»   » ನಿಮಗಾಗಿ ಪೂರ್ಣ ನಗ್ನ ಕ್ಯಾಥರೀನ್40

ನಿಮಗಾಗಿ ಪೂರ್ಣ ನಗ್ನ ಕ್ಯಾಥರೀನ್40

Posted By:
Subscribe to Filmibeat Kannada

ವಯಸ್ಸು ನಲವತ್ತಾದರೂ ಮುಪ್ಪುಗಾಣದ ದೇಹದ ಒಡತಿಯಾದ ಕ್ಯಾಥರೀನ್ ಜೆಟಾ ಜೋನ್ಸ್ , ತನ್ನ ಅಭಿಮಾನಿಗಳಿಗೆ ಮಡಿವಂತಿಕೆಯ ಸುಂದರಿಯಾಗೇ ಪರಿಚಿತ. ಆದರೆ, ಮೇ ತಿಂಗಳ ಅಲ್ಲುರ್ ಮ್ಯಾಗಜೀನ್ ಮುಖಪುಟಕ್ಕೆ ಸಂಪೂರ್ಣ ಬೆತ್ತಲಾಗಿ ಫೋಟೋ ಶೂಟ್ ನಡೆಸಿದ್ದಾರೆ. ವೇಲ್ಸ್ ಮೂಲದ ಈ ಅಮೆರಿಕ ಸುಂದರಿ, ಮುದ್ದಾದ ಎರಡು ಮಕ್ಕಳ ತಾಯಿ.

ಬೇಸಿಕ್ ಇಸ್ಟಿಂಕ್ಟ್ ಚಿತ್ರ ಖ್ಯಾತಿಯ 65 ವರ್ಷದ ಮೈಕಲ್ ಡಗ್ಲಾಸ್ ಈಕೆಯ ಪತಿ. ಚಿತ್ರ ಜಗತ್ತಿನ ಪ್ರಮುಖ ಹತ್ತು ಸುಂದರಿಯರಲ್ಲಿ ಕ್ಯಾಥರೀನ್ ಖಾಯಂ. ಫ್ಯಾಂಟಂ, ಮಾಸ್ಕ್ ಆಫ್ ಜೋರೋ, ಎಂಟ್ರಾಪ್ ಮೆಂಟ್ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ ಕ್ಯಾಥರೀನ್, ಚಿಕಾಗೋ ಚಿತ್ರ ಅಭಿನಯಕ್ಕೆ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದರು. ಬಾಫ್ತಾ, ಅಕಾಡೆಮಿ, ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ ಪಡೆದು ಪ್ರಬುದ್ಧ ನಟಿ ಎನಿಸಿದ್ದಾರೆ.

ಈ ವಯಸ್ಸಿನಲ್ಲೂ ಮಡಿಕೆಯಿಲ್ಲದ ನಡುವಿರುವ ನನ್ನ ದೇಹ ಸೌಂದರ್ಯದ ಬಗ್ಗೆ ನನಗೆ ಹೆಮ್ಮೆಯಿದೆ. ನಗ್ನತೆ ಬಗ್ಗೆ ಏನೂ ಹೇಳಲಾರೆ. ಹಿಂದೆಲ್ಲಾ ನಾಟಕ, ನೃತ್ಯ ಆಡುವಾಗ, ತ್ವರಿತವಾಗಿ ಬಟ್ಟೆ ಬದಲಾಯಿಸುವ ಸನ್ನಿವೇಶ ಬರುತ್ತಿತ್ತು ಆಗ ಯಾರು ನೋಡುತ್ತಾರೆ ಯಾರಿಲ್ಲ ಎಂಬ ಅಳಕು ಇರುತ್ತಿರಲಿಲ್ಲ. ರಂಗದ ಮೇಲೆ ಕುಣಿಯುವ ಬಗ್ಗೆ ಗಮನವಿರುತ್ತಿತ್ತು ಎನ್ನುತ್ತಾರೆ ಕ್ಯಾಥರೀನ್.

ಮಾಸ್ಕ್ ಆಫ್ ಜೋರೊ ಚಿತ್ರದಲ್ಲಿ ಬಟ್ಟೆ ಕಳಚಿ ಬೀಳುವ ದೃಶ್ಯವಿದ್ದರೂ ಅಲ್ಲಿ ಅಶ್ಲೀಲತೆಯಿರಲಿಲ್ಲ. ಎಂಟ್ರಾಪ್ ಮೆಂಟ್ ನಲ್ಲಿ ಮಾಜಿ ಜೇಮ್ಸ್ ಬಾಂಡ್ ಹೀರೋ ಸೀನ್ ಕ್ಯಾನೆರಿ ಜೊತೆ ತೀರಾ ಸನಿಹದ ದೃಶ್ಯಗಳಲ್ಲಿ ಕ್ಯಾಥರೀನ್ ಮಿಂಚಿದ್ದರು. ಆದರೆ, ಈಗ ಏಕಾಏಕಿ ಈ ಫೋಟೋ ಶೂಟ್ ಮಾಡಿರುವುದು ಏಕೋ ಏನೋ.. ವಯಸ್ಸಾದಂತೆ ಅರಳು ಮರಳು.. ಜಗವೆಲ್ಲಾ ಬೆತ್ತಲೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada