»   » ಸ್ಯಾಂಡಲ್ ವುಡ್ ಗೆ ಮತ್ತೊಬ್ಬ 'ಬೆತ್ತಲೆ' ಹೀರೋ ಎಂಟ್ರಿ!

ಸ್ಯಾಂಡಲ್ ವುಡ್ ಗೆ ಮತ್ತೊಬ್ಬ 'ಬೆತ್ತಲೆ' ಹೀರೋ ಎಂಟ್ರಿ!

Posted By: ಹರಾ
Subscribe to Filmibeat Kannada

ಒಂದ್ಕಾಲ ಇತ್ತು, ಹೀರೋಯಿನ್ ಗಳನ್ನು 'ಅರೆಬೆತ್ತಲೆ' ಮಾಡಿ 'ಗ್ಲಾಮರ್' ಅನ್ನುವ ಟೈಟಲ್ ಕೊಟ್ಟು ತೆರೆಮೇಲೆ ಕಲರ್ ಫುಲ್ ಆಗಿ ತೋರಿಸಿದರೆ, ಸಿನಿಮಾ ಸೂಪರ್ ಹಿಟ್ ಅನ್ನುವ ಫಾರ್ಮುಲಾ ಚಾಲ್ತಿಯಲ್ಲಿತ್ತು.

ಆದ್ರೀಗ ಕಾಲ ಬದಲಾಗಿದೆ. ಹೀರೋಯಿನ್ ಗಳು ಮಾತ್ರ ಅಲ್ಲ. ಒಂದು ಸಿನಿಮಾ ಗಲ್ಲಿಗಲ್ಲಿಯಲ್ಲೂ ಸದ್ದು ಮಾಡಬೇಕು ಅಂದ್ರೆ ಹೀರೋಗಳೂ ಬೆತ್ತಲಾಗಬೇಕು! ಇಂಥ ಗಿಮಿಕ್ ಗಳಿಂದ ಸಿನಿಮಾ ಹಿಟ್ ಆಗುತ್ತೋ ಬಿಡುತ್ತೋ, ಆದ್ರೆ ಬಿಟ್ಟಿ ಪ್ರಚಾರ ಸಿಗುವುದು ಖಚಿತ.

ಅದಕ್ಕೋ ಏನೋ, ಮಾಯಾನಗರಿ ಮುಂಬೈನಿಂದ ಹಿಡಿದು ಗಾಂಧಿನಗರದವರೆಗೂ ದಿನಕ್ಕೊಬ್ಬರು ಬೆತ್ತಲಾಗುತ್ತಲೇ ಇದ್ದಾರೆ. ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ 'ಮಾನ'ವನ್ನ ಟ್ರಾನ್ಸಿಸ್ಟರ್ ಕಾಪಾಡಿದ್ದು, ಇಡೀ ಭಾರತದಲ್ಲಿ ಬ್ರೇಕಿಂಗ್ ನ್ಯೂಸ್ ಆಗಿತ್ತು. [ಟ್ವಿಟ್ಟರ್ ನಲ್ಲಿ ಮತ್ತೊಮ್ಮೆ ಬೆತ್ತಲಾದ ಅಮೀರ್ ]

Tarun Chandra becomes Nude for the movie Goa1

ಇದರ ಎಫೆಕ್ಟ್ ಸ್ಯಾಂಡಲ್ ವುಡ್ ಗೂ ತಟ್ಟಿ, ಮೂರ್ಮೂರು ನಟರು ಆಮೀರ್ 'ಪಾಲಿಸಿ'ಯನ್ನ ಚಾಚೂ ತಪ್ಪದೇ ಪಾಲಿಸಿದ್ದರು. 'ಪರಪಂಚ' ಚಿತ್ರದಲ್ಲಿ ದಿಗಂತ್ 'ಗಿಮಿಕ್', 'ಡಿ.ಕೆ' ಚಿತ್ರದಲ್ಲಿ ಶೋಭರಾಜ್ ಮತ್ತು 'ಹಗ್ಗದ ಕೊನೆ' ಚಿತ್ರದಲ್ಲಿ ನವೀನ್ ಕೃಷ್ಣ....ಹೀಗೆ ಒಬ್ಬರಾದ ಮೇಲೆ ಮತ್ತೊಬ್ಬರು ಒಂದೊಂದು ಕಾರಣ ಕೊಟ್ಟು ತಮ್ಮ 'ಮಾನ'ವನ್ನು ಹರಾಜಿಗಿಟ್ಟಿದ್ದರು. [ಭಟ್ಟರ 'ಪರಪಂಚ'ದಲ್ಲಿ ನಟ ದಿಗಂತ್ ಬೆತ್ತಲೆ ಓಟ]

ಇದೀಗ ಇದೇ ಲಿಸ್ಟ್ ಗೆ ಹೊಸ ಸೇರ್ಪಡೆ ನಟ ತರುಣ್ ಚಂದ್ರ. ಗಾಂಧಿನಗರದಲ್ಲಿ ಕಣ್ಮರೆಯಾಗಿ ಹೋಗಿದ್ದ ತರುಣ್, ಇದೀಗ 'ಗೋವಾ' ಸಿನಿಮಾದಲ್ಲಿ ಕೋಮಲ್, ಶ್ರೀಕಿ ಜೊತೆ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ತರುಣ್ 'ಬ್ಲೂ ಬಾಯ್' ಅವತಾರ ತಾಳಿ ಹಳೇ ವಿವಾದಕ್ಕೆ ತುಪ್ಪ ಸುರಿದ್ದಿದ್ದಾರೆ!

ಟಾಪ್ ಟು ಬಾಟಂ ಬೆತ್ತಲಾಗಿರುವ ತರುಣ್ ಚಂದ್ರ, ಪ್ರಕೃತಿ ಕೊಟ್ಟ ಕರೆಯನ್ನು ಮುಗಿಸಿದ ತಕ್ಷಣ, ಸೀದಾ ಎದ್ದು ಬಂದು ರೂಮ್ ನಲ್ಲಿದ್ದ ಶ್ರೀಕಿಯನ್ನು ಗಾಬರಿಗೊಳಿಸಿದ್ದಲ್ಲದೇ, ಇಡೀ ಕರ್ನಾಟಕ ಜನತೆಯನ್ನೇ ದಂಗು ಬಡಿಸಿದ್ದಾರೆ. [ಪ್ರೇಮ್ 'ಡಿಕೆ' ಚಿತ್ರಕ್ಕೆ ಅಮೀರ್ 'ಪಿಕೆ' ಸ್ಫೂರ್ತಿನಾ?]

Tarun Chandra becomes Nude for the movie Goa2

ಇಂತಹ ಸನ್ನಿವೇಶದ ಅವಶ್ಯಕತೆ ಚಿತ್ರದಲ್ಲೇನಿತ್ತೋ ಕಾಣೆ, ಎಷ್ಟೇ ಆಗಲಿ ಸಿನಿಮಾದ ಹೆಸರೇ 'ಗೋವಾ'. ಅಂದ್ಮೇಲೆ ಅಲ್ಲಿ ಎಲ್ಲರೂ ಒದ್ದೆ-ಮುದ್ದೆಯಾಗಲೇ ಬೇಕು ಅನ್ನಿ. ಆದರೆ, ಎಲ್ಲರಿಗಿಂತ ಮುಂದಕ್ಕೆ ಹೋಗಿರುವ ತರುಣ್, 'ಬೆತ್ತಲಾ'ಗಿ ಆಟಂ ಬಾಂಬ್ ಸಿಡಿಸಿರುವುದು ಗಾಂಧಿನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ನಿನ್ನೆಯಷ್ಟೇ ರಿಲೀಸ್ ಆಗಿರುವ 'ಗೋವಾ' ಚಿತ್ರದ ಟ್ರೇಲರ್ ನಲ್ಲಿ ತರುಣ್ 'ಜಾತಕ' ಬಯಲಾಗಿದೆ. ಹಾಗ್ನೋಡಿದ್ರೆ, ಬಿಕಿನಿ ಗರ್ಲ್ಸ್ ಗಿಂತ ಹೆಚ್ಚಾಗಿ ಟ್ರೇಲರ್ ನಲ್ಲಿ 'ತರುಣ್' ಸೌಂಡ್ ಮಾಡುತ್ತಿರುವುದಕ್ಕೆ ಕಾರಣ, ಅವರ ಅ'ಪೂರ್ಣ' ದರ್ಶನ!

ಆದ್ರೆ, ಇದು ಸಂಪೂರ್ಣ ಬೆತ್ತಲಾಯಣವೋ, ಇಲ್ಲಾ ಗಿಮಿಕ್ ಗೋಸ್ಕರ ಮಾಡಿರುವ 'ಕತ್ರಿ ಕೆಲಸ'ವೋ ಅನ್ನುವುದನ್ನ ತರುಣ್ ಮತ್ತು 'ಗೋವಾ' ಸೂತ್ರಧಾರ ಸೂರ್ಯ ಹೇಳಬೇಕು. ಅದೇನೇಯಿರಲಿ, 'ತರುಣ್' ಅನ್ನುವ ನಟನನ್ನು ಮರೆತೇಬಿಟ್ಟಿದ್ದ ಜನರಿಗೆ, ಚಿತ್ರತಂಡ ಈ ಶಾಕ್ ಟ್ರೀಟ್ ಮೆಂಟ್ ಕೊಟ್ಟು, ಎಲ್ಲರನ್ನು ಬಡಿದೆಬ್ಬಿಸಿದೆ. (ಫಿಲ್ಮಿಬೀಟ್ ಕನ್ನಡ)

English summary
Tarun Chandra of Khushi Fame, has gone Nude for his upcoming movie Goa. Tarun's nude shot has revealed in the movie's official trailer which is becoming viral.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada