»   » ಎರಡುವರೆ ಸಾವಿರ ಕೋಟಿ ಬಜೆಟ್ ನ 'ಅವತಾರ್'

ಎರಡುವರೆ ಸಾವಿರ ಕೋಟಿ ಬಜೆಟ್ ನ 'ಅವತಾರ್'

Posted By:
Subscribe to Filmibeat Kannada

ಎರಡುವರೆ ಗಂಟೆಗಳ ಚಿತ್ರಕ್ಕಾಗಿ ಎರಡುವರೆ ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದರೆ ನಂಬುತ್ತೀರಾ? ಸಿನಿಮಾ ಚಿತ್ರೀಕರಿಸಲು ವಿಶೇಷ ಕ್ಯಾಮೆರಾ ತಯಾರಿಸಿಕೊಳ್ಳುತ್ತ್ತೇನೆ ಎಂದರೆ ನಿರ್ಮಾಪಕ ಒಪ್ಪುತ್ತಾನಾ? ಸಿನಿಮಾ ಪ್ರದರ್ಶನಕ್ಕಾಗಿ ಪ್ರಾಜೆಕ್ಟರ್ ಗಳನ್ನು, ಸ್ಕ್ರೀನ್ ಗಳನ್ನು ಬದಲಾಯಿಸಿಕೊಳ್ಳುತ್ತಿದ್ದಾರೆಂದರೆ ಆಶ್ಚರ್ಯ ಎನಿಸುವುದಿಲ್ಲವೆ? ಇದೆಲ್ಲಾ 'ಅವತಾರ್' ಚಿತ್ರಕ್ಕಾಗಿ ನಡೆಯುತ್ತಿರುವ ತೆರೆಮರೆಯ ಕಸರತ್ತುಗಳು.

ಹನ್ನೆರಡು ವರ್ಷಗಳ ಹಿಂದೆ 'ಟೈಟಾನಿಕ್' ತೋರಿಸಿದ ಜೇಮ್ಸ್ ಕ್ಯಾಮೆರಾನ್ ನಿರ್ದೇಶನದಲ್ಲಿ ಬರುತ್ತಿರುವ ಚಿತ್ರ 'ಅವತಾರ್'. ಈ ಹಾಲಿವುಡ್ ಚಿತ್ರಕ್ಕೆ ಭಾರತೀಯ ಹೆಸರಿಟ್ಟಿದ್ದೇಕೆ ಎಂಬ ಸಂದೇಹ ಬಾರದಿರದು. ವಿಶ್ವಪ್ರಸಿದ್ಧ ಅಂಶಗಳನ್ನು ಈ ಸೈನ್ಸ್ ಫಿಕ್ಷನ್ ಚಿತ್ರದಲ್ಲಿ ತೋರಿಸಲಾಗಿದೆ ಎನ್ನ್ನುತ್ತಾರೆ ಜೇಮ್ಸ್ . ಹಾಗೆಯೇ ಚಿತ್ರಕತೆಯ ಮೇಲೆ ನಮ್ಮ ಪುರಾಣ, ಇತಿಹಾಸ ಪ್ರಭಾವ ಸಹ ಇದೆಯಂತೆ.

ಟ್ವೆಂಟಿಯತ್ ಸೆಂಚುರಿ ಫಾಕ್ಸ್ ಈ ಚಿತ್ರಕ್ಕಾಗಿ ಸರಿಸುಮಾರು ಎರಡುವರೆ ಸಾವಿರ ಕೋಟಿ ರು.ಗಳನ್ನು ಖರ್ಚು ಮಾಡಿದೆ. 'ಅವತಾರ್' ಚಿತ್ರದಲ್ಲಿ ತಾಂತ್ರಿಕತೆಯನ್ನು ಹೆಚ್ಚಾಗಿ ಬಳಸಿಕೊಳ್ಳಲಾಗಿದೆ. 40 ಸಾವಿರ ಪ್ರೊಸೆಸರ್ ಗಳ ಸಹಾಯದಿಂದ ವಿಜುವಲ್ ಎಫೆಕ್ಟ್ಸ್ ಗಳನ್ನು ನೀಡಲಾಗಿದೆ. ಸುಮಾರು ಮೂರು ಸಾವಿರ ಷಾಟ್ಸ್ ಗಳಲ್ಲಿ ಈ ಎಫೆಕ್ಟ್ಸ್ ಗಳಿರುತ್ತವೆ.

ಚಿತ್ರವನ್ನು ತ್ರಿಡಿ, ಟೂಡಿ, ಐಮಾಕ್ಸ್ ವಿಧಾನಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ನಮ್ಮ ದೇಶದಲ್ಲಿ ಬೆಂಗಳೂರು, ಮುಂಬೈ, ದೆಹಲಿ ಮುಂತಾದ ನಗರಗಳಲ್ಲಿನ ಚಿತ್ರಮಂದಿರಗಳನ್ನು ತ್ರಿಡಿ ಸೌಲಭ್ಯದೊಂದಿಗೆ ನವೀಕರಿಸಲಾಗಿದೆ. ಭಾರತದಾದ್ಯಂತ ಒಟ್ಟು 700 ಪ್ರಿಂಟ್ ಗಳೊಂದಿಗೆ ಶುಕ್ರವಾರ ಅವತಾರ್ ತೆರೆಗೆ ಅಪ್ಪಳಿಸುತ್ತಿದೆ. ಚಿತ್ರದ ಬಗೆಗಿನ ನಿರೀಕ್ಷೆಗಳು ಮುಗಿಲು ಮುಟ್ಟಿವೆ.

ಬೆಂಗಳೂರಿನ ಪಿವಿಆರ್, ಇನ್ನೊಕ್ಸ್, ಇನ್ನೊಕ್ಸ್ ಸ್ವಾಗತ್, ಫೇಮ್ ಲಿಡೊ, ಫನ್ ಸಿನಿಮಾಸ್, ಫೇಮ್ ಸಿಂಫೋನಿ, ಮುಕುಂದ ಮತ್ತು ಊರ್ವಶಿ ಚಿತ್ರಮಂದಿರಗಳು ಅವತಾರ್ ಚಿತ್ರಕ್ಕಾಗಿ ತ್ರಿಡಿ ಸ್ಕ್ರೀನ್ ಗಳನ್ನು ಅಳವಡಿಸಿಕೊಂಡಿವೆ. ರು.200 ಪಾವತಿಸಿ ತ್ರಿಡಿ ಕನ್ನಡಕಗಳನ್ನು ಪಡೆದು ಚಿತ್ರವನ್ನು ವೀಕ್ಷಿಸಬೇಕಾಗುತ್ತದೆ. ತ್ರಿಡಿ ಕನ್ನಡಕಗಳನ್ನು ಹಿಂತಿರುಗಿಸಿ ಹಣ ವಾಪಸ್ ಪಡೆಯಬಹುದು ಎನ್ನುತ್ತಾರೆ ಇನ್ನೋಕ್ಸ್ ಚಿತ್ರಮಂದಿರದ ವ್ಯವಸ್ಥಾಪಕ ಮನೀಶ್ ನಿಪಾಣಿ.


ವಿಡಿಯೋದಲ್ಲಿ ಕ್ಯಾಮೆರಾನ್ 'ಅವತಾರ್'

ಭಾರಿ ಬಜೆಟ್ ನ ಹಾಲಿವುಡ್ ಚಿತ್ರ ಅವತಾರ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada