»   » ಆರ್ಯನ್ ಬಳಿಕ ರಮ್ಯಾ ಸದ್ದಿಲ್ಲ ಸುಳಿವಿಲ್ಲ ಏನಾದರು?

ಆರ್ಯನ್ ಬಳಿಕ ರಮ್ಯಾ ಸದ್ದಿಲ್ಲ ಸುಳಿವಿಲ್ಲ ಏನಾದರು?

By: ಉದಯರವಿ
Subscribe to Filmibeat Kannada

ಸ್ಯಾಂಡಲ್ ವುಡ್ ನ ಲಕ್ಕಿ ಸ್ಟಾರ್ ಹಾಗೂ ಮಂಡ್ಯದ ಮಾಜಿ ಸಂಸದೆ ರಮ್ಯಾ ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆಗಳು ಚಿದಂಬರ ರಹಸ್ಯದಂತೆ ಸ್ಯಾಂಡಲ್ ವುಡ್ ನಲ್ಲಿ ಕಾಡುತ್ತಿವೆ. ರಮ್ಯಾ ಸುದ್ದಿಯಿಲ್ಲದೆ, ಸುಳಿವಿಲ್ಲದೆ ಅವರ ಅಭಿಮಾನಿಗಳೂ ಕಂಗಾಲಾಗಿದ್ದಾರೆ.

'ಆರ್ಯನ್' ಚಿತ್ರದ ಬಳಿಕ ರಮ್ಯಾ ಅವರು ಬಹುತೇಕ ಕಾಣೆಯಾಗಿದ್ದಾರೆ. ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಯಾರಿಗೂ ಮಾಹಿತಿಯಿಲ್ಲ. ಒಂದು ಮೂಲದ ಪ್ರಕಾರ ಅವರು ಸದ್ಯಕ್ಕೆ ಲಂಡನ್ ನಲ್ಲಿದ್ದಾರಂತೆ. ಅಲ್ಲಿ ಏನು ಮಾಡುತ್ತಿದ್ದಾರೆ ಎಂಬುದು ಮಾತ್ರ ಅವರ ಆಪ್ತ ಕಾರ್ಯದರ್ಶಿಗೂ ಗೊತ್ತಿಲ್ಲವಂತೆ.

where is Sandalwood Queen Ramya?

ಅವರ ಟ್ವಿಟ್ಟರ್ ಖಾತೆಯೂ ಸೈಲೆಂಟ್ ಆಗಿದೆ. ಸದಾ ಒಂದಿಲ್ಲೊಂದು ಟ್ವೀಟ್ ಮಾಡಿ ಚರ್ಚೆಗೆ ಗ್ರಾಸವಾಗುತ್ತಿದ್ದ ರಮ್ಯಾ ಅವರು ಈಗ ಟ್ವಿಟ್ಟರ್ ನಲ್ಲೂ ಇಲ್ಲ. ಬಹುಶಃ ಅವರು ಮಂಡ್ಯ ಕ್ಷೇತ್ರದಲ್ಲಿ ಸೋತ ಬಳಿಕ ಸೋಲಿನ ಪರಾಮರ್ಶೆಯಲ್ಲಿರಬಹುದೇ?

ಆಗಸ್ಟ್ 2ರ ಬಳಿಕ ಅವರ ಟ್ವೀಟ್ಟರ್ ಖಾತೆಯೂ ಮೌನಕ್ಕೆ ಶರಣಾಗಿದೆ. ರಮ್ಯಾ ಮೌನಕ್ಕೆ ಕಾರಣ ಏನಿರಬಹುದು? ಹೀರೋಗಳಿಗೆ ಕೊಡುವಷ್ಟೇ ಸಂಭಾವನೆಯನ್ನು ನಟಿಯರಿಗೂ ಕೊಡಬೇಕು ಎಂದು ಹುಯಿಲೆಬ್ಬಿಸಿದ್ದ ರಮ್ಯಾ ಮತ್ತೆ ಸ್ಯಾಂಡಲ್ ವುಡ್ ಗೆ ಮರಳುತ್ತಾರಾ? ರಮ್ಯಾ ಚೈತ್ರ ಕಾಲದ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳಿದ್ದಾರೆ.

English summary
Sandalwood Queen Ramya seems to have disappeared. The actress is known to be very active on her Facebook and Twitter account. However, her last post on Facebook was on August 26th and her last tweet was on August 2nd. Apparently, even the close associates are not in contact with the actress.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada