For Quick Alerts
  ALLOW NOTIFICATIONS  
  For Daily Alerts

  'ಸಂತು' ಅಲಿಯಾಸ್ ಯಶ್ ಕಡೆಯಿಂದ ಅಭಿಮಾನಿಗಳಿಗೆ ಸರ್ ಪ್ರೈಸ್

  By Suneetha
  |

  ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ನಾಲ್ಕನೇ ಬಾರಿಗೆ ಒಂದಾಗಿ ಕಾಣಿಸಿಕೊಂಡಿರುವ 'ಸಂತು Straight Forward' ಚಿತ್ರ, ಟೈಟಲ್ ವಿಚಾರದಲ್ಲಿ ಈ ಮೊದಲು ಭಾರಿ ಸುದ್ದಿ ಮಾಡಿತ್ತು.

  ಮೊದಲು 'ಗಾಂಧಿಗಿರಿ' ಆಯ್ತು, ತದನಂತರ 'ಮಾಂಜಾ' ಅಂತಾಯ್ತು, ಕೊನೆಗೆ ಇದ್ಯಾವುದೂ ಅಲ್ಲ 'ಸಂತು Straight Forward' ಅಂತ ಫಿಕ್ಸ್ ಆಯ್ತು. ಈಗಾಗಲೇ ಬಹುತೇಕ ಕೊನೆಯ ಹಂತದ ಚಿತ್ರೀಕರಣದಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಬಿಜಿಯಾಗಿದ್ದಾರೆ.[ಅದು ಬಿಟ್ಟು, ಇದು ಬಿಟ್ಟು, ಮತ್ಯಾವುದು? ಯಶ್-ರಾಧಿಕಾ ಚಿತ್ರದ ಹೆಸರು?]

  ಭಾವಿ ದಂಪತಿಗಳಾದ ಯಶ್ ಮತ್ತು ರಾಧಿಕಾ ಅವರ 'ಮಿ.ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ ಬಾಕ್ಸಾಫೀಸ್ ನಲ್ಲಿ ಹಿಟ್ ಆದ ಕಾರಣ, ಇವರಿಬ್ಬರು ಮಗದೊಮ್ಮೆ ಒಂದಾಗಿರುವ ಈ ಸಿನಿಮಾದ ಮೇಲೂ ಸಹಜವಾಗಿ ನಿರೀಕ್ಷೆ ಕೊಂಚ ಜಾಸ್ತೀನೇ ಇದೆ.

  ಇದೀಗ ಮಹೇಶ್ ರಾವ್ ನಿರ್ದೇಶನದ, ಕೆ.ಮಂಜು ನಿರ್ಮಾಣದ ಈ ಚಿತ್ರದಿಂದ ಒಂದು ಲೇಟೆಸ್ಟ್ ಮಾಹಿತಿ ಹೊರಬಿದ್ದಿದೆ. ಈ ಸುದ್ದಿ ಕೇಳಿದ್ರೆ ಖಂಡಿತ ನೀವು ಕಣ್ ಬಾಯ್ ಬಿಟ್ಟು ಒಂದರೆಕ್ಷಣ ಸ್ತಬ್ಧರಾಗೋದು ಗ್ಯಾರೆಂಟಿ. ಏನಪ್ಪಾ ಅಂತಹ ವಿಶೇಷ ಸುದ್ದಿ ಅಂತೀರಾ?, ಹಾಗಿದ್ರೆ ಮುಂದೆ ಓದಿ....

  ಸ್ತಬ್ದರಾಗೋವಂತಹ ಸುದ್ದಿ ಏನಪ್ಪಾ?

  ಸ್ತಬ್ದರಾಗೋವಂತಹ ಸುದ್ದಿ ಏನಪ್ಪಾ?

  ಯಶ್ ಮತ್ತು ರಾಧಿಕಾ ಕಾಂಬಿನೇಷನ್ ನ 'ಸಂತು Straight Forward' ಚಿತ್ರ ಬಿಡುಗಡೆಗೆ ಮುನ್ನ ಸದ್ದು ಮಾಡುತ್ತಿದೆ. ಈ ಚಿತ್ರದ ಆಡಿಯೋ ಹಕ್ಕು ಇದೀಗ ದಾಖಲೆ ಮೊತ್ತಕ್ಕೆ ಸೇಲ್ ಆಗಿದ್ಯಂತೆ. ಅಬ್ಬಬ್ಬಾ ಅಂದ್ರೆ ಎಷ್ಟು ಮೊತ್ತಕ್ಕೆ ಅನ್ನೋ ಕುತೂಹಲ ಇದ್ಯಾ, ಮುಂದೆ ನೋಡಿ...[ಯಶ್-ರಾಧಿಕಾ ಪಂಡಿತ್ ಹೊಸ ಚಿತ್ರಕ್ಕೆ ಸ್ಟೈಲಿಷ್ ವಿಲನ್ ಎಂಟ್ರಿ]

  ಎಷ್ಟು ಮೊತ್ತಕ್ಕೆ ಮಾರಾಟ ಆಗಿದೆ?

  ಎಷ್ಟು ಮೊತ್ತಕ್ಕೆ ಮಾರಾಟ ಆಗಿದೆ?

  ಬರೀ ಲಕ್ಷ ಅಲ್ಲ, ಬರೋಬ್ಬರಿ 1.08 ಕೋಟಿ ದಾಖಲೆ ಮೊತ್ತಕ್ಕೆ 'ಸಂತು Straight Forward' ಚಿತ್ರದ ಆಡಿಯೋ ಹಕ್ಕು ಮಾರಾಟ ಆಗಿದೆ ಅಂತ ಚಿತ್ರದ ಹತ್ತಿರದ ಮೂಲಗಳಿಂದ ಮಾಹಿತಿ ಒದಗಿ ಬಂದಿದೆ.['ಅಭಿಮಾನಿಗಳೇ ಏಪ್ರಿಲ್ ಫೂಲ್ ಆಗಬೇಡಿ' ಅಂತ ಯಶ್ ಯಾಕಂದ್ರು?]

  'ಜಾಗ್ವಾರ್' V/S 'ಸಂತು'

  'ಜಾಗ್ವಾರ್' V/S 'ಸಂತು'

  ಕನ್ನಡದ ಮಟ್ಟಿಗೆ ಇದು ದಾಖಲೆ ಸರಿ. ಆದ್ರೆ ಕುಮಾರಸ್ವಾಮಿ ಅವರ ಸುಪುತ್ರ ನಿಖಿಲ್ ಕುಮಾರ್ ಅವರ 'ಜಾಗ್ವಾರ್' ಚಿತ್ರದ ಆಡಿಯೋ ಕೂಡ ಇಷ್ಟೇ (1.08) ಮೊತ್ತಕ್ಕೆ ಸೇಲ್ ಆಗಿದೆ. ಆದ್ದರಿಂದ ನಿಖಿಲ್ ಕುಮಾರ್ ಅವರಿಗೆ ಯಶ್ ಅವರು ಹಾಡುಗಳ ಮೂಲಕ ಫೈಟ್ ಕೊಟ್ಟಂತಾಗಿದೆ.['ಜಾಗ್ವಾರ್' ಚಿತ್ರದ ಈ ಸುದ್ದಿ ಕೇಳಿದ್ರೆ, ನೀವು ತಲೆ ತಿರುಗಿ ಬೀಳ್ತೀರಾ!]

  'ಸಂತು' ಆಡಿಯೋ ಹಕ್ಕು ಯಾರ ತೆಕ್ಕೆಗೆ ಬಿತ್ತು?

  'ಸಂತು' ಆಡಿಯೋ ಹಕ್ಕು ಯಾರ ತೆಕ್ಕೆಗೆ ಬಿತ್ತು?

  'ಸಂತು Straight Forward' ಚಿತ್ರದ ಆಡಿಯೋ ಹಕ್ಕನ್ನು ಭಾರಿ ಮೊತ್ತ ಕೊಟ್ಟು ಖರೀದಿ ಮಾಡಿದ್ದು, ಬೇರಾರು ಅಲ್ಲ, ಖ್ಯಾತ ಆಡಿಯೋ ಸಂಸ್ಥೆ ಲಹರಿ ಆಡಿಯೋ. ಲಹರಿ ಸಂಸ್ಥೆಯ ಒಡೆಯ ಲಹರಿ ವೇಲು ಅವರು 1 ಕೋಟಿ 8 ಲಕ್ಷ ಕೊಟ್ಟು ಈ ಚಿತ್ರದ ಆಡಿಯೋ ಹಕ್ಕು ಪಡೆದಿದ್ದಾರೆ ಅಂತ ಮೂಲಗಳು ಹೇಳುತ್ತಿವೆ.[ಯಶ್-ರಾಧಿಕಾರ ಹೊಸ ಚಿತ್ರದ ಶೂಟಿಂಗ್ ಗೆ ಗಂಡಾಂತರ]

  2 ಚಿತ್ರದ ಆಡಿಯೋ ಹಕ್ಕು ಒಂದೇ ರೇಟ್ ಗೆ

  2 ಚಿತ್ರದ ಆಡಿಯೋ ಹಕ್ಕು ಒಂದೇ ರೇಟ್ ಗೆ

  'ಜಾಗ್ವಾರ್' ಆಡಿಯೋ ಹಕ್ಕನ್ನು ಕೂಡ ಲಹರಿ ವೇಲು ಅವರು ಇಷ್ಟೇ ಮೊತ್ತ ನೀಡಿ ಖರೀದಿಸಿದ್ದಾರೆ. ಅಂದಹಾಗೆ ಲಹರಿ ಅವರು ಎರಡು ಚಿತ್ರಗಳ ಆಡಿಯೋ ಹಕ್ಕನ್ನು ಒಂದೇ ರೇಟ್ ಗೆ ಖರೀದಿ ಮಾಡಿದ್ದಾದರೂ ಯಾಕೆ ಅಂತ, ಸದ್ಯಕ್ಕೆ ಎಲ್ಲರಲ್ಲಿರುವ ಅನುಮಾನ.

  ಮ್ಯೂಸಿಕ್ ಕಂಪೋಸ್ ಮಾಡಿದ್ದು ಯಾರು?

  ಮ್ಯೂಸಿಕ್ ಕಂಪೋಸ್ ಮಾಡಿದ್ದು ಯಾರು?

  'ಸಂತು Straight Forward' ಚಿತ್ರದ ಹಾಡುಗಳಿಗೆ ವಿ.ಹರಿಕೃಷ್ಣ ಅವರು ಸಂಗೀತ ಸಂಯೋಜನೆ ಮಾಡಿದ್ದು, ನಿರ್ದೇಶಕ ಯೋಗರಾಜ್ ಭಟ್ ಮತ್ತು ಗೌಸ್ ಪೀರ್ ಸಾಹಿತ್ಯ ಬರೆದು ಹಾಡು ಕಟ್ಟಿದ್ದಾರೆ.

  ಯಾವಾಗ ಆಡಿಯೋ

  ಯಾವಾಗ ಆಡಿಯೋ

  ನವೆಂಬರ್ 28ಕ್ಕೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದ್ದು, ಅದಕ್ಕಿಂತ ಮುನ್ನ ಅದ್ಧೂರಿಯಾಗಿ ಆಡಿಯೋ ಬಿಡುಗಡೆ ಮಾಡಲು ನಿರ್ಮಾಪಕ ಕೆ.ಮಂಜು ಅವರು ಪ್ಲ್ಯಾನ್ ಮಾಡುತ್ತಿದ್ದಾರೆ.

  English summary
  Kannada Actor Yash, Kannada Actress Radhika Pandit starrer Kannada Movie 'Santhu Straight Forward', Audio rights is sold for record price (1.08 Crore) to Lahari Audio Company. The Movie is directed by Mahesh Rao and Produced by K Manju.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X