For Quick Alerts
  ALLOW NOTIFICATIONS  
  For Daily Alerts

  ಶ್ರೀನಿಧಿ ಶೆಟ್ಟಿಗೆ ಮತ್ತೊಂದು ಬಂಪರ್: ಪ್ರಭಾಸ್ ಚಿತ್ರದಲ್ಲಿ ಕೆಜಿಎಫ್ ಸುಂದರಿ?

  |

  ಕೆಜಿಎಫ್ ಚಿತ್ರದ ಮೂಲಕ ಏಕಾಏಕಿ ಸ್ಟಾರ್ ನಟಿಯಾದ ಶ್ರೀನಿಧಿ ಶೆಟ್ಟಿ ಈಗ ಚಾಪ್ಟರ್-2 ಬಿಡುಗಡೆಗಾಗಿ ಕಾಯ್ತಿದ್ದಾರೆ. ಜುಲೈ 16 ರಂದು ಕೆಜಿಎಫ್ ಮುಂದುವರಿದ ಭಾಗ ತೆರೆಗೆ ಬರ್ತಿದೆ. ಬಹುಶಃ ಈ ಚಿತ್ರದ ಬಳಿಕ ಶ್ರೀನಿಧಿ ಶೆಟ್ಟಿ ಸಿನಿ ಇಂಡಸ್ಟ್ರಿಯಲ್ಲಿ ಮತ್ತಷ್ಟು ಅವಕಾಶಗಳನ್ನು ಪಡೆದುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

  ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮುಂದಿನ ಚಿತ್ರವನ್ನು ಪ್ರಭಾಸ್ ಜೊತೆ ಮಾಡುತ್ತಿರುವುದು ಗೊತ್ತಿರುವ ವಿಚಾರ. ಹೊಂಬಾಳೆ ಫಿಲಂಸ್ ಅಡಿಯಲ್ಲಿ ಸಲಾರ್ ಚಿತ್ರ ಕೈಗೆತ್ತಿಕೊಂಡಿದ್ದು, ಚಿತ್ರೀಕರಣ ಸಹ ಸಾಗ್ತಿದೆ.

  ಕುತೂಹಲ ಮೂಡಿಸಿದ ಅಲ್ಲು ಅರ್ಜುನ್ ಮತ್ತು ಪ್ರಶಾಂತ್ ನೀಲ್ ಭೇಟಿ

  ಸಲಾರ್ ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಪೂರ್ವ ಗೋದಾವರಿಯಲ್ಲಿ ನಡೆದ ಸಲಾರ್ ಶೂಟಿಂಗ್‌ನಲ್ಲಿ ಶ್ರುತಿ ಹಾಸನ್ ಭಾಗವಹಿಸಿದ್ದರು.

  ಇದೀಗ, ಸಲಾರ್ ಚಿತ್ರದಿಂದ ಮತ್ತೊಂದು ಸರ್ಪ್ರೈಸ್ ಸುದ್ದಿ ಹೊರಬಿದ್ದಿದೆ. ಪ್ರಭಾಸ್ ಚಿತ್ರದಲ್ಲಿ ಹಾಡೊಂದಕ್ಕೆ ಶ್ರೀನಿಧಿ ಶೆಟ್ಟಿ ಹೆಜ್ಜೆ ಹಾಕಲಿದ್ದಾರೆ ಎಂಬ ಸುದ್ದಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿದೆ.

  ಹೈದರಾಬಾದ್‌ನಲ್ಲಿ ಹಾಡಿಗಾಗಿ ಭರ್ಜರಿ ಸೆಟ್ ಹಾಕಲಾಗುತ್ತಿದ್ದು, ಚಿತ್ರದ ಪ್ರಮುಖ ಭಾಗವಾಗಿರಲಿದೆಯಂತೆ. ಸದ್ಯದಲ್ಲೇ ಚಿತ್ರೀಕರಣ ಶುರುವಾಗಲಿದ್ದು, ಅಧಿಕೃತವಾಗಿ ಪ್ರಕಟಿಸಬೇಕಿದೆ.

  ಪ್ಯಾನ್ ಇಂಡಿಯಾ ಸಿನಿಮಾ 'ಸಲಾರ್' ರಿಲೀಸ್ ದಿನಾಂಕ ಘೋಷಣೆ

  ಸಲಾರ್ ಸಿನಿಮಾದ ಬಿಡುಗಡೆ ದಿನಾಂಕ ಈಗಾಗಲೇ ಘೋಷಣೆಯಾಗಿದೆ. ಏಪ್ರಿಲ್ 14, 2022 ರಂದು ಬಹುಭಾಷೆಯಲ್ಲಿ ತೆರೆಗೆ ಬರಲಿದೆ.

  ಪ್ರಭಾಸ್ ನಟನೆಯ ರಾಧೇ ಶ್ಯಾಮ್ ಸಿನಿಮಾ ಜುಲೈ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಓಂ ರಾವತ್ ನಿರ್ದೇಶನದ ಆದಿಪುರುಷ್ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಈ ಚಿತ್ರ 2022ರ ಆಗಸ್ಟ್ 11 ರಂದು ರಿಲೀಸ್ ಆಗಲಿದೆ. ತಮಿಳಿನಲ್ಲಿ ಚಿಯಾನ್ ವಿಕ್ರಂ ನಟಿಸಿರುವ 'ಕೋಬ್ರಾ' ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ.

  English summary
  Kgf fame Srinidhi Shetty will do special dance In number in prabhas and prashanth neel's Salaar movie?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X