»   » ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಬಗ್ಗೆ ಕಿವಿಗೆ ಬಿದ್ದ ಹೊಸ ಸುದ್ದಿ ಇದು.!

ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಬಗ್ಗೆ ಕಿವಿಗೆ ಬಿದ್ದ ಹೊಸ ಸುದ್ದಿ ಇದು.!

By: ಫಿಲ್ಮಿಬೀಟ್ ಪ್ರತಿನಿಧಿ
Subscribe to Filmibeat Kannada

'ಬೆಳಗೆದ್ದು ಯಾರ ಮುಖವ ನಾನು ನೋಡಿದೆ..' ಎಂದು ಸಾನ್ವಿ (ರಶ್ಮಿಕಾ ಮಂದಣ್ಣ) ಜೊತೆ ಕೂತು ಕರ್ಣ (ರಕ್ಷಿತ್ ಶೆಟ್ಟಿ) ಕಚಗುಳಿ ಇಟ್ಟುಕೊಂಡು ಹಾಡುವ ಹಾಡು ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ.?

'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಎಲ್ಲರಿಗೂ ಇಷ್ಟವಾಗಿದ್ದ ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಜೋಡಿ ನಿಜ ಜೀವನದಲ್ಲಿಯೂ 'ಜೋಡಿ' ಆಗುತ್ತಾರೆ ಎಂಬ ಗುಸು ಗುಸು ಗಾಂಧಿನಗರದಲ್ಲಿ ಹರಿದಾಡಲು ಶುರುವಾಗಿ ತಿಂಗಳ ಮೇಲಾಗಿದೆ.

ಈಗ ಇದೇ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಇನ್ನೊಂದು ಸುದ್ದಿ ಕಿವಿಗೆ ಬಿದ್ದಿದೆ. ಅದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ಓದಿರಿ...

ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಬಗ್ಗೆ 'ನಿಶ್ಚಿತಾರ್ಥ'ದ ಸುದ್ದಿ

ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಸದ್ಯದಲ್ಲಿಯೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರಂತೆ. ಹಾಗಂತ ಗಾಂಧಿನಗರದಲ್ಲಿ ಗುಲ್ಲೋ.. ಗುಲ್ಲೋ..!

ನಿಶ್ಚಿತಾರ್ಥ ಯಾವಾಗ.?

ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ರವರ ನಿಶ್ಚಿತಾರ್ಥ ಸಮಾರಂಭ ಜುಲೈ 3 ರಂದು ನಡೆಯಲಿದೆಯಂತೆ.

ಈ ಸುದ್ದಿ ನಿಜವೇ.?

ಈ ಸುದ್ದಿ ಕಿವಿಗೆ ಬಿದ್ದ ಕೂಡಲೆ, ಕನ್ ಫರ್ಮ್ ಮಾಡಿಕೊಳ್ಳಲು ನಿಮ್ಮ 'ಫಿಲ್ಮಿಬೀಟ್ ಕನ್ನಡ' ರಕ್ಷಿತ್ ಶೆಟ್ಟಿ ರವರಿಗೆ ಫೋನ್ ಮಾಡಿದ್ವಿ. ಆದ್ರೆ, ಚಿತ್ರೀಕರಣದಲ್ಲಿ ಬಿಜಿಯಿದ್ದ ರಕ್ಷಿತ್ ಶೆಟ್ಟಿ ಸಂಪರ್ಕಕ್ಕೆ ಸಿಗಲಿಲ್ಲ.

ಸುಳ್ಳಂತೆ.!

ರಕ್ಷಿತ್ ಶೆಟ್ಟಿ ಆಪ್ತ ಬಳಗ ಹೇಳುವ ಪ್ರಕಾರ, ''ಇದು ಸುಳ್ಳು ಸುದ್ದಿ''. ಸಾಲು ಸಾಲು ಸಿನಿಮಾಗಳನ್ನ ಒಪ್ಪಿಕೊಂಡಿರುವ ರಕ್ಷಿತ್ ಶೆಟ್ಟಿಗೆ ಸದ್ಯಕ್ಕೆ ಪುರುಸೊತ್ತಿಲ್ಲ ಎಂಬುದು ಆಪ್ತರ ಮಾತು.

'ಕಿರಿಕ್ ಪಾರ್ಟಿ' ಚಿತ್ರದ ಸೆಟ್ ನಲ್ಲಿ 'ಲವ್ ಸ್ಟೋರಿ'

'ಕಿರಿಕ್ ಪಾರ್ಟಿ' ಚಿತ್ರದ ಸೆಟ್ ನಲ್ಲಿ ಕರ್ಣ ಹಾಗೂ ಸಾನ್ವಿ ಮಧ್ಯೆ 'ನಿಜ'ವಾಗ್ಲೂ ಲವ್ ಆಯ್ತಂತೆ. ಸಿನಿಮಾ ಮುಗಿದ್ಮೇಲೂ, ಇಬ್ಬರ ಓಡಾಟ-ಒಡನಾಟ ನಡೆಯುತ್ತಲೇ ಇದ್ಯಂತೆ.['ಕಿರಿಕ್ ಜೋಡಿ' ರಕ್ಷಿತ್ ಶೆಟ್ಟಿ-ರಶ್ಮಿಕಾ ಮದುವೆ ಅಂತೆ!]

ಕುಟುಂಬದವರ ಒಪ್ಪಿಗೆ ಸಿಕ್ಕಿದ್ಯಂತೆ

ಇಬ್ಬರ ಲವ್ ಸ್ಟೋರಿಗೆ ಉಭಯ ಕುಟುಂಬದವರು 'ಅಸ್ತು' ಎಂದಿದ್ದಾರಂತೆ. ಆದ್ರೆ, ಇಬ್ಬರೂ ಸದ್ಯ ಸಿನಿಮಾಗಳಲ್ಲಿ ಬಿಜಿಯಾಗಿರುವುದರಿಂದ, ಕಮ್ಮಿಟ್ಮೆಂಟ್ ಮುಗಿಯುವವರೆಗೂ ಮದುವೆ ಯೋಚನೆ ಬೇಡ ಎಂದು ನಿರ್ಧಾರಕ್ಕೆ ಬಂದಿದ್ದಾರಂತೆ.['ಕರ್ಣ-ಸಾನ್ವಿ'ಯ ಮದುವೆ: ರಶ್ಮಿಕಾ ಕಡೆಯಿಂದ ಡೌಟ್ ಕ್ಲಿಯರ್]

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ರಕ್ಷಿತ್ ಹೇಳಿದ್ದೇನು.?

''ಒಂದು ಗಾಳಿ ಸುದ್ದಿ ಕೇಳಿಸ್ತು. ಹೆಣ್ಮಕ್ಕಳು ಬೇಜಾರಾಗಬಹುದು.! ಆದ್ರೆ, ಗಂಡು ಮಕ್ಕಳು ಖುಷಿ ಪಡ್ತಾರೆ. ಈಸ್ ಇಟ್ ರಿಯಲಿ ಟ್ರೂ.? ಇದು ಸಸ್ಪೆನ್ಸ್ ಆಗಿ ಬಿಟ್ಟು ಬಿಡೋಣ್ವಾ ಅಥವಾ ಹೇಳ್ತೀರಾ.?'' ಎಂದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ರವರನ್ನ ರಮೇಶ್ ಅರವಿಂದ್ ಕೇಳಿದರು.

ಇನ್ನೆರಡು ತಿಂಗಳು...

ರಮೇಶ್ ಅರವಿಂದ್ ಕೇಳಿದ ಪ್ರಶ್ನೆಗೆ, ''ಇನ್ನೆರಡು ತಿಂಗಳು ಗೊತ್ತಾಗುತ್ತೆ. ಬಿಡಿ ಸಾರ್'' ಎಂದು ರಕ್ಷಿತ್ ಶೆಟ್ಟಿ ಹೇಳಿದ್ದರು.['ನ್ಯೂಸ್'ನಲ್ಲಿ ಏನೂ ಇಲ್ಲ ಅಂದ್ರು, 'ವೀಕೆಂಡ್'ನಲ್ಲಿ ಇನ್ನೆರಡೇ ತಿಂಗಳು ಅಂದ್ರು: ನಿಜಾ ಏನು?]

ಅದು ಇದೇ ವಿಚಾರವೇ.?

ಇನ್ನೆರಡು ತಿಂಗಳಿನಲ್ಲಿ ಗೊತ್ತಾಗುತ್ತೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದು, ತಮ್ಮ ಲವ್ ಸ್ಟೋರಿ... ನಿಶ್ಚಿತಾರ್ಥ... ಮದುವೆ ಕುರಿತಾಗಿಯೇ.? ನಮಗಂತೂ ಗೊತ್ತಿಲ್ಲ. ಆದ್ರೆ, ಒಂದಕ್ಕೊಂದು ಎಲ್ಲವೂ ತಳುಕು ಹಾಕಿಕೊಳ್ಳುತ್ತಿವೆ.

ರಕ್ಷಿತ್ ಶೆಟ್ಟಿ ಬಾಯಿಬಿಡಬೇಕು

ನಿಶ್ಚಿತಾರ್ಥ, ಮದುವೆ ಬಗ್ಗೆ ರಕ್ಷಿತ್ ಶೆಟ್ಟಿ ಇನ್ನೂ ಎಲ್ಲಿಯೂ ಬಾಯ್ಬಿಟ್ಟಿಲ್ಲ. ಅವರ ಬಾಯ್ಬಿಟ್ರೆ, ಸತ್ಯ ಹೊರಗೆ ಬರಬಹುದು. ಅಂತೆ-ಕಂತೆಗೆ ಫುಲ್ ಸ್ಟಾಪ್ ಬೀಳಬಹುದು.

English summary
According to the latest Grapevine, Kannada Actor Rakshit Shetty to get engaged to Rashmika Mandanna on July 3rd. But, Rakshit Shetty's close source has denied this.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada