For Quick Alerts
  ALLOW NOTIFICATIONS  
  For Daily Alerts

  ವೀಣಾ ಮಲಿಕ್ ಅಭಿಮಾನಿಗಳಿಗೆ ಕರ್ಣಾನಂದ ಸುದ್ದಿ

  By ರವಿಕಿಶೋರ್
  |

  ಪಾಕಿಸ್ತಾನದ ಹಾಟ್ ತಾರೆ ವೀಣಾ ಮಲಿಕ್ ಗಾಂಧಿನಗರಕ್ಕೆ ಅಡಿಯಿಟ್ಟದ್ದೂ ಆಯಿತು ಶ್ರೀರಾಮಸೇನೆ ಗಲಾಟೆ ಮಾಡಿದ್ದೂ ಆಯಿತು. ಈ ಹಾಟ್ ತಾರೆ ಈಗ ಮಂದಿರಾ ಬೇಡಿ ಹಾದಿಯಲ್ಲಿ ಹೆಜ್ಜೆ ಹಾಕಲು ಹೊರಟಿದ್ದಾರೆ. ಅಂದರೆ ಕ್ರಿಕೆಟ್ ಕಾಮೆಂಟರಿಗೆ ಹೊರಳಿದ್ದಾರೆ ವೀಣಾ ಮಲಿಕ್.

  ಅದೂ ಭಾರತದ ಟಿವಿಯೊಂದರಲ್ಲಿ ವೀಕ್ಷಕ ವಿವರಣೆ ನೀಡುವಂತೆ ವೀಣಾಗೆ ಆಫರ್ ಬಂದಿದೆ. ಈ ಸುವರ್ಣ ಅವಕಾಶವನ್ನು ವೀಣಾ ಮಲಿಕ್ ಮಿಸ್ ಮಾಡಿಕೊಳ್ಳುತ್ತಿಲ್ಲ. ಆಗಲಿ ಅದೂ ಒಂದು ಕೈ ನೋಡೇ ಬಿಡುತ್ತೇನೆ ಎಂದಿದ್ದಾರೆ ಈ ಪಾಕ್ ಗೊಂಬೆ.

  "ಕ್ರಿಕೆಟ್ ನನ್ನ ನೆಚ್ಚಿನ ಕ್ರೀಡೆ. ರೆಗ್ಯುಲರ್ ಆಗಿ ಕ್ರಿಕೆಟ್ ನೋಡುತ್ತಿರುತ್ತೇನೆ. ಈಗ ಕೈಯಲ್ಲಿ ಸಾಕಷ್ಟು ಚಿತ್ರಗಳು ಇರುವುದರಿಂದ ಆಕಡೆಗೆ ಅಷ್ಟಾಗಿ ಗಮನ ಕೊಡಲು ಸಾಧ್ಯವಾಗುತ್ತಿಲ್ಲ. ಆದರೆ ಕ್ರಿಕೆಟ್ ಮೇಲಿನ ಅಭಿಮಾನದಿಂದ ಕಾಮೆಂಟೇಟರ್ ಆಗುತ್ತಿದ್ದೇನೆ" ಎಂದಿದ್ದಾರೆ ವೀಣಾ.

  ಮಾಜಿ ಕ್ರಿಕೆಟಿಗರಾದ ಚೇತನ್ ಶರ್ಮ, ಯೋಗರಾಜ್ ಸಿಂಗ್, ಯಶಪಾಲ್ ಶರ್ಮ, ಸಂಜಯ್ ಭಾರದ್ವಾಜ್ ಹಾಗೂ ರಾಜ್ ಕುಮಾರ್ ಶರ್ಮಾ ಅವರ ಜೊತೆ ವೀಣಾ ಕೂಡ ಇನ್ನು ಮುಂದೆ ಕಾಣಿಸಲಿದ್ದಾರೆ. ಈಗಾಗಲೆ ವೀಣಾರ ಬೋಲ್ಡ್ ಲುಕ್ ಗೆ ಪಡ್ಡೆಗಳು ಪಲ್ಟಿ ಹೊಡೆಯುತ್ತಿದ್ದಾರೆ. ಇನ್ನು ಈಕೆಯ ಕ್ರಿಕೆಟ್ ಕಾಮೆಂಟರಿ ಕೇಳಿ ಅಭಿಮಾನಿಗಳಿಗೆ ಕರ್ಣಾನಂದ ಆಗಬಹುದು.

  ವೀಣಾ ಮಲಿಕ್ ಅವರಿಗೆ ಯುವರಾಜ್ ಸಿಂಗ್ ಎಂದರೂ ಇಷ್ಟವಂತೆ ಹಾಗೆಯೇ ಶಾಹಿದ್ ಅಫ್ರಿದಿ ಅಂದರೂ ಅಷ್ಟೇನಂತೆ. ಇವರಿಬ್ಬರ ಆಡ ನೋಡುವುದೇ ಒಂದು ಆನಂದ ಎಂದಿದ್ದಾರೆ. ಇವರಿಬ್ಬರೂ ಹೃದಯದಿಂದ ಆಡುತ್ತಾರೆ. ಇವರ ನಿಯತ್ತನ್ನು ಯಾರಿಂದಲೂ ಕೊಂಡುಕೊಳ್ಳಲು ಸಾಧ್ಯವಿಲ್ಲ. ಹಾಗೆಯೇ ತಾನು ಸಚಿನ್ ತೆಂಡೂಲ್ಕರ್ ಅವರ ಅಭಿಮಾನಿ. ಆದರೆ ಅವರು ಪಾಕಿಸ್ತಾನದ ವಿರುದ್ಧ ಆಡದಿದ್ದಾಗ ಮಾತ್ರ ಎಂದಿದ್ದರು ಒಮ್ಮೆ. (ಏಜೆನ್ಸೀಸ್)

  English summary
  Pakistani beauty Veena Malik has incarnated as cricket commentator for India TV. Veena Malik makes best use of chances she receives. Also, she is very much aware of the appropriate measures to be taken to gain publicity.
  Wednesday, August 8, 2012, 17:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X