»   » ಭಾರತದಲ್ಲಿ ರು.70 ಕೋಟಿ ಬಾಚಿದ ಅವತಾರ್

ಭಾರತದಲ್ಲಿ ರು.70 ಕೋಟಿ ಬಾಚಿದ ಅವತಾರ್

Subscribe to Filmibeat Kannada

ಜೇಮ್ಸ್ ಕ್ಯಾಮೆರಾನ್ ನಿರ್ದೇಶನದ 'ಅವತಾರ್' ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ಹೊಸ ದಾಖಲೆ ನಿರ್ಮಿಸುತ್ತಿದೆ. 'ಟೈಟಾನಿಕ್' ಹಾಗೂ ಇತ್ತೀಚೆಗೆ ತೆರೆಕಂಡ '2012' ಚಿತ್ರದ ಗಳಿಕೆಯನ್ನು ಹಿಂದಿಕ್ಕಿ 'ಅವತಾರ್' ಮುನ್ನುಗ್ಗುತ್ತಿದೆ. ಹತ್ತು ವರ್ಷಗಳ ಹಿಂದೆ 'ಟೈಟಾನಿಕ್' ಚಿತ್ರ 55 ಕೋಟಿ ರು.ಗಳನ್ನು ಗಳಿಸಿತ್ತು. ಕೇವಲ ಹತ್ತು ದಿನಗಳಲ್ಲಿ ರು.70 ಕೋಟಿ ಬಾಚಿ ಈ ದಾಖಲೆಯನ್ನು 'ಅವತಾರ್' ಚಿತ್ರ ಅಳಿಸಿಹಾಕಿದೆ.

ಅಮೀರ್ ಖಾನ್ ಅಭಿನಯದ '3 ಇಡಿಯಟ್ಸ್' ಚಿತ್ರ 'ಅವತಾರ್' ಚಿತ್ರದೊಂದಿಗೆ ಬಾಕ್ಸಾಅಫೀಸ್ ಗಳಿಕೆಯಲ್ಲಿ ಸ್ಪರ್ಧೆಗೆ ಬಿದ್ದಿದೆ. ವಿಶ್ವದಾದ್ಯಂತ 'ಅವತಾರ್' ಚಿತ್ರದ ಗಳಿಕೆ 1 ಬಿಲಿಯನ್ ಡಾಲರ್ ಗಡಿಯನ್ನು ದಾಟಿದೆ. ತೆಲುಗು ಭಾಷೆಗೆ ಡಬ್ ಆಗಿರು 'ಅವತಾರ್' ರು.15 ಕೋಟಿಗಳನ್ನು ಬಾಕ್ಸಾಫೀಸಲ್ಲಿ ಗುಡ್ಡೆ ಹಾಕಿದೆ.

'ಅವತಾರ್' ಚಿತ್ರದ ಗಳಿಕೆ ಬಾಲಿವುಡ್ ಚಿತ್ರೋದ್ಯಮದಲ್ಲಿ ಕಳವಳ ಉಂಟು ಮಾಡಿದೆ. ಬಾಲಿವುಡ್ ಚಿತ್ರಗಳ ಗಳಿಕೆಗೆ ಹೊಡೆತ ಬಿದ್ದಿರುವುದೇ ಕಳವಳಕ್ಕೆ ಕಾರಣ ಎನ್ನುತ್ತವೆ ಮೂಲಗಳು. ಬಾಲಿವುಡ್ ಚಿತ್ರಗಳ ಜೊತೆಗೆ ಹಾಲಿವುಡ್ ಚಿತ್ರಗಳು ಬಿಡುಗಡೆಯಾಗುತ್ತಿರುವುದು ಎಷ್ಟು ಸಮಂಜಸ ಎಂಬ ಯಕ್ಷ ಪ್ರಶ್ನೆ ಉದ್ಭವಿಸಿದೆ.

ವಿಡಿಯೋದಲ್ಲಿ ಕ್ಯಾಮೆರಾನ್ 'ಅವತಾರ್'
ಭಾರಿ ಬಜೆಟ್ ನ ಹಾಲಿವುಡ್ ಚಿತ್ರ ಅವತಾರ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada