»   » ಶೀಘ್ರದಲ್ಲಿ ನಿತಿನ್ ಬಾಳಲ್ಲಿ ಪೀ..ಪೀ..ಪೀ..ಢುಂ..ಢುಂ

ಶೀಘ್ರದಲ್ಲಿ ನಿತಿನ್ ಬಾಳಲ್ಲಿ ಪೀ..ಪೀ..ಪೀ..ಢುಂ..ಢುಂ

Posted By:
Subscribe to Filmibeat Kannada

ಪ್ರತಿ ನಿತ್ಯ ''ನಿತಿನ್, ನನ್ನ ಡ್ರೀಂ ಬಾಯ್'' ಅಂತ ಕನಸು ಕಾಣ್ತಿದ್ದ ಅನೇಕ ಹರೆಯದ ಹುಡುಗಿಯರಿಗೆ ಇದೋ ಇಲ್ಲಿದೆ ಹಾರ್ಟ್ ಬ್ರೇಕಿಂಗ್ ನ್ಯೂಸ್! ಸದ್ಯದಲ್ಲೇ ನಿತಿನ್ ಹೊಸ ಬಾಳಿಗೆ ಅಡಿಯಿಡುತ್ತಿದ್ದಾರೆ. ನಿತಿನ್ ಕುಟುಂಬದವರು ಅತಿ ಶೀಘ್ರದಲ್ಲೇ ವಾಲಗ ಊದಿಸುವುದಕ್ಕೆ ಸಜ್ಜಾಗಿದ್ದಾರಂತೆ.

ನಂಬಿದ್ರೆ ನಂಬಿ, ನಿತಿನ್ ಆದಷ್ಟು ಬೇಗ ಮದುವೆಯಾಗಬೇಕು ಅನ್ನುವುದು ಅವರ ಕುಟುಂಬದವರ ಆಸೆಯಾಗಿದ್ಯಂತೆ. ಅದ್ರಲ್ಲೂ ನಿತಿನ್ ತಾಯಿಗೆ ಪ್ರತಿದಿನ ಅವರ ಸೊಸೆಯದ್ದೇ ಚಿಂತೆ. ಯಾವುದೇ ವಿವಾಹ ಸಮಾರಂಭಕ್ಕೆ ತೆರಳಿದರೂ, ಎಲ್ಲರೂ ನಿತಿನ್ ಮದುವೆ ಯಾವಾಗ ಅಂತ ಕೇಳುತ್ತಿದ್ದಾರಂತೆ.

Telugu Actor Nithiin get married soon1

ಪದೇ ಪದೇ ಎಲ್ಲರಿಂದ ಈ ಪ್ರಶ್ನೆಯನ್ನ ಎದುರಿಸಿ ಸಾಕ್ಹಾಗಿ, ಕಡೆಗೂ ಅದೆಷ್ಟು ಬೇಗ ಮದುವೆಯಾಗಬೇಕು ಅಂತ ನಿತಿನ್ ನಿರ್ಧಾರ ಮಾಡಿದ್ದಾರೆ. ಆದ್ರೆ ಅದು ಲವ್ ಮ್ಯಾರೇಜೋ, ಅಥವಾ ಅರೇಂಜ್ಡ್ ಮ್ಯಾರೇಜೋ ಅಂತ ನಿತಿನ್ ಬಾಯಿಬಿಡುತ್ತಿಲ್ಲ.

ಕೆಲ ದಿನಗಳ ಹಿಂದೆಯಷ್ಟೇ, ನಿತಿನ್ ಹುಡುಗಿಯೊಬ್ಬಳಿಗೆ ಮನಸೋತಿದ್ದಾರೆ ಅನ್ನುವ ಸುದ್ದಿ ತೆಲುಗು ಸಿನಿ ಅಂಗಳದಲ್ಲಿ ಸದ್ದು ಮಾಡಿತ್ತು. ಅದ್ರ ಬೆನ್ನಲ್ಲೇ ನಿತಿನ್ ಮದುವೆ ವಿಷ್ಯ ಹೊರಬಿದ್ದಿರುವುದನ್ನ ನೋಡಿದ್ರೆ, ನಿತಿನ್ ಲವ್ ಸಕ್ಸಸ್ ಆಗಿರಬಹುದು ಅಂತ ಗಾಸಿಪ್ ಪಂಡಿತರು ಮಾತನಾಡಿಕೊಳ್ಳುತ್ತಿದ್ದಾರೆ. [ನಿತಿನ್ ಗೆ ನಿದ್ದೆ ಕೆಡಿಸಿದ ಹುಡುಗಿ ಯಾರು?]

ಹಾಗಾದ್ರೆ, ನಿತಿನ್ ಮನದೊಡತಿಯಾಗುವ ಹುಡುಗಿ ಯಾರು..? ನಿತಿನ್ ಮದುವೆ ಯಾವಾಗ..? ಈ ಪ್ರಶ್ನೆಗಳಿಗೆ ಕೆಲ ದಿನಗಳಲ್ಲೇ ಉತ್ತರ ಸಿಗಲಿದೆ. ಕಾಯ್ತಾಯಿರಿ..(ಏಜೆನ್ಸೀಸ್)

English summary
Telugu Actor Nithiin of 'Jayam' fame is all set to get married soon. Being under severe pressure from family, Nithiin has given a nod to get hitched soon.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada