For Quick Alerts
  ALLOW NOTIFICATIONS  
  For Daily Alerts

  ಪಾಕ್ ಕ್ರಿಕೆಟಿಗನ ಜೊತೆ ತಮನ್ನಾ ಚಿತ್ರ ವೈರಲ್: ಏನೇನೋ ಊಹಾಪೋಹ

  |

  ಭಾರತೀಯ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ನಂತರ ಚಿತ್ರನಟಿ ತಮನ್ನಾ ಭಾಟಿಯಾ ಪಾಕಿಸ್ತಾನಿ ಕ್ರಿಕೆಟರ್ ಜೊತೆ ವಿವಾಹವಾಗಲಿದ್ದಾರೆಯೇ?

  ತಮನ್ನಾ ಅವರ ಪ್ರತಿನಿತ್ಯದ ಫುಡ್ ಸ್ಟೈಲ್ ಹೇಗಿರುತ್ತೆ ? | TAMANNAAH | FILMIBEAT KANNADA

  ಹೀಗೊಂದು ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಎದ್ದಿದೆ. ಇದಕ್ಕೆ ಕಾರಣ ಪಾಕಿಸ್ತಾನಿ ಕ್ರಿಕೆಟಿಗನ ಜೊತೆ ತಮನ್ನಾ ಭಾಟಿಯಾ ಇರುವ ಚಿತ್ರವೊಂದು ಇದ್ದಕ್ಕಿದ್ದಂತೆ ವೈರಲ್ ಆಗಿದೆ.

  ಪಾಕಿಸ್ತಾನಿ ಕ್ರಿಕೆಟಿಗ ಅಬ್ದುಲ್ ರಜಾಕ್ ಮತ್ತು ತಮನ್ನಾ ಭಾಟಿಯಾ ಒಟ್ಟಿಗೆ ಇರುವ ಚಿತ್ರವೊಂದು ವೈರಲ್ ಆಗಿದ್ದು, ತಮನ್ನಾ ಭಾಟಿಯಾ ಪಾಕಿಸ್ತಾನಿ ಕ್ರಿಕೆಟರ್ ಅನ್ನು ಮದುವೆ ಆಗುತ್ತಾರೆಯೇ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಸತ್ಯ ಬೇರೆಯೇ ಇದೆ.

  ತಮನ್ನಾ ಭಾಟಿಯಾ-ಅಬ್ದುಲ್ ರಜಾಕ್ ಚಿತ್ರ

  ತಮನ್ನಾ ಭಾಟಿಯಾ-ಅಬ್ದುಲ್ ರಜಾಕ್ ಚಿತ್ರ

  ವೈರಲ್ ಆಗಿರುವ ಚಿತ್ರದಲ್ಲಿ ಅಬ್ದುಲ್ ರಜಾಕ್ ಮತ್ತು ತಮನ್ನಾ ಭಾಟಿಯಾ ಚಿನ್ನದ ಆಭರಣಗಳನ್ನು ಹಿಡಿದುಕೊಂಡು ನಿಂತಿರುವುದು ಕಾಣುತ್ತದೆ. ಇದನ್ನು ಹೊರತುಪಡಿಸಿದರೆ ಅಂತಹಾ ಅನುಮಾನ ಪಡುವಂತಹದ್ದು ಚಿತ್ರದಲ್ಲಿ ಇನ್ನೇನೂ ಕಾಣುವುದಿಲ್ಲ.

  ಈ ಚಿತ್ರ ಬಹಳ ಹಳೆಯದ್ದು

  ಈ ಚಿತ್ರ ಬಹಳ ಹಳೆಯದ್ದು

  ಸತ್ಯವೆಂದರೆ ಈ ಚಿತ್ರ ಬಹಳ ಹಳೆಯದ್ದು, ತಮನ್ನಾ ಭಾಟಿಯಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಅಬ್ದುಲ್ ರಜಾಕ್ ಒಟ್ಟಿಗೆ ಆಭರಣ ಮಳಿಗೆಯೊಂದರ ಉದ್ಘಾಟನೆಗೆ ತೆರಳಿದ್ದರು. ಆ ಚಿತ್ರವೇ ಈಗ ಮತ್ತೊಮ್ಮೆ ವೈರಲ್ ಆಗಿದೆ. ಈ ಹಿಂದೆಯೂ ಇದೇ ಚಿತ್ರ ವೈರಲ್ ಇದೇ ರೀತಿ ಮದುವೆ ಸುದ್ದಿಗಳು ಹರಿದಾಡಿದ್ದವು.

  ತಮನ್ನಾ ಭಾಟಿಯಾ ಮದುವೆ ಸುದ್ದಿ

  ತಮನ್ನಾ ಭಾಟಿಯಾ ಮದುವೆ ಸುದ್ದಿ

  ತಮನ್ನಾ ಭಾಟಿಯಾ ಮದುವೆ ಬಗ್ಗೆ ಈ ಹಿಂದೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಅಮೆರಿಕ ಮೂಲದ ವೈದ್ಯನೊಬ್ಬನನ್ನು ಮದುವೆ ಆಗಲಿದ್ದಾರೆ ಎನ್ನಲಾಗಿತ್ತು, ಬಾಹುಬಲಿ ಚಿತ್ರೀಕರಣ ಸಂದರ್ಭದಲ್ಲಿ ರಾಣಾ ದಗ್ಗುಬಾಟಿ ಜೊತೆ ತಮನ್ನಾ ಹೆಸರು ಕೇಳಿಬಂದಿತ್ತು. ಆದರೆ ಅದೆಲ್ಲವನ್ನೂ ಅವರು ನಿರಾಕರಿಸಿದ್ದಾರೆ.

  ಹಲವು ಸಿನಿಮಾಗಳಲ್ಲಿ ತಮನ್ನಾ ಬ್ಯುಸಿ

  ಹಲವು ಸಿನಿಮಾಗಳಲ್ಲಿ ತಮನ್ನಾ ಬ್ಯುಸಿ

  ತಮನ್ನಾ ಭಾಟಿಯಾ ಸದ್ಯಕ್ಕೆ ತೆಲುಗಿನಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಸೀಟಿಮಾರ್ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಇತ್ತೀಚೆಗೆ ಬಾಲಕೃಷ್ಣ ಸಿನಿಮಾವನ್ನು ನಿರಾಕರಿಸಿದ್ದು ಬಹು ಸುದ್ದಿಯಾಗಿತ್ತು.

  English summary
  Actress Tamannah Bhatiya rummer to marry Pakistani cricketer. But Heroine clarifies about the rumor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X