»   » ದರ್ಶನ್-ಇಮ್ರಾನ್ ಸರ್ದಾರಿಯಾ ಮಧ್ಯೆ ಹುಳಿ ಹಿಂಡಿದವರಾರು?

ದರ್ಶನ್-ಇಮ್ರಾನ್ ಸರ್ದಾರಿಯಾ ಮಧ್ಯೆ ಹುಳಿ ಹಿಂಡಿದವರಾರು?

Posted By: ಹರಾ
Subscribe to Filmibeat Kannada

ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಯಾರಿಗ್ತಾನೆ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗದಲ್ಲಿ 300ಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿರುವ ಇಮ್ರಾನ್ ಸರ್ದಾರಿಯಾ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಹಾಟ್ ಫೇವರಿಟ್.

ಸ್ಟೈಲಿಶ್ ಕೊರಿಯೋಗ್ರಫರ್ ಅಂತಲೇ ಜನಪ್ರಿಯರಾಗಿರುವ ಇಮ್ರಾನ್ ಸರ್ದಾರಿಯಾ ಸಾಹಸ ಸಿಂಹ ಡಾ.ವಿಷ್ಣುವರ್ಧನ್, ಶಿವರಾಜ್ ಕುಮಾರ್, ಉಪೇಂದ್ರ, ಗಣೇಶ್, ಸುದೀಪ್, ಶರಣ್, ಜಗ್ಗೇಶ್, ಯಶ್ ಸೇರಿದಂತೆ ಸ್ಯಾಂಡಲ್ ವುಡ್ ನ ಎಲ್ಲಾ ಟಾಪ್ ನಟರ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಆದ್ರೆ, ಒಬ್ಬರನ್ನ ಬಿಟ್ಟು. [ದರ್ಶನ್ ಕುತ್ತಿಗೆಗೆ ಕೈಹಾಕಿ ಆಚೆ ದಬ್ಬಿದವರು ಯಾರು?]

ಅದು ಯಾರು ಅಂದ್ರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್. ಕನ್ನಡ ಚಿತ್ರರಂಗದಲ್ಲಿ 300ಕ್ಕೂ ಹೆಚ್ಚು ಹಾಡುಗಳಿಗೆ ಕೋರಿಯೋಗ್ರಾಫ್ ಮಾಡಿರುವ ಇಮ್ರಾನ್ ಸರ್ದಾರಿಯಾ, ದರ್ಶನ್ ರವರ ಒಂದೇ ಒಂದು ಹಾಡಿಗೂ ಸ್ಪೆಪ್ಸ್ ಹೇಳಿಕೊಟ್ಟಿಲ್ಲ. ಇದಕ್ಕೆ ಕಾರಣ ಏನು ಅನ್ನೋದನ್ನ ಕನ್ನಡ ದಿನಪತ್ರಿಕೆ ವಿಜಯ ಕರ್ನಾಟಕ ಬಯಲು ಮಾಡಿದೆ. ಮುಂದೆ ಓದಿ....

'Mr.ಐರಾವತ' ಚಿತ್ರಕ್ಕೆ ನೃತ್ಯ ನಿರ್ದೇಶನ ಮಾಡ್ಬೇಕಿತ್ತು.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಇದೇ ವಾರ ರಿಲೀಸ್ ಆಗುತ್ತಿರುವ 'Mr.ಐರಾವತ' ಚಿತ್ರದ ಹಾಡೊಂದಕ್ಕೆ ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಮಾಡಬೇಕಿತ್ತು. ಹಾಡಿನ ಬಗ್ಗೆ ಕಾನ್ಸೆಪ್ಟ್ ಕೂಡ ಚರ್ಚೆ ಆಗಿತ್ತು. ಆದ್ರೆ, ಕಾರಣಾಂತರಗಳಿಂದ ಕಡೆ ಗಳಿಗೆಯಲ್ಲಿ ಇಮ್ರಾನ್ ಸರ್ದಾರಿಯಾಗೆ ಸಿಕ್ಕ ಅವಕಾಶ ಕೈತಪ್ಪಿತು. [ನಿರ್ದೇಶಕ ಎ.ಪಿ.ಅರ್ಜುನ್ ರನ್ನ ದೂರ ತಳ್ಳಿದ್ರಾ ದರ್ಶನ್.?]

'ಅಭಯ್' ಚಿತ್ರಕ್ಕೂ ಚಾನ್ಸ್ ಮಿಸ್.!

ದರ್ಶನ್ ಅಭಿನಯದ 'ಅಭಯ್' ಚಿತ್ರದ ಹಾಡುಗಳಿಗೂ ಇಮ್ರಾನ್ ಸರ್ದಾರಿಯಾ ಕೆಲಸ ಮಾಡಬೇಕಿತ್ತು. ಆದ್ರೆ, ಆ ಅವಕಾಶ ಕೂಡ ಮಿಸ್ ಆಯ್ತು.

ಮಂಡ್ಯದಲ್ಲಿ ಕಿರಿಕ್ ??

ರೆಬೆಲ್ ಸ್ಟಾರ್ ಅಂಬರೀಶ್ ರವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಲು ಸ್ಟಾರ್ ಕಲಾವಿದರು ಬಂದಿದ್ದರು. ಸ್ಟಾರ್ ನಟರು ನೃತ್ಯ ಪ್ರದರ್ಶನ ನೀಡಬೇಕಿತ್ತು. ಹರ್ಷ ಮತ್ತು ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಜವಾಬ್ದಾರಿ ವಹಿಸಿಕೊಂಡಿದ್ದರು.

ಮಂಡ್ಯದಲ್ಲಿ ಏನಾಯ್ತು?

ದರ್ಶನ್ ರವರಿಗೆ ವಿಭಿನ್ನ ರೀತಿಯ ಸ್ಟೆಪ್ ಗಳನ್ನು ಇಮ್ರಾನ್ ಸರ್ದಾರಿಯಾ ಹೇಳಿಕೊಟ್ಟರಂತೆ. ಸ್ಟೆಪ್ ಗಳ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು ಅನ್ನೋದು ಗಾಂಧಿನಗರದ ಗುಲ್ಲು.

ಇಬ್ಬರ ಮಧ್ಯೆ ಹುಳಿ ಹಿಂಡಿದವರು ಯಾರು?

''ಇಮ್ರಾನ್ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನ ದರ್ಶನ್ ಬಳಿ ಯಾರೋ ಹೇಳಿದ್ದಾರೆ. ಅದಕ್ಕೆ ದರ್ಶನ್ ಅಪ್ ಸೆಟ್ ಆಗಿದ್ದಾರೆ ಅಂತ ಹೇಳಲಾಗುತ್ತಿದೆ'' ಅಂತ ದಿನಪ್ರತಿಕೆ ವರದಿ ಮಾಡಿದೆ.

ದರ್ಶನ್ ಜೊತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ.

''ದರ್ಶನ್ ಸರ್ ಜೊತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲೇ ಸಿಕ್ಕರೂ ಚೆನ್ನಾಗಿ ಮಾತನಾಡಿಸುತ್ತಾರೆ. ಅವರ ಬಳಿ ನನ್ನ ಬಗ್ಗೆ ಯಾರಾದರೂ ಕೆಟ್ಟ ಅಭಿಪ್ರಾಯ ಮೂಡಿಸುತ್ತಿದ್ದಾರಾ ಅನ್ನೋದು ಗೊತ್ತಾಗುತ್ತಿಲ್ಲ'' ಅಂತ ವಿಜಯ ಕರ್ನಾಟಕ ದಿನಪತ್ರಿಕೆಗೆ ಇಮ್ರಾನ್ ಸರ್ದಾರಿಯಾ ಹೇಳಿಕೆ ನೀಡಿದ್ದಾರೆ.

English summary
Is there is misunderstanding between Kannada Actor Darshan and Choreographer Imran Sardhariya? This question has arised since Choreographer Imran Sardhariya has missed his chances working with the Challenging Star.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada