»   » ದೀಪಾ ಸನ್ನಿಧಿಯವರ ಅಲರ್ಜಿನೇ ಅವರಿಗೆ ಮುಳುವಾಯ್ತಾ?

ದೀಪಾ ಸನ್ನಿಧಿಯವರ ಅಲರ್ಜಿನೇ ಅವರಿಗೆ ಮುಳುವಾಯ್ತಾ?

Posted By:
Subscribe to Filmibeat Kannada

'ಸಾರಥಿ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜೋಡಿಯಾಗಿ ಮೊದಲ ಸಿನಿಮಾದಲ್ಲೇ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದ ನಟಿ ಚಿಕ್ಕಮಗಳೂರ ದೊಡ್ಡಮಲ್ಲಿಗೆ ದೀಪಾ ಸನ್ನಿಧಿ. ದೀಪಾ ಸನ್ನಿಧಿ ಎರಡನೇ ಸಿನಿಮಾದಲ್ಲಿ ನಟಿಸಿದ್ದು ಪವರ್ ಸ್ಟಾರ್ ಪುನೀತ್ ಜೊತೆ ಪರಮಾತ್ಮ ಚಿತ್ರದಲ್ಲಿ. ಚಿತ್ರ ಹಿಟ್ಟಾಯ್ತೋ ಫ್ಲಾಪಾಯ್ತೋ ದೀಪಾ ಸನ್ನಿಧಿ ಸಂಭಾವನೆ ಮಾತ್ರ ಗಗನಕ್ಕೇರಿತು.

ಮೊದಲ ಸಿನಿಮಾದಲ್ಲಿ ಎಲ್ಲರ ಫೋನ್ ಗಳನ್ನೂ ರಿಸೀವ್ ಮಾಡ್ತಾ ಸರಿ ಸರ್ ಅಂತಿದ್ದ ದೀಪಾ ಸನ್ನಿಧಿಯವರಿಗೆ ಎರಡನೇ ಸಿನಿಮಾದಿಂದ ಅದೇನಾಯ್ತೋ ಏನೋ ಫೋನ್ ಅಂದ್ರೆ ಅಲರ್ಜಿ ಅನ್ನಿಸೋಕೆ ಶುರುವಾಯ್ತು. [ಜಾನು ಮಾಡಲು ಹೋಗಿ.. ಏನೋ ಮಾಡಿದೆ?]

Deepa Sannidhi

ಫೋನ್ ಬಂದ್ರೆ ಯಾಕೆ ರಿಸೀವ್ ಮಾಡ್ಬೇಕು ಅಂದುಕೊಂಡ್ರು. ರಿಸೀವ್ ಮಾಡಿದ್ರೂ ಜಾಸ್ತಿ ಯಾಕೆ ಮಾತಾಡ್ಬೇಕು ಅಂದುಕೊಂಡ್ರಂತೆ. ಆಮೇಲಾಮೇಲೆ ಫೋನ್ ರಿಸೀವ್ ಮಾಡೋದೇ ಅಲರ್ಜಿ ಅನ್ನಿಸ್ತಂತೆ.

ಇದ್ರಿಂದ ಅದೇನೇನಾಯ್ತೋ ಒಳ್ಳೆಯ ಆಫರ್ ಗಳು ಮಿಸ್ಸಾಗಿ ಹೋಯ್ತಂತೆ. ಈಗಲೂ ಅವ್ರಿಗೆ ಫೋನ್ ಅಲರ್ಜಿ ಹೋಗಿದ್ಯಾ ಇಲ್ವೋ ಗೊತ್ತಿಲ್ಲ. ಆದ್ರೆ ಅವ್ರ ಕನ್ನಡ ಸಿನಿಮಾಗಳು ಲೆಕ್ಕಕ್ಕೇ ಸಿಗ್ತಿಲ್ಲ ಗೋವಿಂದ.

Deepa Sannidhi2

ಸದ್ಯಕ್ಕೆ ದೀಪಾ ಸನ್ನಿಧಿಯವರ ಕೈಯಲ್ಲಿ ಎರಡು ತಮಿಳು ಒಂದು ಕನ್ನಡ ಚಿತ್ರವಿದೆ. ಕನ್ನಡದ 'ಲವ್ ಚುರುಮುರಿ' ಚಿತ್ರೀಕರಣ ಕುಂಟಾಬಿಲ್ಲೆ ಆಡುತ್ತಾ ಸಾಗಿದೆ. ಎನಕ್ಕು ವರುವಂ, ಯಾಚನ್ ಎಂಬೆರಡು ತಮಿಳು ಚಿತ್ರಗಳು ಲಗೋರಿ ಆಡುತ್ತಿವೆ.

English summary
Why actress Deepa Sannidhi isn't lucky in Sandalwood? After 'Endendu Ninagagi', 'Sakkare' movies Deepa is not much active in Kannada film industry why, what happened to her?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada