»   » ನಟಿ ರಮ್ಯಾ ಬಗ್ಗೆ ಹೀಗೊಂದು ಗುಸುಗುಸು.. ಪಿಸುಪಿಸು.. ಸುದ್ದಿ!

ನಟಿ ರಮ್ಯಾ ಬಗ್ಗೆ ಹೀಗೊಂದು ಗುಸುಗುಸು.. ಪಿಸುಪಿಸು.. ಸುದ್ದಿ!

Posted By:
Subscribe to Filmibeat Kannada
Ramya come back sandalwood ? | Filmibeat Kannada

'ಅಭಿ', 'ಆಕಾಶ್', 'ಅರಸು', 'ಸಿದ್ಲಿಂಗು'... ಈ ರೀತಿಯ ಸಿನಿಮಾಗಳನ್ನು ನೋಡುವಾಗ ಅರೇ... ರಮ್ಯಾ ಮತ್ತೆ ಸಿನಿಮಾ ಮಾಡಬೇಕು ಅಂತ ಅನಿಸುತ್ತದೆ. ಎಷ್ಟೋ ಅಭಿಮಾನಿಗಳು ಈಗಲೂ ರಮ್ಯಾ ಸಿನಿಮಾ ಮಾಡಿದರೆ ನಾವು ನೋಡುತ್ತೇವೆ ಎಂದು ಹೇಳುತ್ತಿರುತ್ತಾರೆ. ಅಂತಹ ಅಭಿಮಾನಿಗಳಿಗೆ ಇಷ್ಟ ಆಗುವ ಒಂದು ಸಿಹಿ ಸುದ್ದಿ ಹೊರ ಬಂದಿದೆ.

ಹೌದು, ಮತ್ತೆ ನಟಿ ರಮ್ಯಾ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಈಗ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಸ್ಯಾಂಡಲ್ ವುಡ್ ಕ್ವೀನ್ ಆಗಿದ್ದ ರಮ್ಯಾ ಕೊನೆಯದಾಗಿ ನಟಿಸಿದ್ದು 'ನಾಗರಹಾವು' ಸಿನಿಮಾದಲ್ಲಿ. ಈಗಂತು ರಮ್ಯಾ ರಾಜಕೀಯದಲ್ಲಿ ಬ್ಯುಸಿ ಇದ್ದಾರೆ.

ನಟ ಅನೀಶ್ ಗೆ ಇದೆ ದೊಡ್ಡ ಆಸೆ: ನಟಿ ರಮ್ಯಾ ತಥಾಸ್ತು ಎನ್ನಬೇಕಷ್ಟೆ.!

ಅದೇನೇ ಇದ್ದರೂ 'ಮಹೇಂದರ್ ಮನಸಲ್ಲಿ ಮುಮ್ತಾಜ್' ಎಂಬ ಒಂದು ಹೊಸ ಸಿನಿಮಾದಲ್ಲಿ ರಮ್ಯಾ ನಟಿಸುತ್ತಾರೆ ಎನ್ನುವ ಸುದ್ದಿ ಈಗ ಗಾಂಧಿನಗರದ ಹಾಟ್ ಟಾಪಿಕ್ ಆಗಿದೆ. ಮುಂದೆ ಓದಿ...

ನಾಗಶೇಖರ್ ನಿರ್ಮಾಣದ ಸಿನಿಮಾ

ನಿರ್ದೇಶಕ ನಾಗಶೇಖರ್ ಈಗ ಒಂದು ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದು, ಈ ಚಿತ್ರದ ಮೂಲಕ ನಟಿ ರಮ್ಯಾ ಕಮ್ ಬ್ಯಾಕ್ ಮಾಡಲಿದ್ದಾರಂತೆ.

'ಮಹೇಂದರ್ ಮನಸಲ್ಲಿ ಮುಮ್ತಾಜ್' ಚಿತ್ರ

ಎಸ್.ಮಹೇಂದರ್ ನಿರ್ದೇಶನದ 'ಮಹೇಂದರ್ ಮನಸಲ್ಲಿ ಮುಮ್ತಾಜ್' ಎಂಬ ಹೊಸ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ರಮ್ಯಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡಿದೆ.

ಜಗ್ಗೇಶ್ ಟ್ವಿಟ್ಟರ್ ಗೆ ಬರಲು ರಮ್ಯಾ ಕಾರಣವಂತೆ

ಗಣೇಶ್ ನಾಯಕ

'ಮಹೇಂದರ್ ಮನಸಲ್ಲಿ ಮುಮ್ತಾಜ್' ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿದ್ದು, ಗಣೇಶ್ ಜೊತೆ ರಮ್ಯಾ ತೆರೆ ಹಂಚಿಕೊಳ್ಳಲಿದ್ದಾರಂತೆ.

ಪಾಕಿಸ್ತಾನಿ ನಾಯಕಿ

ಈ ಚಿತ್ರ ಹಿಂದೂ ಮತ್ತು ಮುಸ್ಲಿಂ ಭಾವೈಕ್ಯತೆ ಸಾರುವ ಕಥೆ ಹೊಂದಿದ್ದು, ನಾಯಕಿಯಾಗಿ ಪಾಕಿಸ್ತಾನಿ ಹುಡುಗಿಯನ್ನು ಕರೆತರುವ ತಯಾರಿ ನಡೆಯುತ್ತಿದೆಯಂತೆ.

ರಮ್ಯಾಗೆ 'ಗಾಂಚಲಿ' ಎಂದ ನಟಿ ತೇಜಸ್ವಿನಿ ವಿರುದ್ಧ ಮಹಾಯುದ್ಧ

ರಮ್ಯಾ ಒಪ್ತಾರಾ..?

ಸದ್ಯ ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ರಮ್ಯಾ ಈ ಚಿತ್ರಕ್ಕೆ ಒಪ್ಪುತ್ತಾರಾ ಎಂಬುದನ್ನು ಕಾದು ನೊಡಬೇಕು.

'ಬೊಂಬಾಟ್' ಮತ್ತು 'ಸಂಜು ವೆಡ್ಸ್ ಗೀತಾ'

ಈ ಹಿಂದೆ 'ಬೊಂಬಾಟ್' ಚಿತ್ರದಲ್ಲಿ ಗಣೇಶ್ ಮತ್ತು ರಮ್ಯಾ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ನಾಗಶೇಖರ್ ನಿರ್ದೇಶನದ 'ಸಂಜು ವೆಡ್ಸ್ ಗೀತಾ' ಚಿತ್ರದಲ್ಲಿ ರಮ್ಯಾ ನಾಯಕಿಯಾಗಿದ್ದರು.

English summary
According to the sources, Kannada Actress Ramya might make a come back in 'Mahendar Manasalli Mumthaz' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada