»   » 'ಅಂಡರ್ ವರ್ಲ್ಡ್ ಡಾನ್' ಜಯರಾಜ್ ಪಾತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ.?

'ಅಂಡರ್ ವರ್ಲ್ಡ್ ಡಾನ್' ಜಯರಾಜ್ ಪಾತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ.?

Posted By:
Subscribe to Filmibeat Kannada

ಬೆಂಗಳೂರು ಭೂಗತ ಲೋಕವನ್ನ ಹಸಿ ಬಿಸಿಯಾಗಿ 1995ರಲ್ಲೇ 'ಓಂ' ಚಿತ್ರದ ಮೂಲಕ ತೆರೆ ಮೇಲೆ ತಂದವರು ರಿಯಲ್ 'ಡೈರೆಕ್ಟರ್' ಉಪೇಂದ್ರ. ಇದೇ ಸಿನಿಮಾದ ಮೂಲಕ ರಿಯಲ್ 'ಡಾನ್' ಗಳಾಗಿದ್ದ ಬೆಕ್ಕಿನ ಕಣ್ಣು ರಾಜೇಂದ್ರ, ತನ್ವೀರ್, ಕೊರಂಗು ಕೃಷ್ಣ, ಜೇಡರಹಳ್ಳಿ ಕೃಷ್ಣಪ್ಪ, ಶ್ರೀರಾಮಪುರ ಕಿಟ್ಟಿ ಮತ್ತು ಕೋಳಿ ಫಯಾಜ್ ರವರನ್ನ ಬೆಳ್ಳಿತೆರೆಗೆ ಪರಿಚಯಿಸಿದವರು ಒನ್ಸ್ ಅಗೇನ್ ಉಪೇಂದ್ರ.[ನಾ ನೋಡಿದ ಹೊಸ ತಂತ್ರಜ್ಞಾನದ 'ಓಂ' ಚಿತ್ರ]

ಈಗ 'ಓಂ' ಸಿನಿಮಾ ಮತ್ತು ಉಪೇಂದ್ರ ಬಗ್ಗೆ ನಾವು ಇಷ್ಟೆಲ್ಲ ಪೀಠಿಕೆ ಹಾಕುತ್ತಿರುವುದಕ್ಕೆ ಕಾರಣ ನವ ನಿರ್ದೇಶಕ ಲೋಹಿತ್. 'ಮಮ್ಮಿ ಸೇವ್ ಮಿ' ಸಿನಿಮಾ ಸೂಪರ್ ಸಕ್ಸಸ್ ಆದ್ಮೇಲೆ ಎರಡ್ಮೂರು ಚಿತ್ರಗಳ ಸ್ಕ್ರಿಪ್ಟ್ ವರ್ಕ್ ನಲ್ಲಿ ಲೋಹಿತ್ ಬಿಜಿಯಾಗಿದ್ದಾರೆ. ಅದರಲ್ಲಿ ಒಂದು ಚಿತ್ರ ಉಪೇಂದ್ರಗಾಗಿ ರೆಡಿ ಆಗ್ತಿದ್ಯಂತೆ.

ಅಂಡರ್ ವರ್ಲ್ಡ್ ಸಬ್ಜೆಕ್ಟ್ ಕೈಗೆತ್ತಿಕೊಂಡಿದ್ದಾರೆ ಲೋಹಿತ್

'ಮಮ್ಮಿ ಸೇವ್ ಮಿ' ಅಂತಹ ಹಾರರ್-ಥ್ರಿಲ್ಲರ್ ಸಿನಿಮಾ ಮಾಡಿದ ಬಳಿಕ ಬೆಂಗಳೂರು ಭೂಗತಲೋಕದ ಕುರಿತು ಒಂದು ಸಿನಿಮಾ ಮಾಡಲು ಲೋಹಿತ್ ಮನಸ್ಸು ಮಾಡಿದ್ದಾರೆ.[ವಿಮರ್ಶೆ: ಗುಂಡಿಗೆ ಗಟ್ಟಿ ಮಾಡಿಕೊಂಡು ಮಿಸ್ ಮಾಡದೇ 'ಮಮ್ಮಿ' ನೋಡಿ]

'ರಿಯಲ್' ಅಂಡರ್ ವರ್ಲ್ಡ್ ಡಾನ್ ಕಥೆ

ಒಂದ್ಕಾಲದಲ್ಲಿ ಬೆಂಗಳೂರಿನ ಅಂಡರ್ ವರ್ಲ್ಡ್ ಡಾನ್ ಆಗಿದ್ದ ಎಂ.ಪಿ.ಜಯರಾಜ್ ಕುರಿತು ಸಿನಿಮಾ ಮಾಡಲು ಲೋಹಿತ್ ಮುಂದಾಗಿದ್ದಾರೆ. ಈಗಾಗಲೇ ಈ ಬಗ್ಗೆ ಅಗ್ನಿ ಶ್ರೀಧರ್ ಜೊತೆ ಚರ್ಚಿಸಿ, ಸ್ಕ್ರಿಪ್ಟಿಂಗ್ ಕೆಲಸಕ್ಕೂ ಲೋಹಿತ್ ಚಾಲನೆ ನೀಡಿದ್ದಾರೆ.[ಸೈಲೆಂಟ್ ಆಗಿ ನಡೆದಿದೆ ಉಪೇಂದ್ರ ರವರ 50ನೇ ಚಿತ್ರದ ಸ್ಕ್ರಿಪ್ಟ್ ಪೂಜೆ]

ಜಯರಾಜ್ ಪಾತ್ರದಲ್ಲಿ ರಿಯಲ್ ಸ್ಟಾರ್.?

ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಖಾಸ್ ಖಬರ್ ಪ್ರಕಾರ, ಡಾನ್ ಜಯರಾಜ್ ಪಾತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಲೋಹಿತ್ ಮೇಲೆ ಉಪ್ಪಿಗೆ ನಂಬಿಕೆ ಇದೆ.!

'ಮಮ್ಮಿ ಸೇವ್ ಮಿ' ಚಿತ್ರವನ್ನ ನೋಡಿ ಖುದ್ದು ಶೇಕ್ ಆಗಿದ್ದ ಉಪ್ಪಿ, ಲೋಹಿತ್ ಪ್ರತಿಭೆ ಬಗ್ಗೆ ಬಹಿರಂಗವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೀಗಾಗಿ, ಲೋಹಿತ್ ಮುಂದಿನ ಚಿತ್ರಕ್ಕೆ ಉಪ್ಪಿ ಗ್ರೀನ್ ಸಿಗ್ನಲ್ ಕೊಟ್ಟರೆ ಅಚ್ಚರಿ ಪಡಬೇಕಾಗಿಲ್ಲ.

ಇದು ಉಪ್ಪಿ ಸ್ಟೈಲ್ ಆದರೂ, ಉಪ್ಪಿಗೆ ಹೊಸದು.!

'ಓಂ' ಸಿನಿಮಾದಲ್ಲಿ ಅಂಡರ್ ವರ್ಲ್ಡ್ ಕಥೆ ಹೇಳಿದ್ಮೇಲೆ, ಮತ್ತೆ ಅದೇ ತರಹ ಸಬ್ಜೆಕ್ಟ್ ಗಳಿಗೆ ಉಪ್ಪಿ ಕೈಹಾಕಲಿಲ್ಲ. 'ಭೂಗತ ಪಾತಕಿ' ಪಾತ್ರಕ್ಕೆ ಬಣ್ಣ ಹಚ್ಚಿರಲಿಲ್ಲ. ಈಗ ಉಪ್ಪಿ ಕೈಯಲ್ಲಿ ಹೊಸ ಪ್ರಯೋಗ ಮಾಡಿಸಲು ಲೋಹಿತ್ ಸಜ್ಜಾಗಿದ್ದಾರೆ. ಇದಕ್ಕೆ ಉಪ್ಪಿ 'ಯೆಸ್' ಎನ್ನಬೇಕಷ್ಟೆ.

ಸದ್ಯಕ್ಕೆ ಉಪೇಂದ್ರ ಬಿಜಿ

ಸದ್ಯ ಉಪೇಂದ್ರ ಕೈಯಲ್ಲಿ 'ಕಣ್ಣೇಶ್ವರ' ಸೇರಿದಂತೆ ಮೂರ್ನಾಲ್ಕು ಚಿತ್ರಗಳಿವೆ. ಅವೆಲ್ಲ ಮುಗಿದ ಬಳಿಕ ಈ ಚಿತ್ರಕ್ಕೆ ಚಾಲನೆ ಸಿಗಲಿದೆ.

English summary
According to the latest buzz, Real Star Upendra to play Bengaluru Underworld Don M.P.Jayaraj in a movie which will be directed by Lohit, of 'Mummy Save Me' fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada