»   » ಕನ್ನಡದ ಆರು ಕೋಟ್ಯಾಧಿಪತಿ ನಾಯಕ ನಟರು

ಕನ್ನಡದ ಆರು ಕೋಟ್ಯಾಧಿಪತಿ ನಾಯಕ ನಟರು

Posted By:
Subscribe to Filmibeat Kannada

ಯಾವಾಗ ಕಳೆದ ಎರಡು ವರ್ಷಗಳಿಂದ ಕನ್ನಡ ಚಿತ್ರಗಳನ್ನು ವೀಕ್ಷಿಸುವವರ ಸಂಖ್ಯೆ ಮತ್ತು ಮಾರುಕಟ್ಟೆ ಗಣನೀಯವಾಗಿ ಸುಧಾರಿಸಿತೋ ಕನ್ನಡದ ಪ್ರಮುಖ ನಟರು ಪಡೆಯುವ ಸಂಭಾವನೆ ಕೂಡಾ ಎಂಟಂಕಿ ದಾಟಿತು.

ಪ್ರಮುಖವಾಗಿ ಕನ್ನಡ ಚಿತ್ರರಂಗ ತನ್ನ marketing strategy ಮೇಲೆ ಗಮನವಿಟ್ಟು ಚಿತ್ರ ಬಿಡುಗಡೆಗೂ ಮುನ್ನ ಪಬ್ಲಿಸಿಟಿ ಮೇಲೆ ಗಮನವಿಡುತ್ತಿರುವುದು ಚಿತ್ರಕ್ಕೆ ಉತ್ತಮ ಒಪನಿಂಗ್ ಸಿಗಲು ಒಂದು ಕಾರಣ.

ಅಲ್ಲದೇ ಇತ್ತೀಚಿನ ದಿನಗಳಲ್ಲಿ ಪ್ರಮುಖ ನಟರ ಚಿತ್ರಗಳು ಬಿಡುಗಡೆಗೆ ಮುನ್ನವೇ ಉತ್ತಮ ಮೊತ್ತಕ್ಕೆ ಟಿವಿ ವಾಹಿನಿಗಳಿಗೆ ಮಾರಾಟವಾಗುತ್ತಿರುವುದು ನಿರ್ಮಾಪಕರ ಪಾಲಿಗೆ ಶುಭ ಸುದ್ದಿ. ಅದರಲ್ಲೂ ಪುನೀತ್ ರಾಜಕುಮಾರ್ ಅವರ ಕೆಲವು ಚಿತ್ರಗಳ ಸಾಟಿಲೈಟ್ ಹಕ್ಕು ಮಹೂರ್ತಕ್ಕೂ ಮುನ್ನವೇ ಮಾರಾಟವಾದ ಉದಾಹರಣೆಗಳಿವೆ.

ಕನ್ನಡದ ಪ್ರಮುಖ ನಟರು ತಮ್ಮ ಚಿತ್ರೀಕರಣದ ಹಂತದಲ್ಲಿರುವ (ಲೇಟೆಸ್ಟ್) ಚಿತ್ರಗಳಿಗೆ ಪಡೆಯುತ್ತಿರುವ ಸಂಭಾವನೆ ಎಷ್ಟು? ಸ್ಲೈಡಿನಲ್ಲಿರುವ ನಮೂದಿಸಿರುವ ಸಂಭಾವನೆ ಮೊತ್ತ ನಂಬಲರ್ಹ ಮೂಲಗಳಿಂದ ಬಂದ ವರದಿಯಾದರೂ ಕರಾರುವಕ್ಕಾದ ಮೊತ್ತವಲ್ಲ.

ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಮಾತ್ರ ನಟರಿಗೆ ತಾವು ಕೊಡುತ್ತಿರುವ exact ಸಂಭಾವನೆ ಅಥವಾ ಒಡಂಬಡಿಕೆಯ ಬಗ್ಗೆ ತಿಳಿದಿರಬಹುದು. ಚಿತ್ರದಿಂದ ಚಿತ್ರಕ್ಕೆ ಇವರು ಪಡೆಯುವ ಸಂಭಾವನೆ ಕಮ್ಮಿಯೂ ಆಗಬಹುದು.. ಹೆಚ್ಚೂ ಆಗಬಹುದು. ಅವರವರ, ಅಂದಂದಿನ ಬೇಡಿಕೆಯ ಮೇಲೆ ಕಾಲ್ಶೀಟ್ ಬೆಲೆ ಅವಲಂಬಿತವಾಗಿರುತ್ತದೆ.

ಚಾಲೆಂಜಿಗ್ ಸ್ಟಾರ್ ದರ್ಶನ್

ಸತತ ಮೂರು ಸೂಪರ್ ಹಿಟ್ ಚಿತ್ರಗಳಾದ ಸಾರಥಿ, ಚಿಂಗಾರಿ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರಗಳ ಭರ್ಜರಿ ಯಶಸ್ಸಿನ ನಂತರ ದರ್ಶನ್ ಪಡೆಯುತ್ತಿರುವ ಸಂಭಾವನೆ ಮೊತ್ತ ಮೂರುವರೆ ಕೋಟಿಯಿಂದ ನಾಲ್ಕು ಕೋಟಿ ಎನ್ನಲಾಗುತ್ತಿದೆ.

ಪವರ್ ಸ್ಟಾರ್ ಪುನೀತ್

ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಕಿಂಗ್ ಪುನೀತ್ ರಾಜಕುಮಾರ್ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತ ಉದಾಹರಣೆ ಎಲ್ಲೋ ಅಪರೂಪ. ಪರಮಾತ್ಮ, ಅಣ್ಣಾಬಾಂಡ್ ಚಿತ್ರಗಳು ನಿರೀಕ್ಷಿತ ಗೆಲುವು ಕಾಣದಿದ್ದರೂ ಕಮರ್ಷಿಯಲ್ ಹಿಟ್ ಪಟ್ಟಿಗೆ ಸೇರಿದ ಚಿತ್ರಗಳು. ಅಲ್ಲದೇ ಅಪ್ಪುವಿಗೆ ಕನ್ನಡದ ಕೋಟ್ಯಾಧಿಪತಿ ಟಿವಿ ರಿಯಾಲಿಟಿ ಶೋ ಉತ್ತಮ ಜನಪ್ರಿಯತೆ ತಂದುಕೊಟ್ಟಿತು, ಮತ್ತು ಯಾರೇ ಕೂಗಾಡಲಿ ಚಿತ್ರ ಕೂಡಾ ಉತ್ತಮ ಪ್ರದರ್ಶನ ಕಂಡಿತು. ಪುನೀತ್ ಸಂಭಾವನೆ ಮೂರರಿಂದ ಮೂರುವರೆ ಕೋಟಿ ಎನ್ನಲಾಗುತ್ತಿದೆ.

ರಿಯಲ್ ಸ್ಟಾರ್ ಉಪೇಂದ್ರ

ಆರಕ್ಷಕ, ಗಾಡ್ ಫಾದರ್ ಮತ್ತು ಕಲ್ಪನಾ ಚಿತ್ರಗಳು ನಿರೀಕ್ಷಿತ ಯಶಸ್ಸು ಪಡೆಯದಿದ್ದರೂ ಉಪೇಂದ್ರ ಬಹು ಬೇಡಿಕೆಯ ನಟರಲ್ಲಿ ಒಬ್ಬರು. ಇವರು ಚಿತ್ರವೊಂದಕ್ಕೆ ಒಂದುವರೆ ಕೋಟಿಯಿಂದ ಎರಡು ಕೋಟಿಯವರೆಗೆ ಸಂಭಾವನೆ ಪಡೆಯುತ್ತಾರೆ ಎನ್ನುವ ಸುದ್ದಿಯಿದೆ.

ಅಭಿನಯ ಚಕ್ರವರ್ತಿ ಸುದೀಪ್

ಕೆಂಪೇಗೌಡ, ವಿಷ್ಣುವರ್ಧನ ಮತ್ತು ತೆಲುಗು ಈಗ ಚಿತ್ರ ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರ ನೀಡಿದ ನಂತರ ಸುದೀಪ್ ಮಾರುಕಟ್ಟೆ ಕನ್ನಡದಲ್ಲಿ ಮಾತ್ರವಲ್ಲ ತೆಲುಗು ಮತ್ತು ತಮಿಳಿನಲ್ಲೂ ಸಿಕ್ಕಾಪಟ್ಟೆ ಚಲಾವಣೆಯಲ್ಲಿದೆ. ಸುದೀಪ್ ಕೂಡಾ ಕನ್ನಡ ಚಿತ್ರವೊಂದಕ್ಕೆ ಒಂದುವರೆ ಕೋಟಿಯಿಂದ ಎರಡು ಕೋಟಿಯವರೆಗೆ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

ವಯಸ್ಸು ಐವತ್ತಾದರೂ ಯುವಕರನ್ನೂ ನಾಚಿಸುವಂತೆ ನಟಿಸುವ ಶಿವರಾಜ್ ಕುಮಾರ್ ಅವರ ಕಾಲ್ ಶೀಟ್ ಸಿಗುವುದೇ ಕಷ್ಟ. ಸತತ ಇವರ ಚಿತ್ರಗಳು ಸೋಲು ಅನುಭವಿಸಿದರೂ 'ಲಕ್ಷ್ಮಿ' ಚಿತ್ರ ತಕ್ಕ ಮಟ್ಟಿನ ಯಶಸ್ಸನ್ನು ಕಂಡಿತು. ಶಿವಣ್ಣ 91 ಲಕ್ಷದಿಂದ ಒಂದುವರೆ ಕೋಟಿಯವರೆಗೆ ಸಂಭಾವನೆ ಪಡೆಯುತ್ತಾರೆ ಎನ್ನುವ ಸುದ್ದಿಯಿದೆ.

ದುನಿಯಾ ವಿಜಯ್

ಜಾನಿ ಮೇರಾ ನಾಮ್..ಪ್ರೀತಿ ಮೇರಾ ಕಾಮ್, ಭೀಮಾತೀರದಲ್ಲಿ ಚಿತ್ರದ ಯಶಸ್ಸಿನ ನಂತರ ದುನಿಯಾ ವಿಜಯ್ ಬಹು ಬೇಡಿಕೆಯ ನಟ. ಇವರು ಒಂದರಿಂದ ಒಂದುವರೆ ಕೋಟಿಯವರೆಗೆ ಸಂಭಾವನೆ ಪಡೆಯುತ್ತಾರೆ ಎನ್ನುವ ಸುದ್ದಿಯಿದೆ.

English summary
Top Six Kannad actors remuneration details according to 2013 movies. Remuneration can be changed film to film and amount posted in this article is not the accurate figure. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada