»   » ಅಪ್ಪು V/S ದೀಪು: ಆಗಸ್ಟ್ ನಲ್ಲಿ ಬಾಕ್ಸಾಫೀಸ್ ಕದನ.?

ಅಪ್ಪು V/S ದೀಪು: ಆಗಸ್ಟ್ ನಲ್ಲಿ ಬಾಕ್ಸಾಫೀಸ್ ಕದನ.?

Posted By:
Subscribe to Filmibeat Kannada

ಈ ವಾರ (ಜುಲೈ 22) ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಕಬಾಲಿ' ತೆರೆ ಕಾಣುತ್ತಿರುವ ಹಿನ್ನಲೆಯಲ್ಲಿ ಕನ್ನಡದ ಸ್ಟಾರ್ ನಟರ ಯಾವುದೇ ಬಿಗ್ ಸಿನಿಮಾಗಳು ಕೂಡ ತೆರೆ ಕಾಣುತ್ತಿಲ್ಲ.

ಆದರೆ ಆಗಸ್ಟ್ ತಿಂಗಳಿನಲ್ಲಿ 'ವರಮಹಾಲಕ್ಚ್ಮಿ' ಹಬ್ಬದ ದಿನ ಮಾತ್ರ ಸ್ಟಾರ್-ವಾರ್ ನಡೆಯೋದು ಗ್ಯಾರೆಂಟಿ ಅಂತಿವೆ ಗಾಂಧಿನಗರದ ಮೂಲಗಳು. ಈ ಬಾರಿ ಕಿಚ್ಚ ಸುದೀಪ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡುವೆ ಬಿಗ್ ಫೈಟ್ ನಡೆಯಲಿದೆ.[ಆಗಸ್ಟ್ ನಲ್ಲಿ 'ಕೋಟಿಗೊಬ್ಬ'ನ ದರ್ಬಾರ್ ಶುರುವಾಗುತ್ತಾ.?]


Will Actor Sudeep and Actor Puneeth Rajkumar clash on August

ಅಂದಹಾಗೆ ಪುನೀತ್ ರಾಜ್ ಕುಮಾರ್ ಮತ್ತು ರಾಧಿಕಾ ಪಂಡಿತ್ ಒಂದಾಗಿ ಕಾಣಿಸಿಕೊಂಡಿರುವ 'ದೊಡ್ಮನೆ ಹುಡುಗ' ಚಿತ್ರವನ್ನು ಆಗಸ್ಟ್ 11 ಕ್ಕೆ ಬಿಡುಗಡೆ ಮಾಡುತ್ತೇವೆ ಎಂದು ಈ ಮೊದಲೇ ಚಿತ್ರತಂಡ ಹೇಳಿಕೊಂಡಿತ್ತು.


ಇದರ ಬೆನ್ನಲ್ಲೇ ಇದೀಗ 'ಕೋಟಿಗೊಬ್ಬ 2' ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಅವರು ಸುದೀಪ್ ಮತ್ತು ನಿತ್ಯಾ ಮೆನನ್ ಜುಗಲ್ ಬಂದಿಯ ಚಿತ್ರವನ್ನು ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಆಗಸ್ಟ್ 12 ಕ್ಕೆ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡುತ್ತಿದ್ದೇವೆ ಎಂದು ಮೊನ್ನೆ ಮೊನ್ನೆ ತಿಳಿಸಿದ್ದರು.['ಅಭಿಮಾನಿ'ಗಳನ್ನು ಬಣ್ಣಿಸಿ ಕುಂಬಳಕಾಯಿ ಒಡೆದ 'ದೊಡ್ಮನೆ ಹುಡುಗ']


Will Actor Sudeep and Actor Puneeth Rajkumar clash on August

ಇದೀಗ ಇವೆರಡು ಚಿತ್ರಗಳ ಬಿಡುಗಡೆ ದಿನಾಂಕ ನೋಡುತ್ತಿದ್ದರೆ, ಈ ಬಾರಿ ಸ್ಟಾರ್ ಗಳ ನಡುವೆ ಘರ್ಷಣೆ ಆಗೋದು ಗ್ಯಾರೆಂಟಿ ಎಂದೆನಿಸುತ್ತಿದೆ. ಒಟ್ನಲ್ಲಿ ಹಿಂದೆ-ಮುಂದೆ ಇವರಿಬ್ಬರ ಸಿನಿಮಾಗಳು ತೆರೆ ಕಾಣುತ್ತಿರುವುದರಿಂದ ಬಾಕ್ಸಾಫೀಸ್ ಗೆ ಪೆಟ್ಟು ಬೀಳೋದು ಪಕ್ಕಾ.


ಈ ಹಿಂದೆ ಕೂಡ ಪುನೀತ್ ಮತ್ತು ಸುದೀಪ್ ಚಿತ್ರಗಳು ಹೀಗೆ ಒಂದೇ ದಿನ ತೆರೆಕಂಡು ಅಭಿಮಾನಿಗಳನ್ನು ಇಕ್ಕಟ್ಟಿನ ಪರಿಸ್ಥಿತಿಗೆ ತಳ್ಳಿದ್ದರು. ಸುದೀಪ್ ಅವರ 'ಕಿಚ್ಚ-ಹುಚ್ಚ' ಮತ್ತು ಪುನೀತ್ ರಾಜ್ ಕುಮಾರ್ ಅವರ 'ಜಾಕಿ' ಒಂದೇ ದಿನ ತೆರೆಕಂಡಿದ್ದವು.['ದೊಡ್ಮನೆ ಹುಡುಗ' ಚಿತ್ರದಲ್ಲಿ ಪುನೀತ್ ಜೊತೆ ಶಿವರಾಜ್ ಕುಮಾರ್.?]


Will Actor Sudeep and Actor Puneeth Rajkumar clash on August

ಈ ಬಾರಿ ಕೂಡ ಎರಡೂ ಸಿನಿಮಾಗಳ ಮೇಲೆ ಸಿನಿಪ್ರಿಯರು ಮತ್ತು ಅಭಿಮಾನಿಗಳು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ನಡುವೆ ಒಂದು ವಾರದ ಹಿಂದೆ ಸುದೀಪ್ ಅವರು ಪುನೀತ್ ಅವರ 'ರಾಜಕುಮಾರ' ಸೆಟ್ ಗೆ ಭೇಟಿ ನೀಡಿ ಮಾತನಾಡಿಕೊಂಡು ಬಂದಿದ್ದರು.[ಪುನೀತ್ ರಾಜ್ ಕುಮಾರ್ ಗೆ ಕಿಚ್ಚ ಸುದೀಪ್ ಸರ್ ಪ್ರೈಸ್ ಕೊಟ್ಟಾಗ...]


ಅಂತೂ ಕೊನೆಗೂ ಬಿಗ್ ಬಜೆಟ್ ನ ಸಿನಿಮಾಗಳಾದ 'ಕೋಟಿಗೊಬ್ಬ 2' ಮತ್ತು 'ದೊಡ್ಮನೆ ಹುಡುಗ' ಒಟ್ಟಿಗೆ ತೆರೆ ಕಾಣುತ್ತವೆಯೋ ಅಥವಾ ಆತ್ಮೀಯ ಸ್ನೇಹಿತರಿಬ್ಬರು ಮಾತಾಡಿಕೊಂಡು ಒಂದು ವಾರಗಳ ಅಂತರದಲ್ಲಿ ತಮ್ಮ ಸಿನಿಮಾಗಳು ತೆರೆ ಕಾಣುವಂತೆ ಮಾಡುತ್ತಾರೋ ಅಂತ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

English summary
The auspicious day of Varmahalakshmi festival is going to witness two stars clashing at the box-office this year. While, Kannada Actor Puneeth Rajkumar's 'Dodmane Huduga' is getting released on 11th of August. And Actor Sudeep's 'Kotigobba 2' will be releasing one day after that.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada