»   » ಚಿಲ್ರೆ ಶೋಕಿ, ಧಿಮಾಕು ಬಿಟ್ಟು ಕಷ್ಟಪಟ್ಟು ನಟಿಸಿದ್ರೆ...

ಚಿಲ್ರೆ ಶೋಕಿ, ಧಿಮಾಕು ಬಿಟ್ಟು ಕಷ್ಟಪಟ್ಟು ನಟಿಸಿದ್ರೆ...

By: ಕುಸುಮ
Subscribe to Filmibeat Kannada

ಕೆಎಸ್ ರವಿಕುಮಾರ್ ಸೆಟ್ಗೆ ಬಂದ್ರೆ ಸಾಕು ಅಲ್ಲಿ ಅವರದ್ದೇ ಕಮಾಂಡ್. ಇಡೀ ಕೋಟಿಗೊಬ್ಬ-2 ಸೆಟ್ಟೇ ಸೈಲೆಂಟ್ ಆಗಿ ಅವರು ಹೇಳಿದಂತೆ ಕೇಳುತ್ತಿತ್ತಂತೆ. ಸುದೀಪ್ ಕೂಡ ತಮಿಳಿನ ಹಿರಿಯ ನಿರ್ದೇಶಕರಿಗೆ ಕೇಳಿದ್ದಕ್ಕೆ ಸಲಹೆ ಕೊಡೋದು ಬಿಟ್ಟರೆ ನಿರ್ದೇಶಕರ ನಟನಾಗಿ ಅಭಿನಯಿಸುತ್ತಿದ್ದರಂತೆ. ಸುದೀಪ್ ಯಾವತ್ತಿಗೂ ನಿರ್ದೇಶಕರ ನಟನೇ ಬಿಡಿ.

ಆದರೆ ಅದೇ ಕನ್ನಡದ ಮತ್ತೊಬ್ಬ ಸ್ಟಾರ್ ನಟರ ಸಿನಿಮಾ ಶೂಟಿಂಗ್ ಸೆಟ್ನಲ್ಲಿ ಪ್ರತೀ ಸೀನ್ಗೂ ನಟನಿಂದ ಒಪ್ಪಿಗೆ ಪಡೆದುಕೊಂಡೇ ನಿರ್ದೇಶಕ ಮಾಡಿಸಬೇಕಿತ್ತಂತೆ. ನಟ ಹೇಳಿದಾಗ ಊಟದ ಬ್ರೇಕ್, ನಟನಿಗೆ ಸುಸ್ತಾದ್ರೆ ಸೆಟ್ಗೆ ಕೂಡ ರೆಸ್ಟ್. ನಿರ್ಮಾಪಕರು ಕೂಡ ನಮ್ ಹೀರೋ ಹೇಳಿದಂಗೆ ಕೇಳಪ್ಪ ಅಂದುಬಿಟ್ಟಿದ್ರಂತೆ.

ಅಲ್ಲಿಗೆ ಸಿನಿಮಾದಲ್ಲಿ ಬರೀ ಬಿಲ್ಡಪ್ಪೋ ಬಿಲ್ಡಪ್ಪು. ಕ್ಯಾಮೆರಾಮನ್ ಕೂಡ ನಟನ ಹತ್ತಿರ ಬಂದು ಹೀಗೆ ಶಾಟ್ಸ್ ಇಟ್ಟರೆ ಚಂದಾನಾ? ಹೀಗಿಡ್ಲಾ ಅಂತ ಕೇಳಿ ಶೂಟ್ ಮಾಡ್ತಿದ್ದರಂತೆ. ಇನ್ನು ಡೈಲಾಗ್ಗಳಂತೂ 'ಅಣ್ಣಂಗೆ' ಹೇಳಿ ಮಾಡಿಸಿದಂಗೆ ಇದ್ವಂತೆ. ಕೆಲವೊಂದು ಡೈಲಾಗ್ ಕಷ್ಟ ಅನ್ನಿಸಿದ್ರೆ ಅಲ್ಲೇ ಚೇಂಜ್ ಆಗ್ತಿದ್ದವಂತೆ.

Why some Kannada super star actors show attitude

ಅಲ್ಲಿಗೆ ಸಿನಿಮಾ ಮುಗಿಯೋದರೊಳಗೆ ನಿರ್ದೇಶಕ ಪೇಪರ್ ಮೇಲೆ ಬರೆದುಕೊಂಡ ಸೀನ್ಗಳು ಮೇಕಿಂಗ್ ಮಣ್ಣು ಮುಕ್ಕಿತ್ತಂತೆ. ಚಿತ್ರಮಂದಿರದಲ್ಲಿ ಚಿತ್ರವೂ ಅಷ್ಟೇ. ಇದಾದ ಮೇಲೆ ಚಿತ್ರ ರಿಲೀಸ್ ನಂತ್ರ ನಿರ್ದೇಶಕರಿಗೂ ನಟರಿಗೂ ವೈಮನಸ್ಯ ಬಂತಂತೆ. ಇಬ್ಬರೂ ಜಗಳ ಆಡಿಕೊಂಡರಂತೆ. ಇಲ್ಲಿಗೆ ಕಥೆ ಮುಗಿಯಿತಂತೆ!

ಅದೇ ತೆಲುಗು ತಮಿಳಿನ ನಿರ್ದೇಶಕರು ಬಂದ್ರೆ ಕನ್ನಡದ ಸ್ಟಾರ್ ನಟರು ಬಾಲ ಮುದುರಿಕೊಂಡು ಅವರು ಹೇಳಿದ್ದನ್ನು ಮಾಡ್ತಾರಂತೆ. ಕನ್ನಡದ ಸಂಗೀತ ನಿರ್ದೇಶಕರಾದ್ರೆ 10 ಟ್ಯೂನ್ ರಿಜೆಕ್ಟ್, ತೆಲುಗು ತಮಿಳಿನ ಸಂಗೀತ ನಿರ್ದೇಶಕರು ಬಂದ್ರೆ ಒಂದೇ ಟ್ಯೂನ್ಗೆ ಓಕೆ.

ಇಂಥಾ ಚಿಲ್ರೆ ಶೋಕಿ, ಧಿಮಾಕು ಎಲ್ಲಾ ಬಿಟ್ಟು ಕಥೆ ಇದ್ದ ಹಾಗೆ ನಿರ್ದೇಶಕ ಹೇಳಿದ ಹಾಗೆ ಕಷ್ಟಪಟ್ಟು ಇಷ್ಟಪಟ್ಟು ನಟಿಸಿದ್ರೆ ಮಾತ್ರ ಸಿನಿಮಾ ಹಿಟ್ಟು. ತಿಥಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ನೋಡ್ತಿದ್ದೀರಲ್ಲ.. (ಅಸಿಸ್ಟೆಂಟ್ ಡೈರೆಕ್ಟರ್ ಹೇಳಿದ್ದು).

English summary
Why some Kannada super star actors show attitude? Why should everything be done as per actor's directions? How will the Kannada film industry grow if such behavior continues? An insight into the filmi world.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada