»   » ರಾಕಿಂಗ್ ಸ್ಟಾರ್ ಮತ್ತು ರೆಬೆಲ್ ಸ್ಟಾರ್ ಮತ್ತೆ ಒಂದಾದ್ರೆ?

ರಾಕಿಂಗ್ ಸ್ಟಾರ್ ಮತ್ತು ರೆಬೆಲ್ ಸ್ಟಾರ್ ಮತ್ತೆ ಒಂದಾದ್ರೆ?

Posted By: ಹರ್ಷಿತಾ ರಾಕೇಶ್
Subscribe to Filmibeat Kannada

ಮೊನ್ನೆ ಮೊನ್ನೆತಾನೇ ರಾಕಿಂಗ್ ಸ್ಟಾರ್ ಯಶ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಜನ್ಮದಿನದ ಮಾರನೇ ದಿನ ರೆಬೆಲ್ ಸ್ಟಾರ್ ಅಂಬರೀಶ್ ಮನೆಗೆ ಯಶ್ ಭೇಟಿ ಕೊಟ್ಟರು.

ಮೂಲಗಳ ಪ್ರಕಾರ, ಅಂಬರೀಶ್ ಮನೆಗೆ ಯಶ್ ಭೇಟಿ ನೀಡಿದ್ದು ಸಿನಿಮಾ ವಿಚಾರ ಚರ್ಚಿಸುವುದಕ್ಕೆ! ಯಾವ ಸಿನಿಮಾ, ಏನ್ ಕಥೆ ಅಂತ ಗೊತ್ತಿರುವುದು ಯಶ್ ಮತ್ತು ಅಂಬರೀಶ್ ಗೆ ಮಾತ್ರ.![ಯಶ್ ಬರ್ತಡೆಗೆ 'ಮಾಸ್ಟರ್ ಪೀಸ್' ತಂಡದ ಸ್ಪೆಷಲ್ ಸರ್ ಪ್ರೈಸ್!]

Will Yash and Ambareesh share screen space again?

ಹಾಗಾದ್ರೆ, 'ಮಂಡ್ಯದ ಮಾಸ್ಟರ್ ಪೀಸ್' ಜೊತೆ 'ಮಂಡ್ಯದ ಗಂಡು' ಮತ್ತೆ ಆಕ್ಟ್ ಮಾಡ್ತಾರಾ? ಕಾಲ ಕೂಡಿ ಬಂದರೆ ಆದರೂ ಆಗಬಹುದು. ಹೇಗಿದ್ದರೂ, ಕೆ.ಮಂಜು ನಿರ್ಮಾಣದಲ್ಲಿ ಯಶ್ ರವರ ಹೊಸ ಸಿನಿಮಾ ಸೆಟ್ಟೇರಿದೆ. ಚಿತ್ರದ ತಾರಾಬಳಗ ಇನ್ನೂ ಫೈನಲ್ ಆಗಿಲ್ಲ. ಸದ್ಯದಲ್ಲೇ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ. ಚಿತ್ರದ ಪ್ರಮುಖ ತಾರಾಗಣದಲ್ಲಿ ಅಂಬಿಗೆ ಹೊಂದಾಣಿಕೆ ಆಗುವ ಪಾತ್ರ ಇದ್ದರೆ?[ಅಂಬರೀಶ್ ಮನೆಯ 'ಕನ್ವರ್ ಲಾಲ್' ಮತ್ತು 'ಬುಲ್ ಬುಲ್' ನೋಡಿದ್ದೀರಾ?]

Will Yash and Ambareesh share screen space again?

ಇಂತಹ ಹಲವು ಪ್ರಶ್ನೆಗಳು ಗಾಂಧಿನಗರದವರಿಗೆ ಕಾಡುತ್ತಿದೆ. ಅದೇನೇಯಿದ್ದರೂ ಅಂಬರೀಶ್ ಅಂದ್ರೆ ಯಶ್ ಗೆ ಸಖತ್ ಇಷ್ಟ. ಹುಟ್ಟುಹಬ್ಬದ ಪ್ರಯುಕ್ತ ಅವರ ಆಶೀರ್ವಾದ ಪಡೆಯುವುದಕ್ಕೂ ಯಶ್ ಹೋಗಿರ್ಬಹುದಲ್ವಾ?

ನಿಜ ಜೀವನದಲ್ಲಿ ಅತ್ಯಾಪ್ತರಾಗಿರುವ ಯಶ್ ಮತ್ತು ಅಂಬರೀಶ್ 'ಡ್ರಾಮಾ' ಸಿನಿಮಾ ನಂತರ ಮತ್ತೆ ತೆರೆಮೇಲೆ ಒಂದಾದ್ರೆ ರಾಕಿಂಗ್ ಮತ್ತು ರೆಬೆಲ್ ಅಭಿಮಾನಿಗಳಿಗೆ ಅದಕ್ಕಿಂತ ದೊಡ್ಡ ಹಬ್ಬ ಮತ್ತೊಂದಿಲ್ಲ.!

English summary
Kannada Actor Yash met Ambareesh recently at his residence. Will Yash and Ambareesh share screen space again? Well, time has to answer this.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada