For Quick Alerts
  ALLOW NOTIFICATIONS  
  For Daily Alerts

  ಮೊಮ್ಮಕ್ಕಳಿದ್ದರೂ 51 ರ ವಯಸ್ಸಲ್ಲಿ ಅಪ್ಪನಾಗುತ್ತಿರುವ ಟಾಪ್ ನಿರ್ಮಾಪಕ!

  |

  ನಿರ್ಮಾಪಕ ದಿಲ್ ರಾಜು ಬಹಳ ದಿಲ್‌ದಾರ್. ಸಿನಿಮಾಗಳಿಗೆ ನೀರಿನಂತೆ ದುಡ್ಡು ಸುರಿಯುವ ದಿಲ್ ರಾಜು ಸ್ಟಾರ್ ನಟರಂತೆ ಹೆಸರುಗಳಿಸಿರುವ ಸ್ಟಾರ್ ನಿರ್ಮಾಪಕ.

  ತೆಲುಗು ಚಿತ್ರರಂಗದಲ್ಲಿ ಅವರದ್ದೇ ಆದ ಬ್ರ್ಯಾಂಡ್ ಕಟ್ಟಿಕೊಂಡಿರುವ ದಿಲ್ ರಾಜು ಪವನ್ ಕಲ್ಯಾಣ್ ಸೇರಿದಂತೆ ಹಲವು ಸ್ಟಾರ್ ನಟರ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

  ಮಗಳ ವಯಸ್ಸಿನ ಮಹಿಳೆಯ ಜತೆ ನಿರ್ಮಾಪಕನ ಎರಡನೆಯ ಮದುವೆ: ಕಾರಣ ಇದು...ಮಗಳ ವಯಸ್ಸಿನ ಮಹಿಳೆಯ ಜತೆ ನಿರ್ಮಾಪಕನ ಎರಡನೆಯ ಮದುವೆ: ಕಾರಣ ಇದು...

  2017 ರಲ್ಲಿ ದಿಲ್ ರಾಜು ಮೊದಲ ಪತ್ನಿ ನಿಧನ ಹೊಂದಿದ್ದರು. ಮೂರು ವರ್ಷ ಒಂಟಿಯಾಗಿದ್ದ ದಿಲ್ ರಾಜು 2020 ಮಾರ್ಚ್ 10 ರಂದು ವಿವಾಹವಾಗಿದ್ದರು. ದಿಲ್ ರಾಜುರ ಮಗಳು ಹನ್ಷಿತಾ ರೆಡ್ಡಿ ಮುಂದೆ ನಿಂತು ತಂದೆಯ ವಿವಾಹ ಮಾಡಿಸಿದ್ದರು. ಈಗ ದಿಲ್‌ ರಾಜು ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗುತ್ತಿದೆ.

  ದಿಲ್ ರಾಜು ವಿವಾಹವಾದಾಗಲೆ ಕೆಲವರು ಟ್ರೋಲ್ ಮಾಡಿದ್ದರು. ಆದರೆ ಆ ಬಗ್ಗೆ ದಿಲ್ ರಾಜು ಖುಷಿಯಾಗಿಯೇ ಮಾತನಾಡಿದ್ದರು. ದಿಲ್ ರಾಜುರ ಎರಡನೇ ವಿವಾಹಕ್ಕೆ ಟಾಲಿವುಡ್‌ನ ದೊಡ್ಡ ನಟರು, ನಟಿಯರು ಶುಭ ಕೋರಿದ್ದರು. ದಿಲ್ ರಾಜು ನಿರ್ಣಯವನ್ನು ಅವರ ಮಗಳ ಸಾಹಸವನ್ನು ಮೆಚ್ಚಿ ಕೊಂಡಾಡಿದ್ದರು.

  ದಿಲ್ ರಾಜು ಮಗಳು ಹನ್ಷಿತಾ ರೆಡ್ಡಿಗೆ ಈಗಾಗಲೇ ಮಕ್ಕಳಿದ್ದಾರೆ. ದಿಲ್ ರಾಜು ತಾತ ಆಗಿ ಕೆಲ ಸಮಯ ಆಗಿದೆ. ಆದರೆ ಈಗ ಮತ್ತೆ ಅಪ್ಪ ಆಗುತ್ತಿದ್ದಾರೆ ದಿಲ್ ರಾಜು. ಸ್ಟಾರ್ ನಿರ್ಮಾಪಕ ಮತ್ತೆ ತಂದೆಯಾಗುತ್ತಿರುವ ಬಗ್ಗೆ ಟಾಲಿವುಡ್‌ನಲ್ಲಿ ಜೋರು ಗಾಳಿ ಸುದ್ದಿ ಹಬ್ಬಿದೆ.

  ದಿಲ್ ರಾಜು ಬಹಳ ದಿಲ್‌ ದಾರ್ ಈ ರೀತಿಯ ಸುದ್ದಿಗಳನ್ನೆಲ್ಲ ಮುಚ್ಚಿಟ್ಟುಕೊಳ್ಳುವ ಜಾಯಮಾನವೇ ಅವರದ್ದಲ್ಲ. ಕೆಲವೇ ದಿನಗಳಲ್ಲಿ ಈ ಬಗ್ಗೆ ಅವರೇ ಸುದ್ದಿಯನ್ನು ಬಹಿರಂಗಗೊಳಿಸುವ ಸಾಧ್ಯತೆ ಇದೆ.

  ದಿಲ್ ರಾಜು ಜನಿಸಿದ್ದು 1970ರ ಡಿ. 18ರಂದು. ಅವರ ಮೊದಲ ಪತ್ನಿ ಅನಿತಾ 2017ರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಆಗ ಅವರಿಗೆ 46 ವರ್ಷ. ಇಬ್ಬರೂ ಕಿರಿ ವಯಸ್ಸಿನಲ್ಲಿಯೇ ಮದುವೆಯಾಗಿದ್ದರು. ಈ ದಂಪತಿ ಮಗಳು ಹನ್ಷಿತಾ ರೆಡ್ಡಿಗೆ ಅಮ್ಮನ ಸಾವಿನ ಬಳಿಕ ಒಂಟಿಯಾಗಿರುವ ಅಪ್ಪನಿಗೆ ಸಂಗಾತಿ ಬೇಕು ಎಂಬ ಕಾರಣಕ್ಕೆ ಎರಡನೆಯ ಮದುವೆಗೆ ಅವರೇ ಒತ್ತಾಯಿಸಿದ್ದರಂತೆ. ದಿಲ್ ರಾಜು ಮದುವೆಯಾಗಿರುವ ಮಹಿಳೆಯ ಹೆಸರು ತೇಜಸ್ವಿನಿ. ಅವರ ಹೆಸರನ್ನು ವೈಘಾ ರೆಡ್ಡಿ ಎಂದು ಬದಲಿಸಲಾಗಿದೆ. ಬ್ರಾಹ್ಮಣ ಕುಟುಂಬದವರಾದ ತೇಜಸ್ವಿನಿ ಈ ಹಿಂದೆ ಗಗನ ಸಖಿಯಾಗಿ ಕೆಲಸ ಮಾಡಿದ್ದರು ಎನ್ನಲಾಗಿದೆ. 30 ವರ್ಷದ ತೇಜಸ್ವಿನಿ, ಆಗ 49 ವರ್ಷದವರಾಗಿದ್ದ ದಿಲ್ ರಾಜು ಅವರ ಕೈ ಹಿಡಿಯಲು 29 ವರ್ಷದ ಮಗಳು ಹನ್ಷಿತಾ ಪಾತ್ರ ಮುಖ್ಯವಾಗಿತ್ತು ಎನ್ನಲಾಗಿದೆ.

  English summary
  Telugu movie top producer Dil Raju becoming father again. He is 51 years of age. He married Tejaswini as his second wife on 2020 May 10.
  Tuesday, March 22, 2022, 9:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X