»   » IPL ಉದ್ಘಾಟನೆ: ರಣ್ವೀರ್ ಸಿಂಗ್ ಸಂಭಾವನೆ ಮೀರಿಸಿದ ಮತ್ತೊಬ್ಬ ನಟ.!

IPL ಉದ್ಘಾಟನೆ: ರಣ್ವೀರ್ ಸಿಂಗ್ ಸಂಭಾವನೆ ಮೀರಿಸಿದ ಮತ್ತೊಬ್ಬ ನಟ.!

Posted By:
Subscribe to Filmibeat Kannada

ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) 11ನೇ ಆವೃತ್ತಿಗೆ ಕ್ಷಣಗಣನೆ ಶುರುವಾಗಿದ್ದು, ಉದ್ಘಾಟನೆ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಲು ಬಾಲಿವುಡ್ ಸ್ಟಾರ್ ಗಳು ಸಿದ್ದವಾಗುತ್ತಿದ್ದಾರೆ.

ರಣ್ವೀರ್ ಸಿಂಗ್, ವರುಣ್ ಧವನ್, ಪರಿಣಿತಿ ಚೋಪ್ರಾ, ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಹಲವರು ಹೆಜ್ಜೆ ಹಾಕಲಿದ್ದು, ನಟ ರಣ್ವೀರ್ ಸಿಂಗ್ ಅತಿ ಹೆಚ್ಚು ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿತ್ತು. ಆದ್ರೀಗ, ರಣ್ವೀರ್ ಸಿಂಗ್ ಗಿಂತ ಮತ್ತೊಬ್ಬ ನಟ ಹೆಚ್ಚು ಸಂಭಾವನೆ ತೆಗೆದುಕೊಂಡಿದ್ದಾರಂತೆ.

IPL ಉದ್ಘಾಟನೆಯಲ್ಲಿ ಡ್ಯಾನ್ಸ್ ಮಾಡಲು ರಣ್ವೀರ್ ಗೆ ಇಷ್ಟೊಂದು ಕೋಟಿನಾ.?

ಹೌದು, ಐಪಿಎಲ್ ವೇದಿಕೆಯಲ್ಲಿ ಕುಣಿಯಲು ರಣ್ವೀರ್ ಸಿಂಗ್ 5 ಕೋಟಿ ಪಡೆಯಲಿದ್ದಾರಂತೆ. ಆದ್ರೆ, ರಣ್ವೀರ್ ಸ್ನೇಹಿತ ಮತ್ತು ಬಾಲಿವುಡ್ ನ ಡ್ಯಾನ್ಸಿಂಗ್ ಸ್ಟಾರ್ ವರುಣ್ ಧವನ್ ಸುಮಾರು 6 ಕೋಟಿ ಸಂಭಾವನೆ ಆಫರ್ ಮಾಡಿದ್ದಾರಂತೆ. ಈ ಮೂಲಕ ಐಪಿಎಲ್ ಉದ್ಘಾಟನೆಯಲ್ಲಿ ಡ್ಯಾನ್ಸ್ ಮಾಡಲು ವರುಣ್ ಹೆಚ್ಚು ಹಣ ಪಡೆದಿದ್ದಾರೆ ಎನ್ನಲಾಗಿದೆ.

Varun Dhawan highest paid performer at IPL opening

ಏಪ್ರಿಲ್ 7 ರಂದು ಮುಂಬೈನಲ್ಲಿ ಐಪಿಎಲ್ ಉದ್ಘಾಟನೆ ಸಮಾರಂಭ ನಡೆಯಲಿದೆ. ಮೂಲಗಳ ಪ್ರಕಾರ ಐಪಿಎಲ್ ಉದ್ಘಾಟನೆ ಪಂದ್ಯಕ್ಕೆ ಸುಮಾರು 20 ರಿಂದ 30 ಕೋಟಿ ಖರ್ಚು ಮಾಡಲಾಗುತ್ತಿದೆ. 'ಚೆನ್ನೈ ಸೂಪರ್ ಕಿಂಗ್' ತಂಡದ ನಾಯಕ ಎಂ.ಎಸ್ ಧೋನಿ ಮತ್ತು 'ಮುಂಬೈ ಇಂಡಿಯೆನ್ಸ್' ತಂಡದ ನಾಯಕ ರೋಹಿತ್ ಶರ್ಮಾ ಮಾತ್ರ ಉದ್ಘಾಟನೆ ದಿನ ಭಾಗಿಯಾಗಲಿದ್ದಾರಂತೆ. ಉಳಿದ ನಾಯಕರು ಕಾರಣಾಂತರಗಳಿಂದ ಮೊದಲ ದಿನ ಗೈರಾಗಲಿದ್ದಾರೆ ಎನ್ನಲಾಗಿದೆ.

English summary
Ranveer Singh had got the highest remuneration when it comes to performing at the IPL opening night. But, the latest buzz suggests that it's Varun Dhawan who has marched ahead of him when it comes to the remuneration.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X