»   » ನಲ್ಲ ಸುದೀಪ್ ಜೊತೆ ಪವರ್ ಸ್ಟಾರ್ ಪುನೀತ್ ಸಿನಿಮಾ ಮಾಡುತ್ತಾರಾ?

ನಲ್ಲ ಸುದೀಪ್ ಜೊತೆ ಪವರ್ ಸ್ಟಾರ್ ಪುನೀತ್ ಸಿನಿಮಾ ಮಾಡುತ್ತಾರಾ?

Posted By:
Subscribe to Filmibeat Kannada
Sudeep and Puneeth Rajkumar to act in Vikram Vedha movie remake

ಕನ್ನಡದಲ್ಲಿ ಮಲ್ಟಿಸ್ಟಾರ್ ಸಿನಿಮಾಗಳು ಹೆಚ್ಚಾಗುತ್ತಿದೆ. ಈ ಹಿಂದೆ ಉಪೇಂದ್ರ ಮತ್ತು ಸುದೀಪ್ 'ಮುಕುಂದ ಮುರಾರಿ' ಚಿತ್ರಕ್ಕಾಗಿ ಒಂದಾಗಿದ್ದರು. ಸದ್ಯ ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೆ 'ದಿ ವಿಲನ್' ಸಿನಿಮಾ ಮಾಡುತ್ತಿದ್ದಾರೆ. ಆದರೆ ಇದೀಗ ಒಂದೇ ಚಿತ್ರದಲ್ಲಿ ಸುದೀಪ್ ಮತ್ತು ಪುನೀತ್ ರಾಜ್ ಕುಮಾರ್ ಕಾಣಿಸಿಕೊಳ್ಳುವ ಸುದ್ದಿಯೊಂದು ಬಂದಿದೆ.

'ವಿಕ್ರಂ ವೇದ' ರೀಮೇಕ್ ಚಿತ್ರದಲ್ಲಿ ಅಬ್ಬರಿಸುತ್ತಾರಾ ಕಿಚ್ಚ ಸುದೀಪ್.?

ಪುನೀತ್ ಮತ್ತು ಸುದೀಪ್ ಒಳ್ಳೆಯ ಗೆಳೆಯರಾಗಿದ್ದರು ಸಹ ಈ ವರೆಗೆ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡುವ ಅವಕಾಶ ಬಂದಿರಲಿಲ್ಲ. ಆದರೆ ಇದೀಗ ಒಂದು ಹೊಸ ಚಿತ್ರದಲ್ಲಿ ಸುದೀಪ್ ಮತ್ತು ಪುನೀತ್ ಜೋಡಿಯಾಗಲಿದ್ದಾರೆ ಎಂಬ ಸುದ್ದಿ ಹೇಳಿ ಬಂದಿದೆ. ಅಂದಹಾಗೆ, ಈ ಇಬ್ಬರು ನಟರನ್ನು ಒಂದೇ ಚಿತ್ರದಲ್ಲಿ ಸೇರಿಸುವ ಪ್ಲಾನ್ ಮಾಡಿರುವುದು ನಿರ್ಮಾಪಕ ಸಿ.ಆರ್.ಮನೋಹರ್. ಮುಂದೆ ಓದಿ...

ಸಿ.ಆರ್.ಮನೋಹರ್ ಪ್ಲಾನ್

ನಿರ್ಮಾಪಕ ಸಿ.ಆರ್.ಮನೋಹರ್ ತಮ್ಮ ಹೊಸ ಚಿತ್ರವನ್ನು ಕನ್ನಡದ ಸ್ಟಾರ್ ನಟರಾದ ಸುದೀಪ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಶನ್ ನಲ್ಲಿ ಮಾಡುವ ತಯಾರಿ ನಡೆಸಿದ್ದಾರೆ.

ಯಾವುದು ಆ ಸಿನಿಮಾ..?

ತಮಿಳಿನ 'ವಿಕ್ರಂವೇದ' ಚಿತ್ರವನ್ನು ಕನ್ನಡದಲ್ಲಿ ಮಾಡುವ ಆಸೆ ಹೊಂದಿರುವ ಸಿ.ಆರ್.ಮನೋಹರ್ ಈ ಚಿತ್ರದಲ್ಲಿ ಸುದೀಪ್ ಮತ್ತು ಪುನೀತ್ ರಾಜ್ ಕುಮಾರ್ ಜೋಡಿಯನ್ನು ಸೇರಿಸುವ ಪ್ಲಾನ್ ಮಾಡಿದ್ದಾರೆ.

ಸುದೀಪ್ ಮತ್ತು ಪುನೀತ್

'ವಿಕ್ರಂ ವೇದ' ಚಿತ್ರದಲ್ಲಿ ಮಾಧವನ್ ಮತ್ತು ವಿಜಯ್ ಸೇತುಪತಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಇಲ್ಲಿ ಸುದೀಪ್ ಮತ್ತು ಪುನೀತ್ ಆ ಪಾತ್ರಗಳನ್ನು ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಇದೆ.

ಸಿ.ಆರ್.ಮನೋಹರ್ ಮಾತುಕತೆ

ನಿರ್ಮಾಪಕ ಸಿ.ಆರ್.ಮನೋಹರ್ 'ವಿಕ್ರಂ ವೇದ' ಚಿತ್ರದ ರೀಮೇಕ್ ರೈಟ್ಸ್ ಪಡೆದ ನಂತರ ಈ ಬಗ್ಗೆ ಪುನೀತ್ ಮತ್ತು ಸುದೀಪ್ ಜೊತೆ ಮಾತುಕತೆ ನಡೆಸಲಿದ್ದಾರಂತೆ.

ಒಟ್ಟಿಗೆ ಡ್ಯಾನ್ಸ್ ಮಾಡಿದ್ದರು

ಒಟ್ಟಿಗೆ ಸಿನಿಮಾ ಮಾಡದಿದ್ದರು 'ರಾಜಕುಮಾರ' ಶತಕ ಸಂಭ್ರಮ ಕಾರ್ಯಕ್ರಮದಲ್ಲಿ ಸುದೀಪ್ ಮತ್ತು ಪುನೀತ್ ಒಟ್ಟಿಗೆ ಡ್ಯಾನ್ಸ್ ಮಾಡಿದ್ದರು.

50 ಕೋಟಿ ಗಳಿಸಿದ್ದ ಚಿತ್ರ

'ವಿಕ್ರಂ ವೇದ' ಈ ಜಮಾನದ ಸಿನಿಪ್ರಿಯರಿಗೆ ಹುಚ್ಚು ಹಿಡಿಸಿದ ಸಿನಿಮಾ. ಕೇವಲ 11 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ 50 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ.

English summary
Producer C.R.Manohar planning to cast Sudeep and Puneeth Rajkumar for 'Vikram Vedha' kannada remake.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada