»   » ಪಾರ್ವತಿ ಪ್ರೇಮ ಪ್ರಸಂಗದಲ್ಲಿ 3G ಸ್ಟಾರ್ ವಿನಯ್?

ಪಾರ್ವತಿ ಪ್ರೇಮ ಪ್ರಸಂಗದಲ್ಲಿ 3G ಸ್ಟಾರ್ ವಿನಯ್?

Posted By:
Subscribe to Filmibeat Kannada

ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಮೇಲೆ ಗಾಸಿಪ್, ಅಂತೆ-ಕಂತೆ ಕಟ್ಟು ಕಥೆಗಳೆಲ್ಲಾ ಮಾಮೂಲು. ಇದೀಗ ಇದೇ ಕಾಲಂಗೆ ಅಣ್ಣಾವ್ರ ಕುಟುಂಬದ ಕುಡಿ ವಿನಯ್ ರಾಜ್ ಕುಮಾರ್ ಲೇಟೆಸ್ಟ್ ಆಗಿ ಎಂಟ್ರಿಕೊಟ್ಟಿದ್ದಾರೆ.

'ಸಿದ್ದಾರ್ಥ' ಸಿನಿಮಾದಲ್ಲಿ ಲವ್ವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ವಿನಯ್, ರಿಯಲ್ ಲೈಫ್ ನಲ್ಲೂ ಲವ್ವಿ-ಡವ್ವಿ ಅಂತ ಹೀರೋಯಿನ್ ಹಿಂದೆ ಬಿದ್ದಿದ್ದಾರಂತೆ...ಹೀಗಂತ ಗಾಳಿಯಲ್ಲಿ ಯಾರೋ ಹಾರಿಸಿದ ಗುಂಡು, ಗಾಂಧಿನಗರದಲ್ಲಿ 'ಬ್ಲಾಸ್ಟಿಂಗ್' ನ್ಯೂಸ್ ಆಗಿಬಿಟ್ಟಿದೆ.


ಅಷ್ಟಕ್ಕೂ ವಿನಯ್ ಜೊತೆ ಲಿಂಕ್ ಅಪ್ ಆಗಿರುವ ನಟೀಮಣಿ ಪಾರ್ವತಿ ನಾಯರ್. ಬೆಂಗಳೂರಲ್ಲೇ ಬೆಳೆದ ಪಾರ್ವತಿ ನಾಯರ್, 2009 ರ ಮಿಸ್ ಕರ್ನಾಟಕ. ಈಗೀಗ ಚಿತ್ರರಂಗದಲ್ಲಿ ಅಂಬೆಗಾಲಿಡುತ್ತಿರುವ ಪಾರ್ವತಿ, ಕಾಲಿವುಡ್ ನಲ್ಲಿ ಅಜಿತ್ ಅಭಿನಯದ 'ಎನ್ನೈ ಅರಿಂದಾಲ್' ಚಿತ್ರದಲ್ಲಿ ಅರುಣ್ ವಿಜಯ್ ಜೊತೆ ಜೋಡಿಯಾಗಿ ನಟಿಸಿದ್ದಾರೆ. [ವಿನಯ್ ಈಗ 'ಮೆಗಾ 3G ಪವರ್ ಸ್ಟಾರ್']


Vinay Rajkumar is just a friend of mine says Parvathy Nair

ಹಾಗೇ, ರಮೇಶ್ ಅರವಿಂದ್ ನಿರ್ದೇಶಿಸುತ್ತಿರುವ 'ಉತ್ತಮ ವಿಲನ್' ಚಿತ್ರದಲ್ಲೂ ಅಭಿನಯಿಸಿದ್ದಾರೆ. ಕನ್ನಡದಲ್ಲಿ 'ವಾಸ್ಕೋಡಿಗಾಮ' ಚಿತ್ರದಲ್ಲಿ ಕಾಣಿಸಿಕೊಂಡಿರುವ ಪಾರ್ವತಿಗೆ, ಕಾಲೇಜು ದಿನಗಳಿಂದಲೂ ವಿನಯ್ ಪರಿಚಯ.


ಬೇರೆ ಬೇರೆ ಕಾಲೇಜ್ ನಲ್ಲಿ ಓದಿದರೂ, ವಿನಯ್ ಮತ್ತು ಪಾರ್ವತಿ ಬೆಸ್ಟ್ ಫ್ರೆಂಡ್ಸ್. ಅಷ್ಟು ಬಿಟ್ಟರೆ, ಪ್ರೀತಿ-ಪ್ರೇಮ ಏನೂ ಇಲ್ಲ ಅಂತ ಖುದ್ದು ಪಾರ್ವತಿ ನಾಯರ್ ಸ್ಪಷ್ಟನೆ ನೀಡಿದ್ದಾರೆ. ವಿನಯ್ ರನ್ನ ತೀರಾ ಹತ್ತಿರದಿಂದ ನೋಡಿರುವ ಪಾರ್ವತಿಗೆ ವಿನಯ್ ಗುಣ ಇಷ್ಟವಂತೆ. ['ಸಿದ್ದಾರ್ಥ' ವಿಮರ್ಶೆ: ಅಣ್ಣಾವ್ರ ಹೆಸರುಳಿಸಿದ ಮೊಮ್ಮಗ]


'ಸಿದ್ದಾರ್ಥ' ಚಿತ್ರವನ್ನ ನೋಡಿ ವಿನಯ್ ಆಕ್ಟಿಂಗ್ ಮೆಚ್ಚಿಕೊಂಡಿರುವ ಪಾರ್ವತಿ, ''ಸಿದ್ದಾರ್ಥ ಪಾತ್ರ ವಿನಯ್ ಗೆ ತದ್ವಿರುದ್ಧ. ತುಂಬಾ ಸೈಲೆಂಟ್ ಹುಡುಗ'' ಅಂತಲೂ ಹೇಳಿಕೆ ನೀಡಿದ್ದಾರೆ. ಅಲ್ಲಿಗೆ, ತಡಬುಡವಿಲ್ಲದೆ ಹತ್ತಿಕೊಂಡಿರುವ ಬೆಂಕಿಗೆ ಪಾರ್ವತಿ ನಾಯರ್ ನೀರು ಸುರಿದು ತಣ್ಣಗೆ ಮಾಡಿದ್ದಾರೆ.

English summary
The speculations about Vinay Rajkumar dating Actress Parvathy Nair is doing rounds from quite some time. Now, Parvathy Nair has clarified that her relationship with Vinay Rajkumar is 'Just Friendship'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada