For Quick Alerts
  ALLOW NOTIFICATIONS  
  For Daily Alerts

  ಫಾರಿನ್ ಗೆಳೆಯನ ಜೊತೆ ಡೇಟ್ ಮಾಡ್ತಿದ್ದಾರಂತೆ ನಟಿ ತಾಪ್ಸಿ.!

  By Bharath Kumar
  |

  ತೆಲುಗು, ತಮಿಳು ಚಿತ್ರಗಳಲ್ಲಿ ವೃತ್ತಿ ಜೀವನ ಆರಂಭಿಸಿ ಈಗ ಬಾಲಿವುಡ್ ನಲ್ಲಿ ನೆಲೆ ನಿಂತಿರುವ ನಟಿ ತಾಪ್ಸಿ ಪನ್ನು ಬಾಯ್ ಫ್ರೆಂಡ್ ಜೊತೆ ಡಿನ್ನರ್ ಪಾರ್ಟಿಗೆ ಹೋಗಿ ಸುದ್ದಿಯಾಗಿದ್ದಾರೆ.

  ಡೆನ್ಮಾರ್ಕ್ ಮೂಲಕ ಮ್ಯಾಥೀಸ್ ಬೋ ಎಂಬುವವರ ಜೊತೆಯಲ್ಲಿ ತಾಪ್ಸಿ ಡೇಟಿಂಗ್ ನಲ್ಲಿದ್ದಾರೆ ಎನ್ನಲಾಗಿದೆ. ಕಳೆದ ಕೆಲವು ವರ್ಷಗಳಿಂದ ಇಬ್ಬರು ಸಾರ್ವಜನಿಕವಾಗಿ ಹಲವು ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ, ಇಬ್ಬರು ತಮ್ಮ ಸಂಬಂಧವನ್ನ ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದಾರೆ.

  ಐಶ್ವರ್ಯ ರೈ ಬಚ್ಚನ್ ಗೆ ಇದು ಕೆಟ್ಟಕಾಲ ಇರಬಹುದು.!ಐಶ್ವರ್ಯ ರೈ ಬಚ್ಚನ್ ಗೆ ಇದು ಕೆಟ್ಟಕಾಲ ಇರಬಹುದು.!

  ಈ ಬಗ್ಗೆ ಖಾಸಗಿ ವೆಬ್ ಸೈಟ್ ವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ತಾಪ್ಸಿ, ''ನಾನು ಒಬ್ಬ ವ್ಯಕ್ತಿ ಜೊತೆ ರಿಲೆಷನ್ ಷಿಪ್ ನಲ್ಲಿದ್ದೇನೆ. ಆದ್ರೆ, ಆ ವ್ಯಕ್ತಿ ಬಗ್ಗೆ ನಾನು ಈಗಲೇ ಹೇಳಲು ಸಾಧ್ಯವಿಲ್ಲ. ಸಮಯ ಬಂದಾಗ ನಾನೇ ಹೇಳುತ್ತೇನೆ'' ಎಂದು ಹೇಳಿದ್ದಾರೆ.

  ಅಂದ್ಹಾಗೆ, ಮ್ಯಾಥೀಸ್ ಬೋ ಬೇರೆ ಯಾರು ಅಲ್ಲ. ಒಲಂಪಿಕ್ ನಲ್ಲಿ ಬೆಳ್ಳಿಪದಕ ಗೆದ್ದುಕೊಂಡಿರುವ ಬ್ಯಾಡ್ಮಿಂಟನ್ ಕ್ರೀಡಾಪಟು. ಇತ್ತೀಗಷ್ಟೇ ಇಬ್ಬರು ಡಿನ್ನರ್ ಗೆ ಅಂತ ಬಂದಾಗ ಕ್ಯಾಮೆರಾಗೆ ಸೆರೆಯಾಗಿದ್ದಾರೆ.

  Taapsee Pannu date with boyfriend Mathias Boe

  ಸದ್ಯ, ಬಿಟೌನ್ ನಲ್ಲಿ ಭಾರಿ ಬೇಡಿಕೆಯಲ್ಲಿರುವ ತಾಪ್ಸಿ, ಅನುರಾಗ್ ಕಶ್ಯಪ್ ಅವರ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ವಿಕ್ಕಿ ಕೌಶಲ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಸೆಪ್ಟಂಬರ್ 14 ರಂದು ಈ ಸಿನಿಮಾ ತೆರೆಕಾಣುತ್ತಿದೆ.

  English summary
  Taapsee Pannu has been in a relationship with Olympic silver medallist badminton player Mathias Boe, who hails from Denmark, for a few years now.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X