»   » ಬಿಜೆಪಿ ಸೇರಲು ಪೂಜಾ ಗಾಂಧಿ ಯತ್ನ: ಕಮಲ ಪಾಳಯದಲ್ಲಿ ವಿರೋಧ.?

ಬಿಜೆಪಿ ಸೇರಲು ಪೂಜಾ ಗಾಂಧಿ ಯತ್ನ: ಕಮಲ ಪಾಳಯದಲ್ಲಿ ವಿರೋಧ.?

Posted By:
Subscribe to Filmibeat Kannada

'ಮುಂಗಾರು ಮಳೆ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕುಣಿದು ಕುಣಿದು ಬಂದ ಪೂಜಾ ಗಾಂಧಿ, ಚಿತ್ರರಂಗದಲ್ಲಿ ಭದ್ರವಾದ ನೆಲೆ ಕಂಡುಕೊಳ್ಳುವ ಮುನ್ನವೇ ರಾಜಕೀಯಕ್ಕೆ ಧುಮುಕಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು 'ಅಪ್ಪಾಜಿ' ಎಂದು ಕರೆದ ಪೂಜಾ ಗಾಂಧಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. ಜೆಡಿಎಸ್ ಪಕ್ಷದಲ್ಲಿ ವರ್ಷ ಕೂಡ ತುಂಬದ ಪೂಜಾ ಗಾಂಧಿ ಜೆಡಿಎಸ್ ತೊರೆದು ಕೆಜೆಪಿ (ಕರ್ನಾಟಕ ಜನತಾ ಪಕ್ಷ) ಸೇರಿದರು. ಬಳಿಕ ಬಿ.ಶ್ರೀರಾಮುಲು ಅವರ ಬಡವರ ಶ್ರಮಿಕರ ಕಾಂಗ್ರೆಸ್ ಪಕ್ಷ (ಬಿ.ಎಸ್.ಆರ್ ಕಾಂಗ್ರೆಸ್) ಸೇರಿದ್ದ ಪೂಜಾ ಗಾಂಧಿ, ಚುನಾವಣೆಯಲ್ಲೂ ಸ್ಪರ್ಧಿಸಿ ಹೀನಾಯ ಸೋಲು ಕಂಡರು.

'ಅಭಿನೇತ್ರಿ' ಪೂಜಾ ಗಾಂಧಿ ಮತ್ತೆ ರಾಜಕೀಯಕ್ಕೆ ಎಂಟ್ರಿ!

ಎಲೆಕ್ಷನ್ ನಲ್ಲಿ ಸೋತು ಸುಣ್ಣವಾದ್ಮೇಲೆ, ಸಿನಿಮಾ ರಂಗದಲ್ಲಿ ತೊಡಗಿದ್ದ ಪೂಜಾ ಗಾಂಧಿ ಈಗ ಮತ್ತೆ ರಾಜಕೀಯಕ್ಕೆ ಮರಳಲು ಮನಸ್ಸು ಮಾಡಿರುವ ಹಾಗೆ ಕಾಣುತ್ತಿದೆ.

Will Pooja Gandhi join BJP

ಚುನಾವಣೆ ಹಿನ್ನೋಟ: ಮಿನುಗಿದ ಹಾಗೂ ಮಂಕಾದ ತಾರೆಗಳು

ಇನ್ನೇನು ವಿಧಾನಸಭೆ ಚುನಾವಣೆ ಹತ್ತಿರ ಬಂತು. ಹೀಗಾಗಿ, ಬಿಜೆಪಿ ಪಕ್ಷ ಸೇರಲು ಪೂಜಾ ಗಾಂಧಿ ಮುಂದಾಗಿದ್ದಾರಂತೆ. ಈಗಾಗಲೇ ಈ ಬಗ್ಗೆ ಯಡಿಯೂರಪ್ಪ ಬಳಿ ಪೂಜಾ ಗಾಂಧಿ ಮಾತುಕತೆ ಕೂಡ ನಡೆಸಿದ್ದಾರೆ ಎಂಬ ಅಂತೆ-ಕಂತೆ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಈ ವಿಚಾರ ಕಮಲ ಪಾಳಯದವರ ಕಿವಿಗೆ ಬಿದ್ಮೇಲೆ, ತೀವ್ರ ವಿರೋಧ ವ್ಯಕ್ತವಾಗಿದೆ ಎನ್ನಲಾಗಿದೆ.

ರಾಜಕೀಯಕ್ಕೆ ಬಂದು 'ತಪ್ಪು' ಮಾಡಿದೆ ಎಂದ ನಟಿ ಪೂಜಾ ಗಾಂಧಿ.!

ಪೂಜಾ ಗಾಂಧಿಯನ್ನ ಬಿಜೆಪಿಗೆ ಸೇರಿಸಿಕೊಳ್ಳುವ ಬಗ್ಗೆ ಕಮಲ ನಾಯಕರೇ ವಿರೋಧ ವ್ಯಕ್ತಪಡಿಸಿದ್ದಾರಂತೆ. ವಿರೋಧಿಗಳನ್ನ ಸಮಾಧಾನ ಪಡಿಸಲು ಆಗದೆ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಹೆಗಲ ಮೇಲೆ ಭಾರ ಹಾಕಿದ್ದಾರಂತೆ ಯಡಿಯೂರಪ್ಪನವರು.

ಅದಾಗಲೇ ಮೂರ್ನಾಲ್ಕು ಪಕ್ಷ ಬದಲಾಯಿಸಿರುವ ಪೂಜಾ ಗಾಂಧಿಗೆ ಬಿಜೆಪಿ ಮಣೆ ಹಾಕುತ್ತಾ.? ಕಾದು ನೋಡ್ಬೇಕು.

English summary
According to the latest Grapevine, Pooja Gandhi to join BJP Party.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X