For Quick Alerts
  ALLOW NOTIFICATIONS  
  For Daily Alerts

  ಫೇರ್ ಅಂಡ್ ಲವ್ಲೀ ಸುಂದರಿಗೆ ಕಿಚ್ಚನ ಜೊತೆ ನಟಿಸುವ ಆಸೆಯಂತೆ!

  By Suneetha
  |

  ಫೇರ್ ಅಂಡ್ ಲವ್ಲೀ ಜಾಹೀರಾತಿನಲ್ಲಿ ಬರುವ ಸುಂದರಿ ಯಾಮಿ ಗೌತಮ್ ಗೆ ಹೊಸ ಆಸೆಯೊಂದು ಮೂಡಿದೆ. ಅದೇನಪ್ಪಾ ಅಂದ್ರೆ ಆಕೆಗೆ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರೊಂದಿಗೆ ನಟಿಸುವ ಆಸೆಯಂತೆ! ಓ ಮೈ ಗಾಡ್ ಕನ್ನಡಿಗರಿಗೆ ಎಂತ ಹಾಟ್ ನ್ಯೂಸ್ ಅಲ್ವಾ?.

  ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ 'ಉಲ್ಲಾಸ ಉತ್ಸಾಹ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಈ ಸುಂದರಿಗೆ ಇದೀಗ ಸದ್ಯಕ್ಕೆ ಲೀಡ್ ನಲ್ಲಿರುವ ನಟ ಸುದೀಪ್ ಅವರೊಂದಿಗೆ ನಟಿಸಬೇಕೆಂಬ ಹಂಬಲ ಉಂಟಾಗಿದೆ.

  ಅಂದಹಾಗೆ ಯಾಮಿ ಗೌತಮ್ ಅವರಿಗೆ ಕನ್ನಡ ಚಿತ್ರರಂಗದ ಬಗ್ಗೆ ವಿಶೇಷ ಒಲವು ಹಾಗೂ ಗೌರವ ಇದೆಯಂತೆ, ಜೊತೆಗೆ ಅವಕಾಶ ಸಿಕ್ಕರೆ ಸದ್ಯದಲ್ಲೇ ಕನ್ನಡ ಚಿತ್ರವೊಂದರಲ್ಲಿ ನಟಿಸುತ್ತೇನೆ ಎಂದು ಯಾಮಿ ಅವರು ಹೇಳಿದ್ದಾರೆ.

  ಸದ್ಯಕ್ಕೆ ಕನ್ನಡ ಚಿತ್ರರಂಗ ಎಲ್ಲೆಡೆ ಒಳ್ಳೆ ಹೆಸರು ಗಳಿಸುತ್ತಿದೆ. ಅದ್ರಲ್ಲೂ ಸುದೀಪ್ ನಂತಹ ಹೀರೋ ಕನ್ನಡ ಚಿತ್ರರಂಗಕ್ಕೆ ಒಂದು ಕೊಡುಗೆ ಇದ್ದಂತೆ, ಜೊತೆಗೆ ಇತ್ತೀಚೆಗೆ ಬಿಡುಗಡೆಯಾದ ಕಿಚ್ಚ ಸುದೀಪ್ ಅವರ ಚಿತ್ರಗಳು ಒಂದಕ್ಕಿಂತ ಒಂದು ಅದ್ಭುತವಾಗಿದ್ದವು, ಎಂದು ವಿಕ್ಕಿ ಡೋನರ್ ಚಿತ್ರದ ನಟಿ ಯಾಮಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಇನ್ನು ಸುದೀಪ್ ಅವರೊಂದಿಗೆ ನೀವು ನಟಿಸುತ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಖಂಡಿತ ಅವಕಾಶ ಸಿಕ್ಕರೆ ಖಂಡಿತ ನಟಿಸುತ್ತೇನೆ ಎಂದು ನಗುತ್ತಾರೆ.

  ಅದೇನೇ ಇರಲಿ ಒಟ್ನಲ್ಲಿ ಸಖತ್ ಟ್ಯಾಲೆಂಟೆಡ್ ನಟ ನಮ್ಮ ಕಿಚ್ಚ ಸುದೀಪ್ ಅವರ ಇತ್ತೀಚಿಗಿನ ಖ್ಯಾತಿಯಿಂದಾಗಿ ಪರಭಾಷಾ ನಟಿಯರು ಅವರೊಂದಿಗೆ ತೆರೆ ಹಂಚಿಕೊಳ್ಳುವ ಬಯಕೆ ವ್ಯಕ್ತಪಡಿಸುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ ಅಂತಾನೇ ಹೇಳಬಹುದು.

  English summary
  Look which actress has shown interest to share onscreen space with Abhinaya Chakravarthy Sudeep. It's actress Yami Gautam who made her debut through Golden Star Ganesh's Ullasa Utsaha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X