Just In
Don't Miss!
- News
ಅಕ್ರಮ ಆಸ್ತಿ ಪ್ರಕರಣ: ಶಶಿಕಲಾ ಜೈಲು ಶಿಕ್ಷೆ ಇಂದಿಗೆ ಅಂತ್ಯ, ಆಸ್ಪತ್ರೆಯಿಂದಲೇ ಬಿಡುಗಡೆ ಸಾಧ್ಯತೆ
- Lifestyle
ಬುಧವಾರದ ರಾಶಿಫಲ: ಈ ದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜೇಮ್ಸ್ ಕ್ಯಾಮೆರಾನ್ 'ಟೈಟಾನಿಕ್ 3D' ಚಿತ್ರವಿಮರ್ಶೆ
ಈಗ ಅದೇ ಟೈಟಾನಿಕ್ ಚಿತ್ರ '3D ತಂತ್ರಜ್ಞಾನ' ಅಳವಡಿಸಿಕೊಂಡು ಮತ್ತೆ ಪ್ರೇಕ್ಷಕರೆದುರು ಪ್ರತ್ಯಕ್ಷವಾಗಿದೆ. ಅಬ್ಬಾ! ಅದೇ ಚಿತ್ರವನ್ನು 3D ಯಲ್ಲಿ ನೋಡುವ ಮಜವೇ ಬೇರೆ, ಅದೊಂದು ಅವಿಸ್ಮರಣೀಯ ಅನುಭವ ಎನ್ನಬಹುದು. ಹಳೆಯ, ಎವರ್ ಗ್ರೀನ್ ಚಿತ್ರವೊಂದು ಹೊಸ ಹೊದಿಕೆಯನ್ನು ಹೊದ್ದು ಬಂದಾಗಲೂ ಅದಕ್ಕೆ ಸಿಗಬಹುದಾದ ಸ್ವಾಗತಕ್ಕೆ 'ಟೈಟಾನಿಕ್' ಸಾಕ್ಷಿಯಾಗಿದೆ.
ಚಿತ್ರ ನೋಡಿದ ಪ್ರೇಕ್ಷಕರು ಎದ್ದು ಬರುವಾಗ ಅವರ ಮುಖದಲ್ಲಿ ಮೂಡುವ ಧನ್ಯತಾಭಾವವನ್ನು ನೋಡಿದರೆ ಸಾಕು, ಚಿತ್ರದ ಬಗ್ಗೆ ಹೆಚ್ಚು ಹೇಳುವ ಅಗತ್ಯವೇ ಬಾರದು. 3D ತಂತ್ರಜ್ಞಾನ ಹೊತ್ತ ಚಿತ್ರವನ್ನು ಮೊದಲ ಬಾರಿಗೆ ನೋಡುವ ಪ್ರೇಕ್ಷಕರಂತೂ ಮಂತ್ರಮುಗ್ಧವಾಗಿ ಅಲುಗಾಡದೇ ಪ್ರತಿಮೆಯಂತೆ ಕುಳಿತುಬಿಡುತ್ತಾರೆ.
ಚಿತ್ರದ ನಾಯಕ ಲಿಯೋನಾರ್ಡೋ ಡಿ ಕಾಪ್ರಿಯೋ ಹಾಗೂ ಕೇಟ್ ವಿನ್ಸ್ ಲೆಟ್ ಜೋಡಿ 'ಮಿಸ್ ಮ್ಯಾಚ್' ಎಂಬುದು ಎಂಥವರಿಗೂ ತಕ್ಷಣಕ್ಕೇ ಗೊತ್ತಾಗಿಬಿಡುತ್ತದೆ. ಆದರೆ ಚಿತ್ರದಲ್ಲಿ ಅವರಿಬ್ಬರ 'ಕೆಮೆಸ್ಟ್ರಿ' ಅದೆಷ್ಟು ವರ್ಕ್ ಔಟ್ ಆಗಿದೆಯೆಂದರೆ ಅವರಿಬ್ಬರ ಮಿಸ್ ಮ್ಯಾಚನ್ನು ಜನ ಮರೆತೇಬಿಡುತ್ತಾರೆ. ಒಂದು ದುರಂತ ಪ್ರೇಮಕಥೆಯಲ್ಲಿ ಅವರಿಬ್ಬರ ಅವಿಸ್ಮರಣೀಯ ನಟನೆ ಹಾಗೂ ಮುದ್ದುಮುಖವನ್ನು ಜನ ಜೀವವಿರುವ ತನಕ ಮರೆಯಲಾರರು. ಮುಂದಿನ ಪುಟ ನೋಡಿ...