»   » ತಮಿಳು-ತೆಲುಗಿನಲ್ಲು ಸದ್ದು ಮಾಡಲಿದೆಯಾ ಶಿವಣ್ಣನ 'ಶಿವಲಿಂಗ'

ತಮಿಳು-ತೆಲುಗಿನಲ್ಲು ಸದ್ದು ಮಾಡಲಿದೆಯಾ ಶಿವಣ್ಣನ 'ಶಿವಲಿಂಗ'

Posted By:
Subscribe to Filmibeat Kannada

ಪ್ರತಿಭಾವಂತ ನಿರ್ದೇಶಕ ಪಿ.ವಾಸು ಆಕ್ಷನ್-ಕಟ್ ಹೇಳಿದ್ದ ಹಿಟ್ ಸಿನಿಮಾ 'ಶಿವಲಿಂಗ' ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಇದೀಗ ತಮಿಳು ಮತ್ತು ತೆಲುಗು ಭಾಷೆಗೆ ರೀಮೇಕ್ ಆಗುತ್ತಿದೆ ಎಂದು ಅಲ್ಲಲ್ಲಿ ಸುದ್ದಿಯಾಗಿದೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಟಿ ವೇದಿಕಾ ಅವರು ಇದೇ ಮೊದಲ ಬಾರಿಗೆ ಒಂದಾಗಿ ಕಾಣಿಸಿಕೊಂಡಿದ್ದ 'ಶಿವಲಿಂಗ' ಸಿನಿಮಾ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಅಲ್ಲದೇ ನಿರ್ದೇಶಕ ಪಿ.ವಾಸು ಅವರ ಮಗ ನಟ ಶಕ್ತಿ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿ ಪ್ರೇಕ್ಷಕರನ್ನು ಥ್ರಿಲ್ಲಾಗಿಸಿದ್ದು ಚಿತ್ರದ ಮತ್ತೊಂದು ವಿಶೇಷ.['ಶಿವಲಿಂಗ'ದಲ್ಲಿ ರಹೀಂ ಪಾತ್ರ ಮಾಡಿದವರು ಯಾರು ಗೊತ್ತಾ?]


Superstar Rajinikanth and Nagarjuna To Remake Shivalinga

ಇದೀಗ 'ಶಿವಲಿಂಗ' ಚಿತ್ರದ ಲೇಟೆಸ್ಟ್ ಮಾಹಿತಿ ಏನಪ್ಪಾ ಅಂದ್ರೆ, ಕನ್ನಡದಲ್ಲಿ ಯಶಸ್ವಿಯಾದ ಈ ಸಿನಿಮಾ ಇದೀಗ ತಮಿಳು ಮತ್ತು ತೆಲುಗು ಭಾಷೆಗೆ ರೀಮೇಕ್ ಆಗಲಿದ್ದು, ತಮಿಳಿನಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ಮತ್ತು ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ್ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ.


Superstar Rajinikanth and Nagarjauna To Remake Shivalinga

ಈ ಮೊದಲು ಕನ್ನಡದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದ, ಡಾ.ವಿಷ್ಣುವರ್ಧನ್, ರಮೇಶ್ ಅರವಿಂದ್ ಮತ್ತು ನಟಿ ಸೌಂದರ್ಯ ಅವರು ಕಾಣಿಸಿಕೊಂಡಿದ್ದ 'ಆಪ್ತಮಿತ್ರ' ತೆಲುಗು ಮತ್ತು ತಮಿಳಿನಲ್ಲಿ ರೀಮೇಕ್ ಆಗಿ 'ಚಂದ್ರಮುಖಿ' ಎಂದಾಗಿತ್ತು. ಚಿತ್ರದಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಮಿಂಚಿದ್ದರು. ಅಲ್ಲೂ ಸಿನಿಮಾ ಒಳ್ಳೆ ಗಳಿಕೆ ಮಾಡಿತ್ತು.['ಶಿವಲಿಂಗ' ವಿಮರ್ಶೆ; ಪಿ.ವಾಸು ನಿರ್ದೇಶನದ ಮತ್ತೊಂದು 'ಆಪ್ತಮಿತ್ರ']


Superstar Rajinikanth and Nagarjauna To Remake Shivalinga

ತದನಂತರ ಪಿ.ವಾಸು ಅವರದೇ ಆಕ್ಷನ್-ಕಟ್ ನಲ್ಲಿ ಮೂಡಿಬಂದಿದ್ದ 'ಆಪ್ತರಕ್ಷಕ' ಸಿನಿಮಾ ಕೂಡ ತೆಲುಗಿಗೆ 'ನಾಗವಲ್ಲಿ' ಎಂಬ ಹೆಸರಿನಲ್ಲಿ ರೀಮೇಕ್ ಆಗಿತ್ತು. ಕನ್ನಡದಲ್ಲಿ ಡಾ.ವಿಷ್ಣುವರ್ಧನ್, ವಿಮಲಾ ರಾಮನ್ ಮತ್ತು ತೆಲುಗು ನಟಿ ಸಂಧ್ಯಾ ಮಿಂಚಿದರೆ, ತೆಲುಗಿನಲ್ಲಿ ವಿಕ್ಟರಿ ವೆಂಕಟೇಶ್ ಪ್ರಮುಖ ಪಾತ್ರ ವಹಿಸಿದ್ದರು.


ತದನಂತರ ವಾಸು ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ 'ದೃಶ್ಯ' ಸಿನಿಮಾ ಕೂಡ ತೆಲುಗಿಗೆ ರೀಮೇಕ್ ಆಗಿರುವ ವಿಚಾರ ನಿಮಗೆ ಗೊತ್ತೇ ಇದೆ. ಕನ್ನಡದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ಈ ಸಿನಿಮಾ ಭರ್ಜರಿ ಬ್ರೇಕ್ ಕೊಟ್ಟಿತ್ತು.['ಶಿವಲಿಂಗ' ಹೇಗಿದೆ ಟ್ವಿಟ್ಟರ್ ನಲ್ಲಿ ಪ್ರಥಮ ವಿಮರ್ಶೆ]


Superstar Rajinikanth and Nagarjauna To Remake Shivalinga

ಅದೇನೇ ಇರಲಿ ಸದ್ಯಕ್ಕೆ 'ಶಿವಲಿಂಗ' ಸಿನಿಮಾ ಕೂಡ ಪರಭಾಷೆಗೆ ರೀಮೇಕ್ ಆಗುತ್ತಿದೆ ಎಂದು ಸುದ್ದಿಯಾಗಿದ್ದು, ಈ ಸುದ್ದಿ ನಿಜಾನೋ ಸುಳ್ಳೋ ಎಂಬುದು ಸದ್ಯದಲ್ಲೇ ತಿಳಿದು ಬರಲಿದೆ.

English summary
Kannada Movie 'Shivalinga' will be soon remade in Telugu & Tamil languages. Actors Superstar Rajnikanth & Akkineni Nagarjuna will be starring in the official remake of Shivalinga in Tamil & Telugu languages respectively. Directed by P Vasu, Shivalinga is a horror-thriller starring Hatrick Hero Shivarajkumar, Vedhika & Sakti Vasudevan in lead roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada