»   » 'ಪ್ಯಾರ್ಗೆ' ಪಾರುಲ್ ಲಕ್ ಚೇಂಜ್ ಆಗಿದ್ದಕ್ಕೆ ಇದೇ ಕಾರಣ..!

'ಪ್ಯಾರ್ಗೆ' ಪಾರುಲ್ ಲಕ್ ಚೇಂಜ್ ಆಗಿದ್ದಕ್ಕೆ ಇದೇ ಕಾರಣ..!

Posted By:
Subscribe to Filmibeat Kannada

'ವಾಸ್ತುಪ್ರಕಾರ' ಸಿನಿಮಾ ಇಂದು ರಾಜ್ಯದಾದ್ಯಂತ ರಿಲೀಸ್ ಆಗುತ್ತಿದೆ. ವಾಸ್ತು ಬಗ್ಗೆ ನಂಬಿಕೆ ಇರುವವರು, ಇಲ್ಲದವರು, ಎಲ್ಲರೂ ನೋಡಲೇಬೇಕಾದ ಸಿನಿಮಾ ಇದು ಅಂತ ನಿರ್ದೇಶಕ ಯೋಗರಾಜ್ ಭಟ್ ಹೇಳಿದ್ದಾರೆ.

ವಾಸ್ತು ಶಾಸ್ತ್ರವನ್ನ ಅಸ್ತ್ರವಾಗಿ ಇಟ್ಟುಕೊಂಡು ನವರಸ ನಾಯಕ ಜಗ್ಗೇಶ್, ರಕ್ಷಿತ್ ಶೆಟ್ಟಿ ದುಡ್ಡು ಮಾಡಿಕೊಳ್ಳುವುದಕ್ಕೆ ಹೊರಟರೆ, ಲಾಯರ್ ಪಾತ್ರದಲ್ಲಿ 'ಪ್ಯಾರ್ಗೆ' ಪಾರುಲ್ ಯಾದವ್ ಕಾಣಿಸಿಕೊಂಡಿದ್ದಾರೆ. ನಿಜಜೀವನದಲ್ಲಿ ಜಗ್ಗೇಶ್ ಮತ್ತು ರಕ್ಷಿತ್ ಶೆಟ್ಟಿ ವಾಸ್ತು ಬಗ್ಗೆ ಎಷ್ಟು ನಂಬುತ್ತಾರೋ ಗೊತ್ತಿಲ್ಲ. ಆದ್ರೆ, ಪಾರುಲ್ ಗೆ ಮಾತ್ರ ವಾಸ್ತು ಶಾಸ್ತ್ರದ ಬಗ್ಗೆ ಸೆಳೆತ ಇದ್ದೇ ಇದೆ.


Yellow Sapphire is Parul Yadav's lucky charm

ಚಿತ್ರರಂಗಕ್ಕೆ ಕಾಲಿಡುವ ಮುಂಚೆ ಪಾರುಲ್ ಯಾದವ್ ಇಂಟೀರಿಯರ್ ಡಿಸೈನರ್ ಆಗಿದ್ದವರು. ಎಷ್ಟೋ ಮನೆಗೆ ಇಂಟೀರಿಯರ್ ಡೆಕೊರೇಟ್ ಮಾಡುವಾಗ, ಎಲ್ಲರೂ ವಾಸ್ತು ಪ್ರಕಾರವಾಗಿ ಮಾಡುವುದಕ್ಕೆ ಹೇಳುತ್ತಿದ್ದರಂತೆ. ಅದ್ರಿಂದ, ವಾಸ್ತು ಬಗ್ಗೆ ಪಾರುಲ್ ಗೆ ಆಸಕ್ತಿ ಹುಟ್ಟಿದೆ. [ಪರುಲ್ 'ವಾಸ್ತು ಪ್ರಕಾರ' ಪ್ರಾಣಾಪಾಯದಿಂದ ಪಾರು]


ವಾಸ್ತುಕ್ಕಿಂತ ಹೆಚ್ಚಾಗಿ ಅದೃಷ್ಟದ ಬಗ್ಗೆ ಹೆಚ್ಚು ನಂಬಿಕೆ ಇಟ್ಟುಕೊಂಡಿದ್ದಾರೆ ಪಾರುಲ್. 'ಪ್ಯಾರ್ಗೆ ಆಗ್ಬಿಟೈತೆ' ಹುಡುಗಿಯ ಕೈಯನ್ನ ನೀವು ಗಮನಿಸಿದ್ದರೆ, ಅವರ ತೋರು ಬೆರಳಲ್ಲಿ Yellow Sapphire ಹರಳು ಇರುವ ಉಂಗುರವನ್ನ ಧರಿಸಿದ್ದಾರೆ.


parul yadav

ಈ ಉಂಗುರವನ್ನ ಧರಿಸಿವುದಕ್ಕೆ ಸೂಚಿಸಿದವರು ಅವರ ತಾಯಿ. ಅದೃಷ್ಟದ ಹರಳಿನ ಉಂಗುರವನ್ನ ಧರಿಸಿದ ಬಳಿಕ ಪಾರುಲ್ ಗೆ ಲಕ್ ಚೇಂಜ್ ಆಯ್ತಂತೆ. ಸ್ಯಾಂಡಲ್ ವುಡ್ ಗೆ ಕಾಲಿಟ್ಟು ಬ್ಯಾಕ್ ಟು ಬ್ಯಾಕ್ ಹಿಟ್ಸ್ ಕೊಟ್ಟಿದ್ದಾರೆ. ಈಗಲೂ, ವೃತ್ತಿ ಬದುಕು ಚೆನ್ನಾಗಿದೆ ಅಂತಾರೆ ಪಾರುಲ್ ಯಾದವ್. [ಎಲ್ಲಿಂದಲೋ ಬಂದವರು ಈಗ ಕನ್ನಡ ಬಾಂಧವರು]


ಇದು ಕಾಕತಾಳೀಯವೋ, ಇಲ್ಲ ನಂಬಿಕೆಯೋ..ಗೊತ್ತಿಲ್ಲ. ಒಟ್ನಲ್ಲಿ, ಪಾರುಲ್ ಶ್ರಮದ ಜೊತೆ ಅದೃಷ್ಟ ಖುಲಾಯಿಸಿರುವುದಕ್ಕೆ ಸ್ಯಾಂಡಲ್ ವುಡ್ ನಲ್ಲಿ ಬಿಜಿಯಾಗಿದ್ದಾರೆ. 'ವಾಸ್ತುಪ್ರಕಾರ' ಹಿಟ್ ಆದರೆ, ಅವರು ಇನ್ನಷ್ಟು ಬಿಜಿಯಾಗುವುದು ಪಕ್ಕಾ. (ಏಜೆನ್ಸೀಸ್)

English summary
Kannada Actress Parul Yadav has revealed her Lucky charm. The Actress wears a ring which has Yellow Sapphire and has believed that her career has turned good after wearing it.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X