»   » 'ದ ಹರ್ಟ್ ಲಾಕರ್'ಗೆ ಆಸ್ಕರ್ ಅತ್ಯುತ್ತಮ ಚಿತ್ರ ಪ್ರಶಸ್ತಿ

'ದ ಹರ್ಟ್ ಲಾಕರ್'ಗೆ ಆಸ್ಕರ್ ಅತ್ಯುತ್ತಮ ಚಿತ್ರ ಪ್ರಶಸ್ತಿ

Posted By:
Subscribe to Filmibeat Kannada
Actress Sandra Bullock
ವಿಶ್ವದಾದ್ಯಂತ ಚಿತ್ರ ಪ್ರೇಮಿಗಳು ಕುತೂಹಲದಿಂದ ನಿರೀಕ್ಷಿಸುತ್ತಿದ್ದ 82ನೇ ವಾರ್ಷಿಕಆಸ್ಕರ್ ಪ್ರಶಸ್ತಿಗಳನ್ನು ಸೋಮವಾರ ಪ್ರದಾನ ಮಾಡಲಾಯಿತು. ಅತ್ಯುತ್ತಮ ನಟನಾಗಿ ಜೆಫ್ ಬ್ರಿಡ್ಜಸ್ ಹಾಗೂ ಅತ್ಯುತ್ತಮ ನಟಿಯಾಗಿ ಸಾಂಡ್ರ ಬುಲ್ಲಕ್ ಆಯ್ಕೆಯಾಗಿದ್ದಾರೆ. ಕ್ರೇಜಿ ಹಾರ್ಟ್ ಚಿತ್ರದಲ್ಲಿನ ಅಭಿನಯಕ್ಕಾಗಿ ಜೆಫ್ ಹಾಗೂ ದ ಬ್ಲೈಂಡ್ ಸೈಟ್ ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಸಾಂಡ್ರ ಬುಲ್ಲಕ್ ಅವರಿಗೆ ಪ್ರಶಸ್ತಿ ನೀಡಲಾಗಿದೆ.

ಅತ್ಯುತ್ತಮ ಚಿತ್ರ: ದ ಹರ್ಟ್ ಲಾಕರ್
ಅತ್ಯುತ್ತಮ ನಿರ್ದೇಶಕಿ: ಕ್ಯಾಥರಿನ್ ಬಿಗೆಲೊ(ದ ಹರ್ಟ್ ಲಾಕರ್)
ಅತ್ಯುತ್ತಮ ನಟಿ:ಸಾಂಡ್ರ ಬುಲ್ಲಕ್
ಅತ್ಯುತ್ತಮ ಸಹ ನಟ:ಕ್ರಿಸ್ಟೋಫ್ ವಾಟ್ಜ್
ಅತ್ಯುತ್ತಮ ಸಹನಟಿ: ಮೋನಿಕ್
ಅತ್ಯುತ್ತಮ ಮೂಲ ಚಿತ್ರಕತೆ:ಮಾರ್ಕ್ ಬೋಲ್ (ದಿ ಹರ್ಟ್ ಲಾಕರ್)
ಅತ್ಯುತ್ತಮ ಅನಿಮೇಷನ್ ಚಿತ್ರ: ಅಪ್
ಅತ್ಯುತ್ತಮ ಛಾಯಾಗ್ರಹಣ: ಅವತಾರ್
ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ: ಮ್ಯೂಜಿಕ್ ಬೈ ಪ್ರೂಡೆನ್ಸ್ (ರೋಜರ್ ರಾಸ್ ವಿಲಿಯಮ್ಸ್, ಎಲಿನರ್ ಬರ್ಕೆಟ್)
ಅತ್ಯುತ್ತಮ ಸಂಗೀತ(ಒರಿಜಿನಲ್ ಸಾಂಗ್): ದಿ ವೀರಿ ಕೈಂಡ್; ಚಿತ್ರ ಕ್ರೇಜಿ ಹಾರ್ಟ್(ರೇಯನ್ ಬಿಂಗ್ ಹೋಮ್)
ಅತ್ಯುತ್ತಮ ಮೇಕಪ್: ಸ್ಟಾರ್ ಟ್ರೇಕ್
ಅತ್ಯುತ್ತಮ ಕಿರು ಚಿತ್ರ(ಅನಿಮೇಷನ್): ಲೋಗೊರಮ
ಅತ್ಯುತ್ತಮ ಕಿರು ಚಿತ್ರ (ಲೈವ್ ಆಕ್ಷನ್): ದಿ ನ್ಯೂ ಟೆನೆಂಟ್ಸ್
ಅತ್ಯುತ್ತಮ ಕಲಾ ನಿರ್ದೇಶನ: ಅವತಾರ್; ರಿಕ್ ಕಾರ್ಟರ್ (ಕಲಾ ನಿರ್ದೇಶನ), ಕಿಮ್ ಸಿಂಕ್ಲೈರ್ (ಸೆಟ್ ವಿನ್ಯಾಸ)
ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನ್: ಸಾಂಡಿ ಪೊವೆಲ್ (ದಿ ಯಂಗ್ ವಿಕ್ಟೋರಿಯಾ)
ಅತ್ಯುತ್ತಮ ರಚನೆ(ಅಡಾಪ್ಟೆಡ್ ಸ್ಕ್ರೀನ್ ಪ್ಲೆ): ಪ್ರೆಸಿಯಸ್
ಅತ್ಯುತ್ತಮ ವಿದೇಶಿ ಚಿತ್ರ: ದ ಸೀಕ್ರೆಟ್ ಇನ್ ದೇರ್ ಐಯ್ಸ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada