»   » ಬಾಲಿವುಡ್ಡಿಗೆ ಹಾರಲಿದ್ದಾರಾ ಅಣ್ಣಾವ್ರ ಮೊಮ್ಮಗ ವಿನಯ್?

ಬಾಲಿವುಡ್ಡಿಗೆ ಹಾರಲಿದ್ದಾರಾ ಅಣ್ಣಾವ್ರ ಮೊಮ್ಮಗ ವಿನಯ್?

Posted By:
Subscribe to Filmibeat Kannada

ವರ ನಟ ಡಾ.ರಾಜ್ ಕುಮಾರ್ ಕುಟುಂಬದ ಮೂರನೇ ತಲೆಮಾರಿನ ಕುಡಿ ವಿನಯ್ ರಾಜ್ ಕುಮಾರ್ ಅಭಿನಯಿಸಲಿರುವ ಎರಡನೇ ಚಿತ್ರ 'R The King' ಟೈಟಲ್ ಲಾಂಚ್ ಮೊನ್ನೆಯಷ್ಟೇ, ಅಂದ್ರೆ ಅಪ್ಪಾಜಿ ಹುಟ್ಟುಹಬ್ಬದಂದು ನೆರವೇರಿತು.

'R The King' ಆಗುವುದಕ್ಕೆ 3ಜಿ ಸ್ಟಾರ್ ವಿನಯ್ ರಾಜ್ ಕುಮಾರ್ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಹೀಗಿರುವಾಗಲೇ ನಿರ್ದೇಶಕ ಪ್ರೇಮ್ ಅಡ್ಡದಿಂದ ಇಂಟ್ರೆಸ್ಟಿಂಗ್ ಸುದ್ದಿಯೊಂದು ಹೊರಬಿದ್ದಿದೆ.

Vinay Rajkumar to debut in Bollywood?

ಅದೇನಪ್ಪಾ ಅಂದ್ರೆ, ಬರೀ ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲ, ಬಾಲಿವುಡ್ ಬೆಳ್ಳಿತೆರೆಯಲ್ಲೂ ವಿನಯ್ ರಾಜ್ ಕುಮಾರ್ ವಿಜೃಂಭಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ನಿರ್ದೇಶಕ 'ಜೋಗಿ' ಪ್ರೇಮ್ ಹೇಳುವ ಪ್ರಕಾರ, 'R The King' ಪಕ್ಕಾ ಆಕ್ಷನ್ ಸಿನಿಮಾ. ಎಲ್ಲಾ ಭಾಷೆಗಳಿಗೂ ಕಥೆ ಸೂಟ್ ಆಗುವುದರಿಂದ ಚಿತ್ರವನ್ನ ಹಿಂದಿಯಲ್ಲೂ ತೆರೆಗೆ ತರುವ ಆಲೋಚನೆ ಇದೆಯಂತೆ.

'R The King' ಚಿತ್ರದ ಬಹುಭಾಗ ಚಿತ್ರೀಕರಣ ವಿದೇಶದಲ್ಲೇ ನಡೆಯಲಿದೆ. ಪರಭಾಷೆಯಲ್ಲೂ ಚಿತ್ರ ನಿರ್ಮಾಣ ಮಾಡುವ ಪ್ಲಾನ್ ಇರುವುದರಿಂದ ಪರಭಾಷಾ ನಟಿಯನ್ನೇ ಆಯ್ಕೆ ಮಾಡುವ ಸಾಧ್ಯತೆ ಇದೆ. [ವಿನಯ್ ರಾಜ್ ಹೊಸ ಚಿತ್ರ 'R The King' ಶುರು ]

ಸದ್ಯಕ್ಕೆ ಟೀಸರ್ ಗಾಗಿ ವಿಶೇಷ ಚಿತ್ರೀಕರಣ ನಡೆಯುತ್ತಿದೆ. ಮೇ 7, ವಿನಯ್ ರಾಜ್ ಕುಮಾರ್ ಹುಟ್ಟುಹಬ್ಬದಂದು ಟೀಸರ್ ಬಿಡುಗಡೆ ಆಗಲಿದೆ. 'ಸಿದ್ದಾರ್ಥ' ಚಿತ್ರದಲ್ಲಿ ಲವ್ವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ವಿನಯ್ ರಾಜ್ ಕುಮಾರ್, 'R The King' ಸಿನಿಮಾದಲ್ಲಿ ಆಕ್ಷನ್ ಹೀರೋ ಆಗಿ ಹೇಗೆ ಕಾಣಿಸುತ್ತಾರೆ ಅನ್ನೋದು ಸದ್ಯದ ಕುತೂಹಲ. (ಏಜೆನ್ಸೀಸ್)

English summary
According to the Grapevine, Dr.Rajkumar's grand son Vinay Rajkumar to make Bollywood Debut with the movie 'R.The King'. Talks are on with regard to remake 'R.The King' in Hindi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada