ಮಂಗಳೂರು ಯುವಕ ಹಾಲಿವುಡ್ ನಲ್ಲಿ ಮಿಂಚಿಂಗ್!

By Mahesh

ಮಂಗಳೂರು ಮೂಲದ ಬಂಟ ಸಮುದಾಯದ ಅನೇಕರು ಬಾಲಿವುಡ್ ನಲ್ಲಿ ಹೆಸರು ಮಾಡಿದ್ದಾರೆ. ಐಶ್ವರ್ಯಾ ರೈ, ಸುನೀಲ್ ಶೆಟ್ಟಿ, ಶಿಲ್ಪಾ ಶೆಟ್ಟಿ ಸೇರಿದಂತೆ ಹಲವರನ್ನು ಹೆಸರಿಸಬಹುದು. ಆದರೆ ಹಾಲಿವುಡ್ ಚಿತ್ರಗಳಲ್ಲಿ ಮಿಂಚಿದವರು ವಿರಳ. ಆದರೆ, ಇದೀಗ ಮಂಗಳೂರು ಮೂಲದ ಯುವಕ ರಾಹುಲ್ ರೈ ಹಾಲಿವುಡ್ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನ್ಯೂಯಾರ್ಕಿನ ಲಾಂಗ್ ಐಲ್ಯಾಂಡಿನಲ್ಲಿ ವಾಸಿಸುತ್ತಿರುವ ಮಂಗಳೂರು ಮೂಲದ ಡಾ ದಿನಕರ್ ಮತ್ತು ಶಕಿಲಾ ರೈ ರಾಹುಲ್ ರೈ ಅಜ್ಜ ದಿವಂಗತ ಕೆ ನಾರಾಯಣ ರೈ ಮಂಗಳೂರಿನಲ್ಲಿ ಖ್ಯಾತ ಕ್ರಿಮಿನಲ್ ವಕೀಲರಾಗಿದ್ದರು.
ರೈ ದಂಪತಿಯ ಪುತ್ರ ರಾಹುಲ್ ಹಾಲಿವುಡ್ ಚಿತ್ರ 'ವೆನ್ ಹ್ಯಾರಿ ಟ್ರೈಸ್ ಟು ಮ್ಯಾರಿ"ಯಲ್ಲಿ ನಾಯಕನ ಪಾತ್ರ ನಿರ್ವಹಿಸುತ್ತಿದ್ದಾನೆ. ಕರಾಟೆ, ನೃತ್ಯ ಕಲಿತಿರುವ ರಾಹುಲ್ ಗೆ ಬಾಲಿವುಡ್ ನಲ್ಲಿ ಗೋವಿಂದ, ಹೃತಿಕ್ ರೋಷನ್ ಇಷ್ಟವಂತೆ. ಆತನ ಚೊಚ್ಚಲ ಚಿತ್ರ ಕೆಲವೇ ದಿನಗಳಲ್ಲಿ ತೆರೆ ಕಾಣಲಿದೆ.

ಬಿಡುಗಡೆಗೆ ಮುನ್ನವೇ ಹಾಲಿವುಡ್ ಸೇರಿದಂತೆ ಬಾಲಿವುಡ್ ನಲ್ಲೂ ಈ ಚಿತ್ರದ ಬಗ್ಗೆ ಒಳ್ಳೆ ಮಾತುಗಳು ಕೇಳಿಬರುತ್ತಿದೆ. ಮುಂಬೈ ಫಿಲ್ಮ್ ಫೆಸ್ಟಿವಲ್ ಮತ್ತು ಲಂಡನ್ ಫಿಲ್ಮ್ ಫೆಸ್ಟಿವಲ್ ಸೇರಿದಂತೆ ಹಲವೆಡೆ ಪ್ರದರ್ಶನಗೊಂಡಿದೆ.

ಪ್ರೇಕ್ಷಕರ ಉತ್ತಮ ಚಿತ್ರ ಪ್ರಶಸ್ತಿ , ಬೆಸ್ಟ್ ಕ್ರಾಸ್‌ಓವರ್ ಪ್ರಶಸ್ತಿ, ಉತ್ತಮಪ್ರತಿಭಾವಂತ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳನ್ನು ಗಳಿಸಿದೆ. "ಚಿತ್ರ ನಿರ್ಮಾಣ ಹಂತದಲ್ಲಿರುವಾಗ ರಾಹುಲ್‌ಗೆ ಕೇವಲ 18 ವರ್ಷವಾಗಿತ್ತು. ಆತನೊಬ್ಬ ಸಹಜ ಮತ್ತು ಪ್ರತಿಭಾವಂತ ನಟ" ಎಂದು ಚಿತ್ರ ನಿರ್ದೇಶಕ ನಯನ್ ಪಡ್ರೈ ಅಭಿಪ್ರಾಯಪಟ್ಟಿದ್ದಾರೆ.

ಈ ಚಿತ್ರ ಏಪ್ರಿಲ್ 22ರಂದು ಅಮೆರಿಕದ ಆಯ್ದ ನಗರಗಳ ಥಿಯೇಟರುಗಳಲ್ಲಿ ಬಿಡುಗಡೆಗೊಳ್ಳಲಿದೆ. ಚಿತ್ರದಲ್ಲಿ ಮೂರು ಹಿಂದಿ ಹಾಡುಗಳ ಸಹಿತ 20 ಹಾಡುಗಳಿವೆಯಂತೆ. ಚಿತ್ರದ ಬಗ್ಗೆ ಹೆಚ್ಚಿನ ವಿವರಗಳು ಬೇಕಿದ್ದಲ್ಲಿ ವೆನ್ ಹ್ಯಾರಿ ಟ್ರೈಸ್ ಟು ಮ್ಯಾರಿ ವೆಬ್ ತಾಣಕ್ಕೆ ಭೇಟಿ ಕೊಡಬಹುದು.

More from Filmibeat

English summary
Hollywood Actor Rahul Rai is from Mangalore Bunt community. When Harry Tries to Marry is his first appearance as an actor. He was discovered by Nayan Padrai. Rahul grew up like any regular Indian American kid now set to become Hollywood star.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X