»   » ಅಪ್ಪು ಸಿನಿಮಾದಲ್ಲಿ ಯಂಗ್ ಟೈಗರ್ ಜೂ.ಎನ್.ಟಿ.ಆರ್.?

ಅಪ್ಪು ಸಿನಿಮಾದಲ್ಲಿ ಯಂಗ್ ಟೈಗರ್ ಜೂ.ಎನ್.ಟಿ.ಆರ್.?

Posted By:
Subscribe to Filmibeat Kannada

ನಿರ್ಮಾಪಕ ಎನ್.ಕೆ.ಲೋಹಿತ್ ಪ್ಲಾನ್ ಮಾಡಿರುವ ಪ್ರಕಾರ ಎಲ್ಲವೂ ನಡೆದರೆ, ಟಾಲಿವುಡ್ ನ ಯಂಗ್ ಟೈಗರ್ ಜೂನಿಯರ್ ಎನ್.ಟಿ.ಆರ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವುದು ಖಚಿತ. ಅದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 25 ನೇ ಸಿನಿಮಾ 'ಚಕ್ರವ್ಯೂಹ' ಮೂಲಕ.

ಹಾಗಂದ ಮಾತ್ರಕ್ಕೆ, 'ಚಕ್ರವ್ಯೂಹ' ಸಿನಿಮಾದಲ್ಲಿ ಜೂನಿಯರ್ ಎನ್.ಟಿ.ಆರ್ ನಟಿಸುವುದಿಲ್ಲ. ಬದಲಾಗಿ, ಅಪ್ಪು ಚಿತ್ರದ ಸ್ಪೆಷಲ್ ಹಾಡಿಗೆ ಸಿಂಗರ್ ಆಗುವ ಮೂಲಕ ಜೂ.ಎನ್.ಟಿ.ಆರ್ ಕನ್ನಡ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ.

puneeth-rajkumar-ntr

ವರದಿಗಳ ಪ್ರಕಾರ, 'ಚಕ್ರವ್ಯೂಹ' ನಿರ್ಮಾಪಕ ಎನ್.ಕೆ.ಲೋಹಿತ್ ಮತ್ತು ಜೂ.ಎನ್.ಟಿ.ಆರ್ ಕ್ಲೋಸ್ ಫ್ರೆಂಡ್ಸ್. ಮೊದಲಿನಿಂದಲೂ, ತಮ್ಮ ನಿರ್ಮಾಣದ ಸಿನಿಮಾದಲ್ಲಿ ಯಂಗ್ ಟೈಗರ್ ಹಾಡಬೇಕು ಅನ್ನೋದು ಲೋಹಿತ್ ರವರ ಆಸೆ. ಆ ಆಸೆಯನ್ನ ಅಪ್ಪು ಅಭಿನಯದ ಚಿತ್ರದ ಮೂಲಕ ಈಡೇರಿಸಿಕೊಳ್ಳುವುದಕ್ಕೆ ಎನ್.ಕೆ.ಲೋಹಿತ್ ಓಡಾಡುತ್ತಿದ್ದಾರೆ. [ಪುನೀತ್ ರಾಜ್ ಕುಮಾರ್ ಗೆ ಟಕ್ಕರ್ ಕೊಡಲಿರುವ ತಮಿಳು ಕೇಡಿ]

ಜೂ.ಎನ್.ಟಿ.ಆರ್ ಉತ್ತಮ ಗಾಯಕ ಅನ್ನೋದು ಈಗಾಗಲೇ 'ಯಮದೊಂಗ', 'ಕಂತ್ರಿ', 'ಅದುರ್ಸ್', 'ರಭಸ' ಸಿನಿಮಾಗಳಲ್ಲಿ ಖಾತ್ರಿ ಆಗಿದೆ.

ಟಾಲಿವುಡ್ ನಲ್ಲಿ ಮಾಸ್ ನಂಬರ್ಸ್ ನೀಡಿದ ಹಾಗೆ, ಕನ್ನಡದಲ್ಲೂ ಅಪ್ಪುಗಾಗಿ ಒಂದ್ ಸ್ಪೆಷಲ್ ನಂಬರ್ ನೀಡಲಿ ಅನ್ನೋದು 'ಚಕ್ರವ್ಯೂಹ' ನಿರ್ಮಾಪಕ ಎನ್.ಕೆ.ಲೋಹಿತ್ ಬಯಕೆ.

chakravyuha

ಇದೇ ವಿಚಾರವನ್ನಿಟ್ಟುಕೊಂಡು ಆಗಲೇ, ಯಂಗ್ ಟೈಗರ್ ಜೊತೆ ಲೋಹಿತ್ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಸ್ನೇಹಿತನ ಆಸೆಯನ್ನ ಜೂ.ಎನ್.ಟಿ.ಆರ್ ಈಡೇರಿಸುತ್ತಾರಾ ಅಂತ ಕಾದು ನೋಡಬೇಕಷ್ಟೆ. [ಪುನೀತ್ ರಾಜ್ ಕುಮಾರ್ ನೋಡಲು ಮುಗಿಬಿದ್ದ ಅಭಿಮಾನಿ ವೃಂದ]

ಅಂದ್ಹಾಗೆ, ಪುನೀತ್ ರಾಜ್ ಕುಮಾರ್ ಮತ್ತು ರಚಿತಾ ರಾಮ್ ಅಭಿನಯದ 'ಚಕ್ರವ್ಯೂಹ' ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸರವಣನ್ ಚಿತ್ರದ ನಿರ್ದೇಶಕ. (ಏಜೆನ್ಸೀಸ್)

English summary
According to the reports, Producer N.K.Lohith has approached Jr. NTR to sing a song in Puneeth Rajkumar starrer 'Chakravyuha'. Will Jr.NTR consider this? is a question as of now.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada