವುದು ಬೇಡ ಎಂಬುದು ಪೋಷಕರ ಕಿವಿಮಾತು.

ಆದರೆ ಶ್ರೀದೇವಿ ಅವರು ಮಾತ್ರ ಬೆಳ್ಳಿಪರದೆಗೆ ಬಾಲ ಕಲಾವಿದೆಯಾಗಿ ನಾಲ್ಕನೇ ವರ್ಷಕ್ಕೆ ಅಡಿಯಿಟ್ಟವರು. ಈಗವರ ವಯಸ್ಸು 50 ವರ್ಷ. ಎಪ್ಪತ್ತು ಎಂಬತ್ತರ ದಶಕದಲ್ಲಿ ತಮಗಿಂತಲೂ ವಯಸ್ಸಿನಲ್ಲಿ ಎರಡು ಪಟ್ಟು ದೊಡ್ಡವರ ಜೊತೆ ಹೆಜ್ಜೆ ಹಾಕಲಿಲ್ಲವೆ? ಈಗ ಅವರ ಮಗಳು ಬಣ್ಣಹಚ್ಚಿದರೆ ತಪ್ಪೇನು ಎನ್ನುತ್ತಿದ್ದಾರೆ ಚಿತ್ರರಸಿಕರು.

ಇನ್ನು ಶ್ರೀದೇವಿ ಅವರು ಅತ್ತ ಚಿರಂಜೀವಿ ಇತ್ತ ನಾಗಾರ್ಜುನ ಜೊತೆ ಅಭಿನಯಿಸಿದ್ದಾರೆ. ಈಗ ಶ್ರೀದೇವಿ ಪುತ್ರಿ ಜಾನ್ವಿಗೆ ತೆಲುಗಿನಲ್ಲಿ ಬೇಡಿಕೆ ಉಳ್ಳ ನಟರ ಜೊತೆಗೆ ಆಫರ್ ಬಂದಿರುವುದು ವಿಶೇಷ. ಈ ಬಗ್ಗೆ ಅಧಿಕೃತ ಸುದ್ದಿ ಹೊರಬೀಳುವುದೊಂದು ಬಾಕಿ ಇದೆ. (ಏಜೆನ್ಸೀಸ್)

English summary
B-Town actress Sridevi's elder daughter Jhanvi Kapoor seems to have become a sensation in the South film industry. As per the reports, the 16-year-old Jhanvi, who has been frequently spotted along with her superstar mom at several B-Town events, has caught the eyes of several South filmmakers.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada