For Quick Alerts
  ALLOW NOTIFICATIONS  
  For Daily Alerts

  200 ಕೋಟಿ ಆಸ್ತಿ ಮಾರಾಟಕ್ಕೆ ಮುಂದಾದ ಜೀವಿತಾ ರಾಜಶೇಖರ್: ಮೆಗಾ ಸೊಸೆ ಖರೀದಿ?

  |

  ತೆಲುಗು ಇಂಡಸ್ಟ್ರಿಯ ಹಿರಿಯ ಕಲಾವಿದೆ ಜೀವಿತಾ ರಾಜಶೇಖರ್ ಹೈದರಾಬಾದ್‌ನ ಫಿಲ್ಮ್ ನಗರದಲ್ಲಿ ಸುಮಾರು 200 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಸದ್ಯ ಈ ಜಾಗವನ್ನು ಬಾಡಿಗೆಗೆ ನೀಡಿದ್ದು, ಒಳ್ಳೆಯ ಆದಾಯ ಬರ್ತಿದೆ. ಆದ್ರೀಗ, ಈ ಆಸ್ತಿ ಮಾರಾಟ ಮಾಡಲು ಮುಂದಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

  ಪ್ರತಿ ಚದರ ಅಡಿಗೆ 15 ಸಾವಿರ ರೂಪಾಯಿ ಬೆಲೆ ಹೊಂದಿದ್ದು, ಈ ಆಸ್ತಿಯನ್ನು ತೆಲುಗಿನ ಖ್ಯಾತ ನಟ ರಾಮ್ ಚರಣ್ ತೇಜ ಪತ್ನಿ ಉಪಾಸನ ಖರೀದಿ ಮಾಡಲು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಚರ್ಚೆಗಳು ನಡೆಯುತ್ತಿವೆ ಎಂಬ ಮಾಹಿತಿ ಇದೆ.

  'ಮಾ' ಚುನಾವಣೆ: ಬೇರೆ ಇಂಡಸ್ಟ್ರಿಯ ಪ್ರಕಾಶ್ ರಾಜ್ ನಮಗೆ ಬೇಡ ಎಂದ ನಟಿ'ಮಾ' ಚುನಾವಣೆ: ಬೇರೆ ಇಂಡಸ್ಟ್ರಿಯ ಪ್ರಕಾಶ್ ರಾಜ್ ನಮಗೆ ಬೇಡ ಎಂದ ನಟಿ

  ಇನ್ನು ಜೀವಿತಾ ರಾಜಶೇಖರ್ ಅವರ ಈ ಆಸ್ತಿಯಲ್ಲಿ ಫೋನಿಕ್ಸ್ ಗ್ರೂಪ್ ಸಹ ಬಂಡವಾಳ ಹೂಡಿದ್ದು, ಮಾರಾಟಕ್ಕೆ ಅವರ ಸಮ್ಮತಿಯೂ ಇದೆಯಂತೆ. ಜೀವಿತಾ ಅವರ ಪಾಲಿಗೆ 200 ಕೋಟಿ ಸಿಗುವ ನಿರೀಕ್ಷೆ ಇದೆ.

  ಜೀವಿತಾ ತಮ್ಮ ಆಸ್ತಿ ಮಾರಾಟ ಮಾಡಲು ನಿರ್ಧರಿಸಿರುವ ಹಿನ್ನೆಲೆ, ಸದ್ಯ ಆ ಜಾಗದಲ್ಲಿ ಬಾಡಿಗಿಗೆ ಇರುವವರು ಖಾಲಿ ಮಾಡಬೇಕಿದೆ. ಆಸ್ತಿ ಮಾರಾಟದ ವಿಚಾರದಲ್ಲಿ ಬಾಡಿಗೆದಾರರ ಒಪ್ಪಂದ ಹಾಗೂ ವ್ಯವಹಾರಗಳು ಮಹತ್ವದಾಗಿರುತ್ತದೆ.

  ಜೀವಿತಾ ಅವರ ಆಸ್ತಿ ಪಕ್ಕದಲ್ಲಿ ಫೋನಿಕ್ಸ್ ಸಂಸ್ಥೆ ದೊಡ್ಡ ಕಟ್ಟಡ ನಿರ್ಮಿಸಿದ್ದು, ಅದರಲ್ಲಿ ಪ್ರಭಾವಿ ವ್ಯಕ್ತಿಗಳು ಸ್ಥಳ ಖರೀದಿ ಮಾಡಿದ್ದಾರೆ. ಈಗ ಜೀವಿತಾ ಜಾಗದಲ್ಲಿರುವವರನ್ನು ಪಕ್ಕದ ಕಟ್ಟಡಕ್ಕೆ ಸ್ಥಳಾಂತರಿಸಿ ಆಸ್ತಿ ಮಾರುವ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.

  English summary
  Telugu actor Ram Charan Teja Wife Upasana to buy jeevitha Rajashekar's 200 crore property.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X