For Quick Alerts
  ALLOW NOTIFICATIONS  
  For Daily Alerts

  ರಾಕಿ ಭಾಯ್ ಪ್ರಾಣ ಉಳಿಸ್ತಾನಾ 'ಸಲಾರ್'? ನೆಟ್ಟಿಗರೇ ಹೇಳಿದ ಕಥೆಯಲ್ಲಿ ಫುಲ್ ಥ್ರಿಲ್ಲಿಂಗ್!

  |

  'ಕೆಜಿಎಫ್‌- 2' ಸಿನಿಮಾ ರಿಲೀಸ್ ಆಗಿ 100 ದಿನ ಕಳೆದೇ ಹೋಯಿತು. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸ್ಥಾಪಿಸಿದ ಸಿನಿಮಾ ಮಾಡಿದ ದಾಖಲೆಗಳು ಒಂದೆರಡಲ್ಲ. ಕನ್ನಡ ಚಿತ್ರರಂಗದಲ್ಲಿ ಅಸಾಧ್ಯವನ್ನು ಸಾಧ್ಯ ಮಾಡಿ ತೋರಿಸಿದ ಸಿನಿಮಾ ಹಾಲಿವುಡ್ ಪ್ರೇಕ್ಷಕರು ತಿರುಗಿ ನೋಡುವಂತೆ ಮಾಡಿದ್ದು ಸುಳ್ಳಲ್ಲ. 'ಕೆಜಿಎಫ್' ಸರಣಿ ನಂತರ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು ಅನ್ನುವುದರ ಜೊತೆಗೆ 'ಕೆಜಿಎಫ್-3' ಯಾವಾಗ ಅನ್ನುವ ಪ್ರಶ್ನೆಯೂ ಅಭಿಮಾನಿಗಳನ್ನು ಕಾಡುತ್ತಿದೆ. ಈಗಾಗಲೇ 2 ಭಾಗಗಳಲ್ಲಿ ರಿಲೀಸ್ ಆಗ ಕೋಲಾರದ ಚಿನ್ನದ ಗಣಿಯ ಕಥೆ ಬಾಕ್ಸಾಫೀಸ್‌ನಲ್ಲಿ ಚಿನ್ನದ ಬೆಳೆ ತೆಗೆದಿದ್ದು ನೋಡಿದ್ದೇವೆ.

  ಈಗಾಗಲೇ 'ಕೆಜಿಎಫ್' ಸರಣಿ ಮುಂದುವರೆಸುವ ಬಗ್ಗೆ ಚಿತ್ರತಂಡ ಕೂಡ ಸುಳಿವು ಕೊಟ್ಟಿದೆ. ಆದರೆ ಸದ್ಯಕ್ಕೆ ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರ್ ಬೇರೆ ಬೇರೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಮತ್ತೊಂದ್ಕಡೆ ಅಭಿಮಾನಿಗಳು ಚಾಪ್ಟರ್-3 ಯಾವಾಗ ? ಚಾಪ್ಟರ್‌-2 ಕಥೆಯನ್ನು ಹೇಗೆ ಮುಂದುವರೆಸಬಹುದು ಅನ್ನುವ ಲೆಕ್ಕಾಚಾರದಲ್ಲಿದ್ದಾರೆ. ಇದೆಲ್ಲದರ ನಡುವೆ ಕೆಲವರು ತಮ್ಮ ಕ್ರಿಯೇಟಿವ್ ಮೈಂಡ್‌ಗೆ ಕೆಲಸ ಕೊಟ್ಟಿದ್ದು, ತಮ್ಮದೇ ಕಲ್ಪನೆಯಲ್ಲಿ ಮುಂದಿನ ಭಾಗದ ಕಥೆಯನ್ನು ಊಹಿಸಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೀತಿದ್ದು, ಯೂಟ್ಯೂಬ್‌ನಲ್ಲಿ ಫ್ಯಾನ್ ಮೇಡ್ ಚಾಪ್ಟರ್-3 ಪೋಸ್ಟರ್‌ಗಳು, ಟೀಸರ್‌, ಟ್ರೈಲರ್‌ಗಳು ಸೌಂಡ್ ಮಾಡ್ತಿವೆ.

  'ಕೆಜಿಎಫ್' ಸೆಟ್ ವಿಳಾಸ ಬೇಕಾ? ಗೂಗಲ್ ಮ್ಯಾಪ್ ಕರೆದುಕೊಂಡು ಹೋಗುತ್ತೆ!'ಕೆಜಿಎಫ್' ಸೆಟ್ ವಿಳಾಸ ಬೇಕಾ? ಗೂಗಲ್ ಮ್ಯಾಪ್ ಕರೆದುಕೊಂಡು ಹೋಗುತ್ತೆ!

  2018 ಡಿಸೆಂಬರ್ 20ರಂದು ತೆರೆಗಪ್ಪಳಿಸಿದ್ದ 'ಕೆಜಿಎಫ್' ಚಾಪ್ಟರ್- 1 ಸಿನಿಮಾ 250 ಕೋಟಿ ರೂ.ಗೂ ಅಧಿಕ ಬ್ಯುಸಿನೆಸ್ ಮಾಡಿತ್ತು. ಅಷ್ಟೇ ಅಲ್ಲ ಸೆಕೆಂಡ್ ಚಾಪ್ಟರ್‌ ಮೇಲೆ ಇನ್ನಿಲ್ಲದ ಕುತೂಹಲ ಮೂಡಿವಂತಾಗಿತ್ತು. ಕೊರೊನಾ ಹಾವಳಿಯಿಂದ ಬಹಳ ತಡವಾಗಿ ಬಂದ 2ನೇ ಭಾಗ 1230 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿತ್ತು. ಕನ್ನಡ ಚಿತ್ರರಂಗದಲ್ಲಿ ಮತ್ಯಾವುದೇ ಸಿನಿಮಾ ಮಾಡದ ದಾಖಲೆಗಳು 'ಕೆಜಿಎಫ್' ಹೆಸರಿನಲ್ಲಿದೆ. ಚಿತ್ರದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಸಿನಿಮಾ ದೊಡ್ಡ ಸಕ್ಸಸ್ ತಂದು ಕೊಡ್ತು. ಹೊಂಬಾಳೆ ಸಂಸ್ಥೆ ಮತ್ತಷ್ಟು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನಿರ್ಮಿಸಲು ಪ್ರೇರಣೆಯಾಯಿತು.

   ಚಾಪ್ಟರ್- 3ನಲ್ಲಿ ರಾಕಿ- ಸಲಾರ್?

  ಚಾಪ್ಟರ್- 3ನಲ್ಲಿ ರಾಕಿ- ಸಲಾರ್?

  'ಕೆಜಿಎಫ್'- 3 ಸಿನಿಮಾ ಕಥೆ ಏನಿರಬಹುದು ಅಂತ ಅಭಿಮಾನಿಗಳು ಊಹಿಸಿಕೊಳ್ಳಲು ಶುರುಮಾಡಿದ್ದಾರೆ. ಪ್ರಶಾಂತ್ ನೀಲ್ ವರ್ಸ್‌ನಲ್ಲಿ ರಾಕಿ ಭಾಯ್ ಯಶ್‌ ಹಾಗೂ 'ಸಲಾರ್' ಪ್ರಭಾಸ್ ಒಟ್ಟಿಗೆ ಸೇರಿದರೆ ಹೇಗಿರುತ್ತೆ ಅನ್ನೋದನ್ನು ಊಹಿಸಿಕೊಂಡು ಕಥೆಗಳನ್ನು ಕಟ್ಟುತ್ತಿದ್ದಾರೆ. ಚಾಪ್ಟರ್‌- 2 ಕ್ಲೈಮ್ಯಾಕ್ಸ್‌ನಲ್ಲಿ ಗೋಲ್ಡ್‌ ಬಿಸ್ಕೆಟ್‌ ತುಂಬಿದ ಹಡಗಿನ ಜೊತೆಗೆ ರಾಕಿ ನೀರುಪಾಲಾಗಿದ್ದ. ಒಂದು ವೇಳೆ ರಾಕಿನ 'ಸಲಾರ್' ಕಾಪಾಡಿ ವಾಪಸ್ ಕರೆದುಕೊಂಡು ಬಂದರೆ ಹೇಗಿರುತ್ತೆ? ಕೇಳೋದಕ್ಕೆ ಥ್ರಿಲ್ ಅನ್ನಿಸ್ತಿದೆ ಅಲ್ವಾ? ಈ ಕಥೆಯನ್ನು ಸಾರಿ ಹೇಳುವಂತೆ 'ಕೆಜಿಎಫ್- 3' ಪ್ಯಾನ್ ಮೇಡ್‌ ಪೋಸ್ಟರ್‌ವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೇ ಥಂಬ್‌ನೈಲ್‌ನಲ್ಲಿ ಅಪ್‌ಲೋಡ್‌ ಆಗಿರೋ ವಿಡಿಯೋ ಲಕ್ಷ ಲಕ್ಷ ವೀವ್ಸ್ ಸಾಧಿಸಿ ಸೌಂಡ್ ಮಾಡ್ತಿದೆ.

  'KGF 2' ಪ್ಯಾನ್ ಇಂಡಿಯಾ ಮಾತ್ರವಲ್ಲ, ಹಾಲಿವುಡ್ ಚಿತ್ರ ಆಗಲಿದೆ!'KGF 2' ಪ್ಯಾನ್ ಇಂಡಿಯಾ ಮಾತ್ರವಲ್ಲ, ಹಾಲಿವುಡ್ ಚಿತ್ರ ಆಗಲಿದೆ!

   ಸಬ್‌ಮೆರೀನ್ ಏರಿ ವಾಪಸ್ ರಾಕಿ ಮತ್ತೆ ಬರ್ತಾನಾ?

  ಸಬ್‌ಮೆರೀನ್ ಏರಿ ವಾಪಸ್ ರಾಕಿ ಮತ್ತೆ ಬರ್ತಾನಾ?

  ಕೆಜಿಎಫ್‌ ಕಥೆ ಹೇಗೆ ಮುಂದುವರೆಯಬಹುದು ಅನ್ನುವ ಲೆಕ್ಕಚಾರದಲ್ಲಿ ಸಾಕಷ್ಟು ಕಥೆಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸಬ್‌ಮೆರೀನ್ ಸಹಾಯದಿಂದ ಬದುಕಿ ಬರುವ ರಾಕಿ ಭಾಯ್ ವಿದೇಶಕ್ಕೆ ಹೋಗಿ ಆರ್ಭಟ ನಡೆಸ್ತಾನೆ ಅನ್ನೋದು ಮತ್ತೊಂದು ಕಥೆ. ಸೆಕೆಂಡ್ ಚಾಪ್ಟರ್‌ನಲ್ಲಿ ರಾಕಿ ದೇಶದಲ್ಲಿರೋ ಚಿನ್ನವನ್ನಷ್ಟೇ ಸಂಪಾದಿಸಿದ್ದಾನೆ. ಆದರೆ ತಾಯಿಗೆ ಮಾತು ಕೊಟ್ಟಂತೆ ಪ್ರಪಂಚದಲ್ಲಿರೋ ಚಿನ್ನವನ್ನೆಲ್ಲಾ ಸಂಪಾದಿಸದೇ ಅವನು ಸಾಯೋದಿಲ್ಲ ಅನ್ನೋದು ಕೆಲವರ ವಾದ.

   ಮುಂದಿನ ಭಾಗದಲ್ಲಿ ಹಿಂದೆ ಹೇಳದೇ ಬಿಟ್ಟ ಕಥೆ ?

  ಮುಂದಿನ ಭಾಗದಲ್ಲಿ ಹಿಂದೆ ಹೇಳದೇ ಬಿಟ್ಟ ಕಥೆ ?

  ಕಥೆಯ ಪ್ರಕಾರ 'ಕೆಜಿಎಫ್-3'ನಲ್ಲಿ ಕಥೆ ಮುಂದುವರೆಸಬಹುದು. ಅಥವಾ ಪ್ರೀಕ್ವೆಲ್ ಮಾಡಿ 1978 ರಿಂದ 1981ರವರೆಗೆ ಹೊರದೇಶಗಳಲ್ಲಿ ರಾಕಿ ಹೇಗೆ ಅಬ್ಬರಿಸಿದ ಅನ್ನುವುದನ್ನು ಹೇಳಬಹುದು. ಒಟ್ಟಾರೆ ಚಿತ್ರತಂಡವೇ 'ಕೆಜಿಎಫ್'- 3 ಮಾಡ್ತೀವಿ ಅಂತ ಹೇಳಿರುವುದರಿಂದ ಸಿನಿಮಾ ರಿಲೀಸ್ ಆಗುವರೆಗೂ ಇಂತಹ ಕಥೆಗಳು ಪ್ರೇಕ್ಷಕರ ತಲೆಯಲ್ಲಿ ಗಿರಕಿ ಹೊಡೀತಾನೇ ಇರುತ್ತೆ.

   'ಸಲಾರ್' ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್?

  'ಸಲಾರ್' ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್?

  ಪ್ರಶಾಂತ್ ನೀಲ್ ಸದ್ಯ 'ಸಲಾರ್' ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಬಾಹುಬಲಿ ಪ್ರಭಾಸ್ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾದಲ್ಲಿ ಹೀರೊ ಆಗಿ ನಟಿಸ್ತಿದ್ದು, ಹೊಂಬಾಳೆ ಸಂಸ್ಥೆ ಬಂಡವಾಳ ಹೂಡಿದೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ರಾಕಿಂಗ್ ಯಶ್ ಅತಿಥಿ ಪಾತ್ರದಲ್ಲಿ ನಟಿಸುತ್ತಾರೆ ಅನ್ನುವ ಗುಸುಗುಸು ಕೇಳಿ ಬರುತ್ತಿದೆ. ಸಿನಿಮಾ ಮುಹೂರ್ತ ಸಮಾರಂಭದಲ್ಲೂ ಯಶ್ ಭಾಗಿ ಆಗಿದ್ದರು.

   ಯಾವಾಗ ಶುರುವಾಗುತ್ತೆ ಯಶ್‌-19 ಸಿನಿಮಾ?

  ಯಾವಾಗ ಶುರುವಾಗುತ್ತೆ ಯಶ್‌-19 ಸಿನಿಮಾ?

  ಸೂಪರ್ ಸ್ಟಾರ್‌ಗಳು ಒಂದು ಸಿನಿಮಾ ಮುಗಿಯೋಕು ಮೊದಲೇ ಮತ್ತೊಂದು ಸಿನಿಮಾಗೆ ಕಮೀಟ್ ಆಗಿಬಿಡುತ್ತಾರೆ. ಆದರೆ 'ಕೆಜಿಎಫ್-2' ರಿಲೀಸ್ ಆಗಿ 3 ತಿಂಗಳು ಕಳೆದರೂ ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಬಗ್ಗೆ ಸುಳಿವು ಸಿಕ್ಕಿಲ್ಲ. ಸದ್ಯ ಪತ್ನಿ ಜೊತೆ ಯೂರೋಪ್ ಪ್ರವಾಸದಲ್ಲಿರುವ ಯಶ್‌, ಆದಷ್ಟು ಬೇಗ ಹೊಸ ಸಿನಿಮಾ ಘೋಷಿಸಲಿದ್ದಾರೆ.

  English summary
  Will Prabhas Save Rocky Bhai Yash in KGF-3: Prediction Goes Viral On Social Media. Know More.
  Wednesday, July 27, 2022, 10:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X