For Quick Alerts
  ALLOW NOTIFICATIONS  
  For Daily Alerts

  ಯುವರಾಜ್ ಸಿಂಗ್ ಬಯೋಪಿಕ್ ಗೆ ತಯಾರಿ: ಯಾರಾಗ್ತಾರೆ 'ಸಿಕ್ಸರ್ ಕಿಂಗ್'?

  |

  ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ಮೊಹಮ್ಮದ್ ಅಜುರುದ್ದಿನ್ ಅಂತಹ ದಿಗ್ಗಜ ಕ್ರಿಕರೆಟ್ ಆಟಗಾರರ ಕುರಿತು ಸಿನಿಮಾ ಮಾಡಿದ್ದ ಬಾಲಿವುಡ್ ಮಂದಿ ಈಗ ಯುವರಾಜ್ ಸಿಂಗ್ ಬಯೋಪಿಕ್ ಮಾಡಲು ತಯಾರಿ ನಡೆಸುತ್ತಿದ್ದಾರೆ.

  ಕ್ರಿಕೆಟ್ ಆಟದಲ್ಲಿ ಯುವರಾಜ್ ಸಿಂಗ್ ಸೋತು ಗೆದ್ದಿರುವ ಸ್ಟಾರ್ ಹೀರೋ. 2007ರಲ್ಲಿ ಟಿ-ಟ್ವೆಂಟಿ ವಿಶ್ವಕಪ್ ಹಾಗೂ 2011ರಲ್ಲಿ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಟಗಾರ ಯುವರಾಜ್ ಸಿಂಗ್. ಮೈದಾನದಲ್ಲಿ ಮಾತ್ರವಲ್ಲ ಖಾಸಗಿ ಜೀವನದಲ್ಲೂ ಸೋತು ಗೆದ್ದಿದ್ದಾರೆ ಯುವರಾಜ್ ಸಿಂಗ್.

  ವಾವ್.. ರಣ್ವೀರ್ ಸಿಂಗ್ ಆಗಿಬಿಟ್ರು ಕಪಿಲ್ ದೇವ್ವಾವ್.. ರಣ್ವೀರ್ ಸಿಂಗ್ ಆಗಿಬಿಟ್ರು ಕಪಿಲ್ ದೇವ್

  ಇಂತಹ ಆಟಗಾರನ ಬಯೋಪಿಕ್ ಮಾಡಲು ಬಾಲಿವುಡ್ ಮಂದಿ ಆಸಕ್ತಿ ತೋರಿದ್ದಾರೆ. ಅಂದ್ಹಾಗೆ, ತೆರೆಮೇಲೆ ಸಿಕ್ಸರ್ ಕಿಂಗ್ ಯಾರಾಗ್ತಾರೆ? ಮುಂದೆ ಓದಿ....

  ಬಂಟಿ ಸಜ್ದೇಹ್ ಜೊತೆ ಯುವರಾಜ್

  ಬಂಟಿ ಸಜ್ದೇಹ್ ಜೊತೆ ಯುವರಾಜ್

  ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಮತ್ತು ಕಾರ್ನರ್ ಸ್ಟೋನ್ ಸ್ಫೋರ್ಟ್ಸ್ ಎಂಟರ್ ಟೈನ್ ಮೆಂಟ್ ಸಂಸ್ಥೆಯ ಮುಖ್ಯಸ್ಥ ಹಾಗೂ ಸೆಲೆಬ್ರಿಟಿ ಮ್ಯಾನೇಜರ್ ಬಂಟಿ ಸಜ್ದೇಹ್ ಜೊತೆ ಬಯೋಪಿಕ್ ನಿರ್ಮಿಸಲು ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಈಗ ಬಿಟೌನ್ ನಲ್ಲಿ ಸದ್ದು ಮಾಡ್ತಿದೆ.

  ಪ್ರೊಡಕ್ಷನ್ ಸಂಸ್ಥೆ ಜೊತೆ ಚರ್ಚೆ

  ಪ್ರೊಡಕ್ಷನ್ ಸಂಸ್ಥೆ ಜೊತೆ ಚರ್ಚೆ

  ಬಂಟಿ ಮತ್ತು ಯುವರಾಜ್ ಇಬ್ಬರು ಬಯೋಪಿಕ್ ಬಗ್ಗೆ ಚರ್ಚೆ ಮಾಡಿದ್ದು, ಅದಕ್ಕಾಗಿ ಬಾಲಿವುಡ್ ನ ಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆಯೊಂದನ್ನು ಭೇಟಿ ಮಾಡುವ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಯುವರಾಜ್ ಸಿಂಗ್ ಪಾತ್ರಕ್ಕೆ ಸ್ಟಾರ್ ನಟ ಹಾಗೂ ಒಳ್ಳೆಯ ಸಿನಿಮಾ ನಿರ್ಮಾಣ ಸಂಸ್ಥೆಯ ಹುಡುಕಾಟದಲ್ಲಿದ್ದಾರೆ ಎಂಬ ಮಾಹಿತಿ ಇದೆ.

  ಬಿ-ಟೌನ್ ಪ್ರವೇಶ ಮಾಡಲಿದ್ದಾರಂತೆ ಕೂಲ್ ಕ್ಯಾಪ್ಟನ್ ಧೋನಿಬಿ-ಟೌನ್ ಪ್ರವೇಶ ಮಾಡಲಿದ್ದಾರಂತೆ ಕೂಲ್ ಕ್ಯಾಪ್ಟನ್ ಧೋನಿ

  ಯುವರಾಜ್ ಲೈಫ್ ಸ್ಟೋರಿ ಪ್ರಮುಖ ಅಂಶಗಳು

  ಯುವರಾಜ್ ಲೈಫ್ ಸ್ಟೋರಿ ಪ್ರಮುಖ ಅಂಶಗಳು

  2007ರಲ್ಲಿ ಭಾರತ ತಂಡ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ಗೆಲ್ಲುವಲ್ಲಿ ಯುವರಾಜ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಒಂದೇ ಓವರ್ ನಲ್ಲಿ ಸತತವಾಗಿ ಆರು ಸಿಕ್ಸರ್ ಬಾರಿಸಿ ದಾಖಲೆ ಮಾಡಿದ್ದರು. ಇನ್ನು 2011ರಲ್ಲಿ ಏಕದಿನ ವಿಶ್ವಕಪ್ ಗಲುವಿನಲ್ಲೂ ಯುವರಾಜ್ ಸಿಂಗ್ ಸ್ಟಾರ್ ಆಟಗಾರನಾಗಿದ್ದರು. ಈ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಎನಿಸಿಕೊಂಡಿದ್ದರು.

  300 ಕೋಟಿ ಬಜೆಟ್ ಸಿನಿಮಾದಲ್ಲಿ ಸುದೀಪ್ : ಕ್ರಿಕೆಟರ್ ಆಗ್ತಾರೆ ಕಿಚ್ಚ300 ಕೋಟಿ ಬಜೆಟ್ ಸಿನಿಮಾದಲ್ಲಿ ಸುದೀಪ್ : ಕ್ರಿಕೆಟರ್ ಆಗ್ತಾರೆ ಕಿಚ್ಚ

  ಕ್ಯಾನ್ಸರ್ ಗೆದ್ದ ಯುವರಾಜ

  ಕ್ಯಾನ್ಸರ್ ಗೆದ್ದ ಯುವರಾಜ

  ಈ ಮಧ್ಯೆ ಕ್ಯಾನ್ಸರ್ ಗೆ ಸಿಲುಕಿದ್ದ ಯುವರಾಜ್ ಸಿಂಗ್ ತಮ್ಮ ಜೀವನ ಮುಗಿಯಿತು ಎಂದುಕೊಂಡಿದ್ದರು. ಆದರೆ, ಕ್ಯಾನ್ಸರ್ ವಿರುದ್ಧ ಹೋರಾಡಿ ಸೂಕ್ತ ಚಿಕಿತ್ಸೆ ಪಡೆದು ಮತ್ತೆ ಎದ್ದು ಬಂದಿದ್ದರು. ಗಂಗೂಲಿ, ದ್ರಾವಿಡ್, ಧೋನಿ ನಾಯಕತ್ವದಲ್ಲಿ ಆಟ ಆಡಿರುವ ಅನುಭವ ಯುವರಾಜ್ ಸಿಂಗ್ ಅವರಿಗಿದೆ. ಯುವರಾಜ್ ಕಥೆ ಮಾಡಿದ್ರೆ ಬಹಳ ವಿಷಯಗಳು ಪ್ರೇಕ್ಷಕರಿಗೆ ಆಸಕ್ತಿ ಮೂಡಿಸಬಹುದು.

  83 ಸಿನಿಮಾ ರಿಲೀಸ್!

  83 ಸಿನಿಮಾ ರಿಲೀಸ್!

  ರಣ್ವೀರ್ ಸಿಂಗ್, ಜೀವಾ ಸೇರಿದಂತೆ ಹಲವು ಕಲಾವಿದರು ನಟಿಸಿರುವ '83' ಸಿನಿಮಾ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರ್ತಿದೆ. 1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ ಚೊಚ್ಚಲ ಬಾರಿಗೆ ವಿಶ್ವಕಪ್ ಗೆದ್ದಿತ್ತು. ಆ ಕಥೆ ಹಾಗೂ ಕಪಿಲ್ ದೇವ್ ಸುತ್ತ ಈ ಸಿನಿಮಾ ಬಂದಿದೆ.

  English summary
  Bollywood ready to make biopic on Indian star cricket player Yuvraj singh life.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X