»   » ಓಹೋ.! 'ಜಾಗ್ವಾರ್' ನಿರ್ಮಾಪಕರ ತಲೆಯಲ್ಲಿ ಇವ್ರೂ ಇದ್ದಾರೆ.!

ಓಹೋ.! 'ಜಾಗ್ವಾರ್' ನಿರ್ಮಾಪಕರ ತಲೆಯಲ್ಲಿ ಇವ್ರೂ ಇದ್ದಾರೆ.!

Posted By:
Subscribe to Filmibeat Kannada

ತಮ್ಮ ಸುಪುತ್ರ ನಿಖಿಲ್ ಕುಮಾರ್ ಅಭಿನಯದ ಚೊಚ್ಚಲ ಚಿತ್ರಕ್ಕೆ ಯಾವುದಕ್ಕೂ ಕೊರತೆ ಬಾರದ ಹಾಗೆ, ಧಮಾಕೇಧಾರ್ ಆಗಿ 'ಜಾಗ್ವಾರ್' ಚಿತ್ರವನ್ನ ತಯಾರು ಮಾಡುತ್ತಿದ್ದಾರೆ ನಿರ್ಮಾಪಕ ಕಮ್ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ.

ತೆಲುಗು ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ರೆಡಿ ಆಗುತ್ತಿರುವ 'ಜಾಗ್ವಾರ್' ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲ, ಟಾಲಿವುಡ್ ನಲ್ಲೂ ಸಿಕ್ಕಾಪಟ್ಟೆ ಸದ್ದು-ಸುದ್ದಿ ಮಾಡುತ್ತಿದೆ. ['ಜಾಗ್ವಾರ್' ಚಿತ್ರದ ಈ ಸುದ್ದಿ ಕೇಳಿದ್ರೆ, ನೀವು ತಲೆ ತಿರುಗಿ ಬೀಳ್ತೀರಾ!]


ಈಗಾಗಲೇ ರಿಲೀಸ್ ಆಗಿರುವ 'ಜಾಗ್ವಾರ್' ಟೀಸರ್ ಮತ್ತು ಮೇಕಿಂಗ್ ನಲ್ಲಿ ಆಕ್ಷನ್ ಎದ್ದು ಕಾಣ್ತಿದೆ. ಸಾಹಸ ಪ್ರಿಯರಿಗೆ ರಸದೌತಣ ಎಂದು ಭಾವಿಸಿರುವ 'ಜಾಗ್ವಾರ್' ಚಿತ್ರದಲ್ಲಿ ಪಡ್ಡೆ ಹೈಕ್ಳ ಮನತಣಿಯುವ ಒಂದು ಹಾಡು ಕೂಡ ಇದೆ. ಮುಂದೆ ಓದಿ....


'ಜಾಗ್ವಾರ್' ಚಿತ್ರದಲ್ಲಿದೆ ಬೊಂಬಾಟ್ ಐಟಂ ಸಾಂಗ್

ಸದಭಿರುಚಿಯ ಚಿತ್ರಗಳ ನಿರ್ಮಾಣಕ್ಕೆ ಹೆಸರಾಗಿರುವ ಎಚ್.ಡಿ.ಕುಮಾರಸ್ವಾಮಿ ಹೋಮ್ ಬ್ಯಾನರ್ ನಿಂದ ತಯಾರಾಗಿರುವ 'ಜಾಗ್ವಾರ್' ಚಿತ್ರದಲ್ಲಿ ಒಂದು ಕಲರ್ ಫುಲ್ ಐಟಂ ಸಾಂಗ್ ಇದೆ. ಅದರಲ್ಲಿ ಸೊಂಟ ಬಳುಕಿಸಲು ಬರುತ್ತಿರುವವರು.....


ಸೊಂಟ ಬಳುಕಿಸುತ್ತಾರಾ ನಟಿ ತಮನ್ನಾ?

ಮೂಲಗಳ ಪ್ರಕಾರ, 'ಜಾಗ್ವಾರ್' ಚಿತ್ರದ ಐಟಂ ಸಾಂಗ್ ಗೆ ನಟಿ ತಮನ್ನಾ ಹೆಜ್ಜೆ ಹಾಕಲಿದ್ದಾರೆ.


ತಮನ್ನಾಗೆ ಐಟಂ ಸಾಂಗ್ ಹೊಸದಲ್ಲ.!

ಈಗಾಗಲೇ ಕೆಲ ತೆಲುಗು ಚಿತ್ರಗಳಿಗಾಗಿ ತಮನ್ನಾ 'ಐಟಂ ಗರ್ಲ್' ಆಗಿದ್ದಾರೆ. ಹೀಗಾಗಿ, ತೆಲುಗಿನಲ್ಲೂ ತಯಾರಾಗುತ್ತಿರುವ 'ಜಾಗ್ವಾರ್' ಚಿತ್ರಕ್ಕೆ ತಮನ್ನಾ ಓಕೆ ಅಂದರೂ ಅಚ್ಚರಿ ಇಲ್ಲ.


ರಾಜಮೌಳಿಗೆ ತಮನ್ನಾ ಫ್ರೆಂಡ್

ಹೇಳಿ ಕೇಳಿ, ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರಕ್ಕೆ ತಮನ್ನಾ ನಾಯಕಿ. ಇನ್ನೂ 'ಜಾಗ್ವಾರ್' ಚಿತ್ರಕ್ಕೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ರಚಿಸಿದ್ದರೆ, ಅದೇ ರಾಜಮೌಳಿ ಶಿಷ್ಯ ಮಹದೇವ್ ಆಕ್ಷನ್ ಕಟ್ ಹೇಳ್ತಿದ್ದಾರೆ. ಹೀಗಾಗಿ, 'ಜಾಗ್ವಾರ್' ಚಿತ್ರದ ಐಟಂ ಸಾಂಗ್ ಗೆ ತಮನ್ನಾ ರವರನ್ನ ಒಪ್ಪಿಸುವುದು ಕಷ್ಟದ ಕೆಲಸವಲ್ಲ.


ಹೈದರಾಬಾದ್ ನಲ್ಲಿ ಶೂಟಿಂಗ್?

'ಜಾಗ್ವಾರ್' ಅಡ್ಡದಿಂದ ಬಂದಿರುವ ಮಾಹಿತಿ ಪ್ರಕಾರ, ತಮನ್ನಾ ಕುಣಿದು ಕುಪ್ಪಳಿಸುವ ಐಟಂ ಸಾಂಗ್ ನ ಚಿತ್ರೀಕರಣ ಹೈದರಾಬಾದ್ ನಲ್ಲಿ ಸೆಪ್ಟೆಂಬರ್ 10 ರ ಬಳಿಕ ನಡೆಯಲಿದೆ.


ಶ್ರುತಿ ಹಾಸನ್ ಹೆಸರು ಕೇಳಿ ಬಂದಿತ್ತು.!

ಇದೇ ಹಾಡಿಗೆ ನಟಿ ಶ್ರುತಿ ಹಾಸನ್ ಹೆಜ್ಜೆ ಹಾಕಲಿದ್ದಾರೆ ಅಂತ ಕೆಲವೇ ದಿನಗಳ ಹಿಂದೆ ಸುದ್ದಿ ಆಗಿತ್ತು. [ಎಲ್ಲಾ ಓಕೆ 'ಜಾಗ್ವಾರ್' ನಲ್ಲಿ ಶ್ರುತಿ ಹಾಸನ್ ಯಾಕೆ.?]


ಲಿಸ್ಟ್ ನಲ್ಲಿ ಕತ್ರಿನಾ ಕೈಫ್ ಹೆಸರೂ ಇತ್ತು.!

'ಜಾಗ್ವಾರ್' ಚಿತ್ರದ ಐಟಂ ಗರ್ಲ್ ಲಿಸ್ಟ್ ನಲ್ಲಿ ಕತ್ರಿನಾ ಕೈಫ್ ಹೆಸರೂ ಇತ್ತು. [ನಿಖಿಲ್ 'ಜಾಗ್ವಾರ್' ನಲ್ಲಿ ಸೊಂಟ ಬಳುಕಿಸಲು ಕ್ಯಾಟ್ ಬರ್ತಾರಂತೆ.!]


ಈಗ ತಮನ್ನಾ ಭಾಟಿಯಾ

ಈಗ 'ಜಾಗ್ವಾರ್' ಚಿತ್ರದ ನಿರ್ಮಾಪಕ/ನಿರ್ದೇಶಕರ ಕಣ್ಣು ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮೇಲೆ ಬಿದ್ದಿದೆ.


ಸೆಪ್ಟೆಂಬರ್ 2 ರಂದು ಆಡಿಯೋ ರಿಲೀಸ್

ಸೆಪ್ಟೆಂಬರ್ 2 ರಂದು ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ 'ಜಾಗ್ವಾರ್' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಡೆಯಲಿದೆ.


ತಾರಾಗಣ

'ಜಾಗ್ವಾರ್' ಚಿತ್ರದಲ್ಲಿ ನಿಖಿಲ್ ಕುಮಾರ್ ಗೆ ದೀಪ್ತಿ ಸತಿ ನಾಯಕಿ. ನಟ ಜಗಪತಿ ಬಾಬು, ರಮ್ಯಾಕೃಷ್ಣ, ಸೌರವ್ ಲೋಕೇಶ್, ಸಂಪತ್ ರಾಜ್, ಸಾಧು ಕೋಕಿಲ ಸೇರಿದಂತೆ ಹಲವರು ತಾರಾಬಳಗದಲ್ಲಿ ಇದ್ದಾರೆ.


English summary
According to the latest buzz, Actress Tammannaah Bhatia will be appearing in a item song in Nikhil Kumar, son of EX CM H.D.Kumaraswamy starrer 'Jaguar'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada