For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್-2ಗೋಸ್ಕರ ಏಳು ಚಿತ್ರಗಳನ್ನು ಬೇಡ ಎಂದು ಕೈಬಿಟ್ಟರಂತೆ ಶ್ರೀನಿಧಿ ಶೆಟ್ಟಿ

  |

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಮೂಲಕ ರಾತ್ರೋರಾತ್ರಿ ಸ್ಟಾರ್ ಹೀರೋಯಿನ್ ಆದ ಶ್ರೀನಿಧಿ ಶೆಟ್ಟಿಗೆ ನಿರೀಕ್ಷೆಯಂತೆ ಬೇಡಿಕೆ ಹೆಚ್ಚಿತ್ತು. ಕೆಜಿಎಫ್ ಮುಗಿಯುತ್ತಿದ್ದಂತೆ ಸಾಲು ಸಾಲು ಚಿತ್ರಗಳು ಶ್ರೀನಿಧಿ ಬಳಿ ಬಂದಿದ್ದವು. ಆದರೆ, ಯಾವುದೇ ಹೊಸ ಸಿನಿಮಾಗಳನ್ನು ಫಟ್ ಅಂತಾ ಆಯ್ಕೆ ಮಾಡಿಕೊಂಡಿಲ್ಲ.

  ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕಾಗಿ ಕಾಯಲು ನಿರ್ಧರಿಸಿದರು. ಈ ನಡುವೆ ತಮಿಳು ಸ್ಟಾರ್ ನಟ ಚಿಯಾನ್ ವಿಕ್ರಮ ಜೊತೆ ಕೋಬ್ರಾ ಚಿತ್ರಕ್ಕೆ ನಾಯಕಿಯಾಗಲು ಓಕೆ ಎಂದರು. ಸದ್ಯ, ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು, ತೆರೆಗೆ ಬರಲು ಸಜ್ಜಾಗಿದೆ.

  'KGF' ನಾಯಕಿ ಶ್ರೀನಿಧಿ ಶೆಟ್ಟಿ ನಿಶ್ಚಿತಾರ್ಥದ ಫೋಟೋಗಳು ವೈರಲ್!'KGF' ನಾಯಕಿ ಶ್ರೀನಿಧಿ ಶೆಟ್ಟಿ ನಿಶ್ಚಿತಾರ್ಥದ ಫೋಟೋಗಳು ವೈರಲ್!

  ಈ ಮಧ್ಯೆ ಏಳು ಚಿತ್ರಗಳ ಅವಕಾಶವನ್ನು ಶ್ರೀನಿಧಿ ಶೆಟ್ಟಿ ದೂರ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಅಕ್ಟೋಬರ್ ಬಳಿಕ ಹೊಸ ಸಿನಿಮಾಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವೆ, ಅಲ್ಲಿಯವರೆಗೂ ಕೆಜಿಎಫ್ ಬಗ್ಗೆ ಮಾತ್ರ ಗಮನ ಹರಿಸುವೆ ಎಂದು ಹೇಳಿಕೊಂಡಿದ್ದರು.

  ಶ್ರೀನಿಧಿ ಶೆಟ್ಟಿ ಕನ್ನಡದಲ್ಲಿ ಮೂರು ಸಿನಿಮಾ, ತೆಲುಗಿನಲ್ಲಿ ಎರಡು ಸಿನಿಮಾ ಹಾಗೂ ತಮಿಳಿನಲ್ಲಿ ಎರಡು ಚಿತ್ರವನ್ನು ರಿಜೆಕ್ಟ್ ಮಾಡಿದ್ದಾರೆ. ಅಕ್ಟೋಬರ್ ಬಳಿಕ ಹೊಸ ಸಿನಿಮಾ ಕುರಿತು ಚಿಂತಿಸುವೆ ಎಂದು ಹೇಳಿರುವುದಾಗಿ ಬಾಲಿವುಡ್ ವೆಬ್‌ಸೈಟ್‌ವೊಂದು (Koimoi.com) ವರದಿ ಮಾಡಿದೆ.

  ಇನ್ನು ಕೆಜಿಎಫ್ ಚಾಪ್ಟರ್ 2 ವಿಚಾರಕ್ಕೆ ಬರುವುದಾದರೇ, ಈ ವರ್ಷಾಂತ್ಯಕ್ಕೆ ಬಿಡುಗಡೆಯಾಗುವ ಸಿದ್ಧತೆಯಲ್ಲಿತ್ತು. ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಈ ಪ್ಲಾನ್ ಬದಲಾಗಬಹುದು. ಚಿತ್ರದಲ್ಲಿ ಖಳನಟನಾಗಿ ನಟಿಸಿರುವ ಸಂಜಯ್ ದತ್ ಅವರಿಗೆ ಕ್ಯಾನ್ಸರ್ ಪತ್ತೆಯಾಗಿದೆ. ದತ್ ಅವರ ಭಾಗದ ಚಿತ್ರೀಕರಣ ಮುಗಿದಿದೆ ಎನ್ನಲಾಗಿದೆ. ಆಗಸ್ಟ್ 15 ರಿಂದ ಮತ್ತೆ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಆರಂಭವಾಗಲಿದೆ.

  English summary
  Kannada actress Srinidhi Shetty has rejected many of movies offer for KGF Chapter 2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X