»   » ಈ ಬಾರಿ ತೆರೆ ಮೇಲೆ 'ದೀಪಾವಳಿ' ಆಚರಿಸ್ತಾರಾ ಭಾವಿ ದಂಪತಿ?

ಈ ಬಾರಿ ತೆರೆ ಮೇಲೆ 'ದೀಪಾವಳಿ' ಆಚರಿಸ್ತಾರಾ ಭಾವಿ ದಂಪತಿ?

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಕಾಂಬಿನೇಷನ್ ನ 'ಸಂತು Straight Forward' ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದ್ದು, ಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ. ಸತತ ನಾಲ್ಕನೇ ಬಾರಿಗೆ ಭಾವಿ ಜೋಡಿಯಾದ ಯಶ್ ಮತ್ತು ರಾಧಿಕಾ ಒಂದಾಗಿ ಕಾಣಿಸಿಕೊಂಡಿರುವ ಈ ಚಿತ್ರದ ಮೇಲೆ ಎಲ್ಲರಿಗೂ ಸಾಕಷ್ಟು ನಿರೀಕ್ಷೆ-ಕುತೂಹಲಗಳಿವೆ.

ಬಹುತೇಕ ಕೊನೆಯ ಹಂತದ ಶೂಟಿಂಗ್ ನಲ್ಲಿ ಬಿಜಿಯಾಗಿರುವ ಚಿತ್ರತಂಡ, ಇನ್ನೇನು ಒಂದು ಹಾಡಿನ ಶೂಟಿಂಗ್ ಮುಗಿಸಲು ಸಜ್ಜಾಗಿದೆ. ಅದಾದ ನಂತರ ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಕ್ಕೆ ಕೈ ಹಾಕಲಿದೆ.['ಸಂತು' ಅಲಿಯಾಸ್ ಯಶ್ ಕಡೆಯಿಂದ ಅಭಿಮಾನಿಗಳಿಗೆ ಸರ್ ಪ್ರೈಸ್]


Yash's 'Santhu Straight Forward' releasing this month

ಇದೀಗ ಲೇಟೆಸ್ಟ್ ಮಾಹಿತಿ ಏನಪ್ಪಾ ಅಂದ್ರೆ, ಯಶಸ್ವಿ ಜೋಡಿ ಎನಿಸಿಕೊಂಡಿರುವ ಯಶ್ ಮತ್ತು ರಾಧಿಕಾ ಪಂಡಿತ್ ಅವರು, ಈ ವರ್ಷದ ದೀಪಾವಳಿ ಹಬ್ಬವನ್ನು ತೆರೆಯ ಮೇಲೆ ಆಚರಿಸಿಕೊಳ್ಳುತ್ತಾರಂತೆ.


ಅಂದ್ರೆ, ಇದೇ ತಿಂಗಳು ದೀಪಾವಳಿ ಹಬ್ಬಕ್ಕೆ 'ಸಂತು Straight Forward' ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕ ಕೆ.ಮಂಜು ಅವರು ಯೋಜನೆ ಹಾಕಿಕೊಂಡಿದ್ದಾರೆ ಎನ್ನಲಾಗುತ್ತಿದೆ.[ಯಶ್-ರಾಧಿಕಾ ಪಂಡಿತ್ ಹೊಸ ಚಿತ್ರಕ್ಕೆ ಸ್ಟೈಲಿಷ್ ವಿಲನ್ ಎಂಟ್ರಿ]


Yash's 'Santhu Straight Forward' releasing this month

ಹಲವಾರು ವಿಶೇಷತೆಗಳನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಖಳನಟನಾಗಿ ದಕ್ಷಿಣ ಭಾರತದ ನಟ ಶ್ಯಾಮ್ ಅವರು ಮಿಂಚಿದ್ದಾರೆ. ನಿರ್ದೇಶಕ ಮಹೇಶ್ ರಾವ್ ಅವರು ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ವಿ.ಹರಿಕೃಷ್ಣ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.


ಚಿತ್ರದ ಹಾಡುಗಳಿಗಂತೂ ಈಗಾಗಲೇ ಭಾರಿ ಬೇಡಿಕೆ ಬಂದಿದ್ದು, ಬರೋಬ್ಬರಿ 1.08 ಕೋಟಿ ರೂಪಾಯಿ ಮೊತ್ತಕ್ಕೆ ಆಡಿಯೋ ಹಕ್ಕು ಸೇಲ್ ಆಗಿದೆ. ಲಹರಿ ಸಂಸ್ಥೆ ಮ್ಯೂಸಿಕ್ ಹಕ್ಕನ್ನು ಭರ್ಜರಿ ಮೊತ್ತ ನೀಡಿ ಕೊಂಡುಕೊಂಡಿದೆ.


Yash's 'Santhu Straight Forward' releasing this month

ಈಗಾಗಲೇ ನಿಶ್ಚಿತಾರ್ಥ ನೆರವೇರಿಸಿಕೊಂಡಿರುವ ಭಾವಿ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಅವರು, 'ಸಂತು Straight Forward' ಚಿತ್ರದ ಮೂಲಕ ತೆರೆಯ ಮೇಲೆ ಯಾವ ರೀತಿ ಪ್ರೇಕ್ಷಕರಿಗೆ ಮೋಡಿ ಮಾಡುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

English summary
Kannada Actor Yash and Actress Radhika Pandit starrer Kannada Movie 'Santhu Straight Forward' is likely to release this month itself. The movie is directed by Mahesh Rao and produced by K Manju.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada