»   » ಉಪೇಂದ್ರ ದೃಷ್ಟಿಯಲ್ಲಿ ರಾಜಕೀಯ ಹೇಗಿರಬೇಕು ಗೊತ್ತಾ ?

ಉಪೇಂದ್ರ ದೃಷ್ಟಿಯಲ್ಲಿ ರಾಜಕೀಯ ಹೇಗಿರಬೇಕು ಗೊತ್ತಾ ?

Posted By: Bharath kumar
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ಬರ್ತಾರೆ ಎಂಬ ಊಹಾಪೋಹಗಳು ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಅವರ ಅಭಿಮಾನಿಗಳಲ್ಲಿ ತುಂಬಾ ಚರ್ಚೆಯಾಗುತ್ತಿರುವ ವಿಚಾರ. ಇದಕ್ಕೆ ಪುಷ್ಠಿ ಕೊಡುವಂತೆ ಉಪೇಂದ್ರ ಅವರು ಕೂಡ ಆಗಾಗ ರಾಜಕೀಯದ ಬಗ್ಗೆ ಮಾತನಾಡುತ್ತಿರುತ್ತಾರೆ. ಈಗ ಈ ವಿಷ್ಯಕ್ಕೆ ಸಂಬಂಧಿಸಿದಂತೆ ಉಪ್ಪಿ ಮತ್ತೊಂದು ಸರ್ಪ್ರೈಸ್ ಕೊಟ್ಟಿದ್ದಾರೆ.

ಸದ್ಯ, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅಭಿನಯದ 'ಮುಕುಂದ ಮುರಾರಿ' ಚಿತ್ರ, ಇದೇ ವಾರ (ಅಕ್ಟೋಬರ್ 28) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮತ್ತೊಂದೆಡೆ ಉಪೇಂದ್ರ ಹಾಗೂ ಪ್ರೇಮಾ ಅಭಿನಯದಲ್ಲಿ ಮೂಡಿಬರುತ್ತಿರುವ 'ಮತ್ತೆ ಹುಟ್ಟಿ ಬಾ ಉಪೇಂದ್ರ' ಚಿತ್ರದ ಶೂಟಿಂಗ್ ನಡೆಯುತ್ತಿದೆ. ಇದಾದ ಬಳಿಕ ಮತ್ತೆರಡು ಹೊಸ ಪ್ರಾಜೆಕ್ಟ್ ಗಳು ಉಪ್ಪಿಯ ಕೈಯಲಿದ್ದು, ತುಂಬಾ ಬ್ಯುಸಿಯಾಗಿದ್ದಾರೆ.[ದೀಪಾವಳಿಗೆ 'ಮುಕುಂದ ಮುರಾರಿ'ಯ ದರ್ಶನ ]

ಹೀಗೆ, ಬೇರೆ ಬೇರೆ ನಿರ್ದೇಶಕರ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಉಪೇಂದ್ರ, ತಮ್ಮದೇ ನಿರ್ದೇಶನದ ಚಿತ್ರದ ಬಗ್ಗೆ ಇದುವರೆಗೂ ಯಾವುದೇ ಸುದ್ದಿ ಬಿಟ್ಟುಕೊಟ್ಟಿಲ್ಲ. ಆದ್ರೆ, ಈ ಕುತೂಹಲಕ್ಕೆ ಈಗ ಸ್ವತಃ ಉಪೇಂದ್ರ ಅವರೆ ತೆರೆ ಎಳೆದಿದ್ದಾರೆ.

ಅಷ್ಟಕ್ಕೂ, ಭವಿಷ್ಯದ ಭಾರತಕ್ಕೂ ಹಾಗೂ ಉಪೇಂದ್ರ ಅವರ ಮುಂದಿನ ಚಿತ್ರಕ್ಕೂ ಏನ್ ಸಂಬಂಧ ಅಂತೀರಾ ? ಉಪ್ಪಿ ನಿರ್ದೇಶನ ಮಾಡಲಿರುವ ಮುಂದಿನ ಸಿನಿಮಾ ಯಾವುದು ಅಂತ ಗೊತ್ತಾ ? ಇಲ್ಲಿದೆ ನೋಡಿ.

ಬಿಗ್ ಬಾಸ್ ನಲ್ಲಿ 'ಮುಕುಂದ ಮುರಾರಿ'

ಬಿಗ್ ಬಾಸ್ 'ಸೂಪರ್ ಸಂಡೆ ವಿತ್ ಕಿಚ್ಚ ಸುದೀಪ್' ವಿಶೇಷ ಕಾರ್ಯಕ್ರಮಕ್ಕೆ ಈ ವಾರ ರಿಯಲ್ ಸ್ಟಾರ್ ಉಪೇಂದ್ರ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ 'ಮುಕುಂದ ಮುರಾರಿ' ಚಿತ್ರದ ಬಗ್ಗೆ ಹಾಗೂ ಸುದೀಪ್ ಜೊತೆಗಿನ ಶೂಟಿಂಗ್ ಅನುಭವದ ಬಗ್ಗೆ ವೇದಿಕೆಯಲ್ಲಿ ಮಾತನಾಡಿದರು.

ಕಿಚ್ಚನ ಪ್ರಶ್ನೆಗೆ ಜಾಣ್ಮೆಯ ಉತ್ತರ

ದೇವರ ಬಗೆಗಿನ ಉಪೇಂದ್ರ ಅವರ ನಂಬಿಕೆಗಳ ಕುರಿತು ಸುದೀಪ್ ಕೆಲವು ಪ್ರಶ್ನೆಗಳನ್ನ ಕೇಳಿದರು. ಅದಕ್ಕೆ ಉಪ್ಪಿ ತಮ್ಮದೇ ಸ್ಟೈಲ್ ನಲ್ಲಿ ಉತ್ತರ ನೀಡಿದರು. ಈ ವೇಳೆ ಉಪ್ಪಿಯ ರಾಜಕೀಯ ಆಸಕ್ತಿಯ ಬಗ್ಗೆ ಕೂಡ ಸುದೀಪ್ ಕೇಳಿದರು.

'ಪ್ರಜಾಪ್ರಭುತ್ವ ತತ್ವ' ಬದಲಾಗಬೇಕು

ಸುದೀಪ್ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಉಪೇಂದ್ರ ''ನಮ್ಮ ದೇಶದಲ್ಲಿ ನಾಯಕ ಮತ್ತು ಸೇವಕ ಎನ್ನುವ ಕಾನ್ಸೆಪ್ಟ್‌ ಯಾಕಿದೆ ಅಂತಾನೇ ಗೊತ್ತಾಗ್ತಿಲ್ಲ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಆದರೆ ಚುನಾವಣೆ ದಿನ ಮಾತ್ರ ಪ್ರಜೆಗಳು ಪ್ರಭುಗಳು ಆಗ್ತಾರೆ''-ಉಪೇಂದ್ರ

'ರಾಜಕೀಯ ಕುರಿತು' ಉಪ್ಪಿ ಸಿನಿಮಾ

''ರಾಜಕೀಯದ ಬಗ್ಗೆ ಒಂದು ಸ್ಕ್ರಿಪ್ಟ್‌ ಮಾಡ್ತಿದ್ದಿನಿ. ಅದು ಪೂರ್ತಿ ಆದ್ಮೇಲೆ ನಿಮಗೆ ತೋರಿಸ್ತಿನಿ'' ಅಂತ ಕಿಚ್ಚ ಸುದೀಪ್ ಗೆ ಬಿಗ್ ಬಾಸ್ ವೇದಿಕೆಯಲ್ಲಿ ಉಪ್ಪಿ ತಮ್ಮ ಮುಂದಿನ ಪ್ರಾಜೆಕ್ಟ್ ಯಾವುದು ಅಂತ ಸುಳಿವು ಕೊಟ್ಟಿದ್ದಾರೆ.

ಹೇಗಿರುತ್ತೆ ಉಪ್ಪಿಯ ರಾಜಕೀಯ,?

ರಾಜಕೀಯದ ಬಗ್ಗೆ ಉಪ್ಪಿ ಸಿನಿಮಾ ಮಾಡ್ತಾರೆ ಎನ್ನುವುದು ಸ್ವತಃ ಉಪೇಂದ್ರ ಅವರೇ ಒಪ್ಪಿಕೊಂಡಿದ್ದಾರೆ. ಆದ್ರೆ, ಅದು ಯಾವ ತರ ಇರುತ್ತೆ ಅಂತ ಹೇಳಿಲ್ಲ. ಉಪೇಂದ್ರ, ರಾಜಕಾರಣಿಗಳನ್ನ ತಮ್ಮ ಸಿನಿಮಾದಲ್ಲಿ ಬೈಯುವುದರಲ್ಲಿ ಎತ್ತಿದ ಕೈ. ಹೀಗಾಗಿ ಅಭಿಮಾನಿಗಳಿಗೆ ಉಪ್ಪಿಯ ರಾಜಕೀಯ ಸಿನಿಮಾ ಬಗ್ಗೆ ಮೂಡಿಬರುತ್ತೆ ಎಂಬ ಕುತೂಹಲ ಹುಟ್ಟಿಕೊಂಡಿದೆ.

'ಪ್ರಜೆಗಳೇ ಪ್ರಭುಗಳು'

ಉಪೇಂದ್ರ ಅವರು ಹೇಳಿದ 'ಪ್ರಜೆಗಳೇ ಪ್ರಭುಗಳು' ಎಂಬ ಸಾಲುಗಳನ್ನ ಗಮನಿಸಿದ್ರೆ, ಖಂಡಿತ ಅವರ ಚಿತ್ರದಲ್ಲಿ ಏನೋ ಸಮ್ ಥಿಂಗ್ ಇರುತ್ತೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ರೆ, ಅದು ಏನು ಎಂಬುದೇ ಸದ್ಯದ ಕುತೂಹಲ.

'ಸೂಪರ್' ಚಿತ್ರದಲ್ಲಿತ್ತು 'ಉಪ್ಪಿ' ಐಡಿಯಾ

ಉಪೇಂದ್ರ ನಿರ್ದೇಶನ ಮಾಡಿದ್ದ ಸೂಪರ್ ಚಿತ್ರದಲ್ಲಿ ಉಪ್ಪಿಯ ಈ 'ಪ್ರಜೆಗಳೇ ಪ್ರಭುಗಳು' ಎಂಬ ಕಾನ್ಸಪ್ಟ್ ಇತ್ತು. ಮುಖ್ಯಮಂತ್ರಿಯಾದವರು ಸಾಮಾನ್ಯ ವ್ಯಕ್ತಿಯಂತೆ ಜೀವನ ಮಾಡಬಹುದು ಎಂಬುದನ್ನ ಈ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಉಪೇಂದ್ರ ತೋರಿಸಿದ್ದರು.

ಕಾವೇರಿ ವಿವಾದ ಬಗ್ಗೆ ಉಪ್ಪಿ ಹೇಳಿದ್ದೇನು

ಕಾವೇರಿ ವಿವಾದಕ್ಕೆ ಸಂಬಂಧಪಟ್ಟಂತೆ ''ಸಮಸ್ಯೆ ಸಮಸ್ಯೆ ಅಂತ ಚರ್ಚೆ ಮಾಡುವ ಬದಲು, ಸಮಸ್ಯೆಗೆ ಪರಿಹಾರ ಏನು ಅಂತ ಚರ್ಚೆ ಮಾಡಿ, ವಿವಾದ ದೊಡ್ಡದು ಮಾಡ್ತಿರೋದು ನಮ್ಮ ರಾಜಕಾರಣಿಗಳು, ಸಮುದ್ರದ ನೀರನ್ನ ಬಳಕೆ ಮಾಡುವ ಬಗ್ಗೆ ಯೋಚನೆ ಮಾಡಿದ್ದರೆ ಈ ಸಮಸ್ಯೆಗೆ ಪರಿಹಾರ ಸಿಗಬಹುದು. ಪಾಸಿಟೀವ್ ಯೋಚನೆ ಮಾಡಿ'' ಅಂತ ಉಪ್ಪಿ ಒಂದು ಸೂಪರ್ ಐಡಿಯಾ ಕೊಟ್ಟಿದ್ದರು.[ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ಉಪೇಂದ್ರ ಕೊಟ್ಟ ಸೂಪರ್ ಸುಪ್ರೀಂ ಐಡಿಯಾ!]

ರಾಜಕೀಯಕ್ಕೆ ಬರ್ತಾರ ಉಪ್ಪಿ ?

ಉಪೇಂದ್ರ ಅವರು ರಾಜಕೀಯ ಕುರಿತು ಸ್ಕ್ರಿಪ್ಟ್ ರೆಡಿ ಮಾಡುತ್ತಿದ್ದಾರೆ ಎಂಬುದರ ಅರ್ಥ, ಸಿನಿಮಾ ಜೊತೆಗೆ ರಾಜಕೀಯ ಪ್ರವೇಶಕ್ಕೆ ವೇದಿಕೆ ಕೂಡ ಎಂಬ ಸಣ್ಣ ವಿಚಾರ ಗೋಚರವಾಗುತ್ತಿದೆ. ಆದ್ರೆ, ಅದು ಎಷ್ಟರ ಮಟ್ಟಿಗೆ ನಿಜವಾಗುತ್ತೆ ಅಂತ ಕಾದು ನೋಡೋಣ.[ಉಪೇಂದ್ರಗೆ ಆಕ್ಷನ್ ಕಟ್ ಹೇಳಲಿದ್ದಾರೆ 'ಮುಂಗಾರು ಮಳೆ' ನಿರ್ದೇಶಕ ]

English summary
Kannada Actor Upendra expressed his desire to make political-based movie during a chat with Kiccha Sudeep in 'Super Sunday with Kiccha Sudeep' at Bigg Boss Kannada 4 Stage.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada