For Quick Alerts
  ALLOW NOTIFICATIONS  
  For Daily Alerts

  ಸುದೀಪ್ ತೊರೆದ 'ಕರ್ನಾಟಕ ಬುಲ್ಡೋಜರ್ಸ್' ನಾಯಕ ಸ್ಥಾನಕ್ಕೆ ಯುವ ನಟ.!

  |

  ಕಳೆದ ಆರು ವರ್ಷಗಳಿಂದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಡೆಯುತ್ತಿದ್ದು, ಆರು ಆವೃತ್ತಿಯಲ್ಲೂ ಕನ್ನಡ ಚಿತ್ರರಂಗದ ಪರವಾಗಿ 'ಕರ್ನಾಟಕ ಬುಲ್ಡೋಜರ್ಸ್' ತಂಡ ಭಾಗವಹಿಸಿದೆ. ಎರಡು ಭಾರಿ ಟೂರ್ನಿಯಲ್ಲಿ ವಿಜಯಶಾಲಿ ಕೂಡ ಆಗಿದೆ.

  ಈ ಹಿಂದಿನ ಎಲ್ಲಾ ಆವೃತ್ತಿಯಲ್ಲೂ ಕಿಚ್ಚ ಸುದೀಪ್ 'ಕರ್ನಾಟಕ ಬುಲ್ಡೋಜರ್ಸ್' ತಂಡದ ನಾಯಕರಾಗಿದ್ದರು. ಆದ್ರೀಗ, ಮುಂಬರುವ ಸೀಸನ್ ನಲ್ಲಿ ಸುದೀಪ್ ನಾಯಕತ್ವವನ್ನ ತೊರಯಲಿದ್ದಾರಂತೆ. ಹೀಗಂತ ಸುದ್ದಿಯೊಂದು ಸಿಸಿಲ್ ಬಳಗದಲ್ಲಿ ಜೋರಾಗಿ ಕೇಳಿಬರ್ತಿದೆ.

  ಕರ್ನಾಟಕ ಕ್ರಿಕೆಟರ್ಸ್ ಮತ್ತು ಕನ್ನಡ ಸಿನಿಮಾ ನಂಟು.!

  ಹಾಗಿದ್ರೆ, ಸುದೀಪ್ ನಂತರ 'ಕರ್ನಾಟಕ ಬುಲ್ಡೋಜರ್ಸ್' ತಂಡವನ್ನ ಮುನ್ನಡೆಸುವುದು ಯಾರು ಎಂಬ ಕುತೂಹಲಕ್ಕೆ ಕೂಡ ಸ್ವತಃ ಸುದೀಪ್ ಅವರೇ ಸೂಚಿಸಿದ್ದಾರಂತೆ. ಯಾರದು? ಮುಂದೆ ಓದಿ....

  .

  ಕ್ಯಾಪ್ಟನ್ ಪಟ್ಟ ಬಿಟ್ಟ ಸುದೀಪ್

  ಕ್ಯಾಪ್ಟನ್ ಪಟ್ಟ ಬಿಟ್ಟ ಸುದೀಪ್

  ಕಳೆದ ಆವೃತ್ತಿಯಿಂದಲೂ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿರುವ ಕಿಚ್ಚ ಸುದೀಪ್ ನಾಯಕತ್ವವನ್ನ ತೊರೆದಿದ್ದಾರಂತೆ. ಕ್ಯಾಪ್ಟನ್ ಷಿಪ್ ಬಿಟ್ಟು ಬರಿ ಆಟಗಾರನಾಗಿ ಮುಂದುವರಿಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬಟ್, ದಿಢೀರ್ ಅಂತ ಸುದೀಪ್ ನಾಯಕತ್ವ ತೊರೆಯಲು ಕಾರಣ ಮಾತ್ರ ಬಹಿರಂಗವಾಗಿಲ್ಲ.

  ಕ್ಯಾಪ್ಟನ್ ಸುದೀಪ್ ತುಂಬಾನೇ ಸ್ಟ್ರಿಕ್ಟ್: ಕಿಚ್ಚನನ್ನು ಕಂಡರೆ ತಂಡದಲ್ಲಿರುವವರಿಗೆ ನಡುಕ.!

  ಪ್ರದೀಪ್ ಗೆ ನಾಯಕತ್ವದ ಜವಾಬ್ದಾರಿ

  ಪ್ರದೀಪ್ ಗೆ ನಾಯಕತ್ವದ ಜವಾಬ್ದಾರಿ

  ಸುದೀಪ್ ಅವರಿಂದ ಖಾಲಿಯಾಗಲಿರುವ ಕ್ಯಾಪ್ಟನ್ ಪಟ್ಟಕ್ಕೆ ಕರ್ನಾಟಕ ಬುಲ್ಡೋಜರ್ಸ್ ತಂಡದ ಸ್ಟಾರ್ ಆಟಗಾರ ಹಾಗೂ ಆಲ್ ರೌಂಡರ್ ಪ್ರದೀಪ್ ಅವರು ಆಯ್ಕೆಯಾಗುವ ಸಾಧ್ಯತೆ ಇದೆಯಂತೆ. ಸುದೀಪ್ ನೇತೃತ್ವದ ತಂಡದಲ್ಲಿ ಪ್ರದೀಪ್ ಉತ್ತಮ ಪ್ರದರ್ಶನ ತೋರಿದ್ದು, ಸದ್ಯ ಉಪನಾಯಕನ ಸ್ಥಾನದಲ್ಲಿದ್ದಾರೆ. ಈಗ ಕ್ಯಾಪ್ಟನ್ ಆಗಿ ಪ್ರದೀಪ್ ಸ್ಥಾನ ಪಡೆದುಕೊಂಡರೇ, ರಾಜೀವ್ ಉಪನಾಯಕನಾಗಿ ಆಡುವ ಸಾಧ್ಯತೆ ಇದೆ.

  ಎರಡು ಬಾರಿ ವಿನ್ನರ್

  ಎರಡು ಬಾರಿ ವಿನ್ನರ್

  ಸುದೀಪ್ ನಾಯಕತ್ವದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಆರು ಸೀಸನ್ ಆಡಿದ್ದು, ಎರಡು ಬಾರಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಮೊದಲೆರಡು ಆವೃತ್ತಿಯಲ್ಲಿ ಫೈನಲ್ ಗೆ ಸೋತಿದ್ದ ಕರ್ನಾಟಕ ತಂಡ ನಂತರದ ಎರಡು ಆವೃತ್ತಿಯಲ್ಲಿ ಟ್ರೋಫಿ ಗೆದ್ದಿದ್ದರು. 2011, 2012 ಮತ್ತು 2017ರಲ್ಲಿ ರನ್ನರ್ ಅಪ್, 2013 ಮತ್ತು 2014 ವಿನ್ನರ್ ಆಗಿದ್ದರು. 2015ರಲ್ಲಿ ಸೆಮಿಫೈನಲ್ ಹಾಗೂ 2018ರಲ್ಲಿ ಗ್ರೂಪ್ ಹಂತದಲ್ಲಿ ಸೋತಿದ್ದರು.

  'ಸಿಸಿಎಲ್' ಟೂರ್ನಿಗೆ ಕಿಚ್ಚ ಸುದೀಪ್ ಭರ್ಜರಿ ತಯಾರಿ.!

  ಮುಂದಿನ ಆವೃತ್ತಿ ಯಾವಾಗ?

  ಮುಂದಿನ ಆವೃತ್ತಿ ಯಾವಾಗ?

  ಸದ್ಯ, ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಏಳು ಆವೃತ್ತಿಗಳು ನಡೆದಿದ್ದು, ಈ ವರ್ಷ ಏಂಟನೇ ಆವೃತ್ತಿ ನಡೆಯಲಿದೆ. ಕಳೆದ ವರ್ಷ ಒಟ್ಟು ಒಂಭತ್ತು ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದವು. ಮುಂಬೈ ಹೀರೋಸ್, ಬೆಂಗಾಲ್ ಟೈಗರ್ಸ್, ತೆಲುಗು ವಾರಿಯರ್ಸ್, ಕೇರಳ ಸ್ಟ್ರೈಕರ್ಸ್, ಚೆನ್ನೈ ರೈನೋಸ್, ಬೋಜ್ ಪುರಿ ದಬಾಂಗ್ಸ್, ಪಂಜಾಬ್ ದಿ ಶೇರ್, ವೀರ್ ಮರಾಠಿ ಹಾಗೂ ನಮ್ಮ ಕರ್ನಾಟಕ ಬುಲ್ಡೋಜರ್ಸ್ ತಂಡಗಳು ಟೂರ್ನಿ ಆಡಲಿದೆ. ಈ ವರ್ಷ ಐಪಿಎಲ್, ವಿಶ್ವಕಪ್ ಬಳಿಕ ಸಿಸಿಆಲ್ ನಡೆಯುವ ಸಾಧ್ಯತೆ ಇದೆ.

  English summary
  Kiccha sudeep has decided to resign captainship from karnataka bulldozers team for upcoming celebrity cricket league tournament.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X