For Quick Alerts
  ALLOW NOTIFICATIONS  
  For Daily Alerts

  'ಪುಷ್ಪ' ಚಿತ್ರಕ್ಕಾಗಿ ನಿರ್ದೇಶಕ ಸುಕುಮಾರ್‌ಗೆ ದಾಖಲೆಯ ಸಂಭಾವನೆ!

  |

  ಕೊರೊನಾ ವೈರಸ್ ಲಾಕ್‌ಡೌನ್ ಮುಗಿದ ಮೇಲೆ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಬೆಜೆಟ್ ಚಿತ್ರಗಳು ಕಡಿಮೆಯಾಗಬಹುದು. ಸ್ಟಾರ್ ನಟರ ಸಂಭಾವನೆಯಲ್ಲಿ ಕಡಿತ ಉಂಟಾಗಬಹುದು ಎಂದು ಹೇಳಲಾಗುತ್ತಿದೆ. ಆದರೆ, ಟಾಲಿವುಡ್‌ನಲ್ಲಿ ಇದ್ಯಾವುದು ನಡೆಯುವ ಸಾಧ್ಯತೆ ಇಲ್ಲ.

  ಅದಕ್ಕೆ ಉದಾಹರಣೆ ಅಲ್ಲು ಅರ್ಜುನ್ ನಟಿಸುತ್ತಿರುವ ಪುಷ್ಪ ಸಿನಿಮಾ. ಈ ಚಿತ್ರದ ನಿರ್ದೇಶನಕ್ಕಾಗಿ ಸುಕುಮಾರ್‌ಗೆ ನೀಡಲಾಗುತ್ತಿರುವ ಸಂಭಾವನೆ ಈಗ ಸಿನಿ ಜಗತ್ತಿಗೆ ಅಚ್ಚರಿ ತಂದಿದೆ. ಕೊರೊನಾ ಸಮಯದಲ್ಲೂ ಒಬ್ಬ ಡೈರೆಕ್ಟರ್‌ಗೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಸಿಗುತ್ತಿದೆ ಎಂದು ಆಶ್ಚರ್ಯದಿಂದ ನೋಡುವಂತಾಗಿದೆ. ಅಷ್ಟಕ್ಕೂ, ಅಲ್ಲು ಅರ್ಜುನ್ ಹೊಸ ಸಿನಿಮಾಗಾಗಿ ಸುಕುಮಾರ್ ಪಡೆದುಕೊಂಡಿರುವ ಸಂಭಾವನೆ ಎಷ್ಟು? ಮುಂದೆ ಓದಿ...

  ಸುಕುಮಾರ್ ಸಂಭಾವನೆ ಎಷ್ಟು?

  ಸುಕುಮಾರ್ ಸಂಭಾವನೆ ಎಷ್ಟು?

  'ರಂಗಸ್ಥಳಂ' ಸಿನಿಮಾದ ಸೂಪರ್ ಸಕ್ಸಸ್ ಬಳಿಕ 'ಪುಷ್ಪ' ಚಿತ್ರವನ್ನು ಕೈಗೆತ್ತಿಕೊಂಡಿರುವ ಸುಕುಮಾರ್‌ಗೆ, ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ 20 ಕೋಟಿ ಸಂಭಾವನೆ ನೀಡಿದೆಯಂತೆ. ಲಾಕ್‌ಡೌನ್‌ಗೂ ಮೊದಲೇ ಹೊಸ ಚಿತ್ರದ ಸಂಭಾವನೆ ಫಿಕ್ಸ್ ಮಾಡಲಾಗಿತ್ತಂತೆ. ಹಾಗಾಗಿ, ಈ ಹಿಂದೆ ನಿಗದಿಪಡಿಸಿದ ಹಣವನ್ನು ನೀಡುತ್ತಿದ್ದಾರೆ ನಿರ್ಮಾಪಕರು ಎನ್ನಲಾಗಿದೆ.

  'ಡಿ-ಬಾಸ್' ಭಕ್ತರಿಗೆ ಭರ್ಜರಿ ಸುದ್ದಿ: ದರ್ಶನ್ ಭೇಟಿ ಮಾಡಿದ 'ರಂಗಸ್ಥಳಂ' ನಿರ್ದೇಶಕ ಸುಕುಮಾರ್'ಡಿ-ಬಾಸ್' ಭಕ್ತರಿಗೆ ಭರ್ಜರಿ ಸುದ್ದಿ: ದರ್ಶನ್ ಭೇಟಿ ಮಾಡಿದ 'ರಂಗಸ್ಥಳಂ' ನಿರ್ದೇಶಕ ಸುಕುಮಾರ್

  ಅಲ್ಲು ಅರ್ಜುನ್ ಸಂಭಾವನೆ ಎಷ್ಟು?

  ಅಲ್ಲು ಅರ್ಜುನ್ ಸಂಭಾವನೆ ಎಷ್ಟು?

  'ಪುಷ್ಪ' ಚಿತ್ರಕ್ಕಾಗಿ ಅಲ್ಲು ಅರ್ಜುನ್ ಸಹ ದೊಡ್ಡ ಮೊತ್ತದ ಸಂಭಾವನೆ ಪಡೆದುಕೊಂಡಿದ್ದಾರೆ. ಮೂಲಗಳ ಪ್ರಕಾರ 35 ಕೋಟಿ ಸಂಭಾವನೆ ಓಕೆ ಆಗಿದೆಯಂತೆ. ಇದಕ್ಕೂ ಮುಂಚೆ ತೆರೆಕಂಡಿದ್ದ 'ಅಲಾ ವೈಕುಂಠಪುರಂಲೋ' ಚಿತ್ರದಲ್ಲಿ 25 ಕೋಟಿ ಸಂಭಾವನೆ ಪಡೆದುಕೊಂಡಿದ್ದರು. ಆ ಚಿತ್ರದ ಮೆಗಾ ಹಿಟ್ ಬಳಿಕ ಮತ್ತೆ ಸ್ಟೈಲಿಶ್ ಸ್ಟಾರ್ ಸಂಭಾವನೆ ಏರಿಕೆಯಾಗಿದೆ.

  ಸಂಭಾವನೆ ಇಳಿಕೆ ಬಗ್ಗೆ ನಟ ಚಿಂತನೆ

  ಸಂಭಾವನೆ ಇಳಿಕೆ ಬಗ್ಗೆ ನಟ ಚಿಂತನೆ

  ಲಾಕ್‌ಡೌನ್‌ಗೂ ಹಿಂದೆ ಈ ಸಿನಿಮಾ ಒಪ್ಪಂದ ಆಗಿದ್ದ ಕಾರಣ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದರು. ಆದರೆ, ಲಾಕ್‌ಡೌನ್‌ನಿಂದ ನಿರ್ಮಾಪಕರು ನಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ಅಲ್ಲು ಅರ್ಜುನ್ ತಮ್ಮ ಸಂಭಾವನೆ ಕಡಿಮೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಸಹ ತೆಲುಗು ಮಾಯಾನಗರಿಯಲ್ಲಿ ಚರ್ಚೆಯಾಗುತ್ತಿದೆ.

  ಒಂದೇ ಸ್ಟೆಪ್ ಹಾಕಿದ ಅಪ್ಪು-ಅಲ್ಲು ಅರ್ಜುನ್, ಯಾರಿಗೆ ಸಿಕ್ತು ಬಹುಪರಾಕ್?ಒಂದೇ ಸ್ಟೆಪ್ ಹಾಕಿದ ಅಪ್ಪು-ಅಲ್ಲು ಅರ್ಜುನ್, ಯಾರಿಗೆ ಸಿಕ್ತು ಬಹುಪರಾಕ್?

  ಸಿನಿಮಾ ಆರಂಭಕ್ಕೂ ಮುನ್ನವೇ 30 ಕೋಟಿ ಖರ್ಚು!

  ಸಿನಿಮಾ ಆರಂಭಕ್ಕೂ ಮುನ್ನವೇ 30 ಕೋಟಿ ಖರ್ಚು!

  'ಪುಷ್ಪ' ಚಿತ್ರದ ಫೋಟೋಶೂಟ್ ಮುಗಿದಿದೆ. ರೌಡಿ ಶೀಟರ್ ಒಬ್ಬನ ಕಥೆ ಇದಾಗಿದ್ದು, ಅಲ್ಲು ಅರ್ಜುನ್ ಬಹಳ ಲೋಕಲ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಸಿನಿಮಾ ಶೂಟಿಂಗ್ ಆರಂಭವಾಗುವುದಕ್ಕೂ ಮೊದಲೇ ತಂತ್ರಜ್ಞರಿಗೆ 30 ಕೋಟಿ ಸಂಭಾವನೆ ನೀಡಲಾಗಿದೆಯಂತೆ.

  ಹಿಟ್ ಚಿತ್ರಗಳ ಸರದಾರ ಸುಕುಮಾರ್

  ಹಿಟ್ ಚಿತ್ರಗಳ ಸರದಾರ ಸುಕುಮಾರ್

  ಅಲ್ಲು ಅರ್ಜುನ್ ಅಭಿನಯಿಸಿದ್ದ 'ಆರ್ಯ' ಚಿತ್ರದ ಮೂಲಕ ಡೈರೆಕ್ಷನ್ ಆರಂಭಿಸಿದ್ದ ಸುಕುಮಾರ್, 'ಆರ್ಯ 2', '100% ಲವ್', 'ನೇನೊಕ್ಕಡೆ', 'ಕುಮಾರಿ 21 ಎಫ್', 'ನಾನ್ನಕೂ ಪ್ರೇಮತೋ', 'ರಂಗಸ್ಥಳಂ' ಅಂತಹ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ.

  English summary
  Telugu director Sukumar taking very big remuneration for allu arjun's pushpa movie. the film producing by Mythri movie makers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X