»   » ಮೊದಲ ಮುಸ್ಲಿಂ ಮಹಿಳೆಗೆ ಮಿಸ್ ಯುಎಸ್ ಎ ಪಟ್ಟ

ಮೊದಲ ಮುಸ್ಲಿಂ ಮಹಿಳೆಗೆ ಮಿಸ್ ಯುಎಸ್ ಎ ಪಟ್ಟ

Posted By:
Subscribe to Filmibeat Kannada

ಇದೇ ಮೊದಲ ಬಾರಿಗೆ ಅಮೆರಿಕನ್ ಮುಸ್ಲಿಂ ಮಹಿಳೆಗೆ ಮಿಸ್ ಯುಎಸ್ ಎ ಕಿರೀಟ ಒಲಿದಿದೆ. ಅಂತಿಮ ಸುತ್ತಿನಲ್ಲಿ ಒಟ್ಟು 50 ಮಂದಿ ಮಹಿಳೆಯ ನಡುವೆ ಹಣಾಹಣಿ ನಡೆದಿತ್ತು. ಅವರೆಲ್ಲರನ್ನೂ ಹಿಂದಿಕ್ಕಿ ರಿಮಾ ಫಕಿ(24) ಕೊರಳಿಗೆ ಗೆಲುವಿನ ಮಾಲೆ ಬಿದ್ದಿದೆ. ಲಾಸ್ ವೆಗಾಸ್ ನ ಪ್ಲಾನೆಟ್ ಹಾಲಿವುಡ್ ರೆಸಾರ್ಟ್ ನಲ್ಲಿ ಮಿಸ್ ಯುಎಸ್ ಎ ಸೌಂದರ್ಯ ಸ್ಪರ್ಧೆ ನಡೆಯಿತು.

ರಿಮಾ ಹಸುಗೂಸಾಗಿದ್ದಾಲೆ ಯುಎಸ್ ಗೆ ಆಗಮಿಸಿದ್ದರು. ಮೊದಲು ನ್ಯೂಯಾರ್ಕ್ ಬಳಿಕ 2003ರಲ್ಲಿ ಡಿಯರ್ ಬಾರ್ನ್, ಮಿಚಿಗನ್ ಸ್ಥಳಗಳಲ್ಲಿ ಬೆಳೆದರು. ಈಜುಡುಗೆ, ಸಂಜೆಯ ಗೌನ್ ಮತ್ತು ಸಂದರ್ಶನದ ಆಧಾರವಾಗಿ ಆಯ್ಕೆ ಪ್ರಕ್ರಿಯೆ ನಡೆಯಿತು. ರಿಮಾ ಸೌಂದರ್ಯ ಸ್ಪರ್ಧೆಗೆ ಇಳಿದ ಕಾರಣ ಯುಎಸ್ ಹಾಗೂ ಅರಬ್ ದೇಶಗಳ ಮುಸ್ಲಿಂರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ಧಿಸದಿರಲು ಮೌಲ್ವಿಗಳು ಈಕೆಯ ವಿರುದ್ಧ ಫತ್ವಾ ಹೊರಡಿಸಿದ್ದರು. ಮೌಲ್ವಿಗಳ ವಿರೋಧದ ನಡುವೆಯೂ ಡಿಯರ್ ಬಾರ್ನ್ ನಲ್ಲಿ ಈಕೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಹಾಗಾಗಿ ಈಕೆ ಯಾವುದೇ ಅಳುಕಿಲ್ಲದೆ ಈಜುಡುಗೆ ತೊಟ್ಟು ಬೆಕ್ಕಿನ ಹೆಜ್ಜೆ ಹಾಕಿದ್ದರು.ಡಿಯರ್ ಬಾರ್ನ್ ನಲ್ಲಿರುವ ಮುಸ್ಲಿಂರಿಂದ ಅಂತಹ ಪ್ರತಿಭಟನೆ ವ್ಯಕ್ತವಾಗಲಿಲ್ಲ.

ನಮ್ಮ ಕುಟುಂಬ ಸಂಪೂರ್ಣ ಬೆಂಬಲ ನನಗಿತ್ತು. ಹಾಗಾಗಿ ಸ್ಪರ್ಧೆಯಲ್ಲಿ ಗೆಲ್ಲುವಂತಾಯಿತು ಎನ್ನುತ್ತಾರೆ ರಿಮಾ. ಈ ರೀತಿಯ ಸ್ಪರ್ಧೆಗಳಲ್ಲಿ ಸ್ಪರ್ಧಿಸಲು ತೀವ್ರ ಆಸಕ್ತಿ, ಕೆಚ್ಚೆದೆ, ಉತ್ಸಾಹ ಹಾಗೂ ಆತ್ಮವಿಶ್ವಾಸ ಬೇಕಾಗುತ್ತದೆ ಎಂಬುದು ಕಾರ್ಯಕ್ರಮದ ನಿರ್ದೇಶಕ ಹಮದ್ ಮಾತು. ರಿಮಾಗೆ ಒಂದು ವರ್ಷ ಕಾಲ ನ್ಯೂಯಾರ್ಕ್ ಅಪಾರ್ಟ್ ಮೆಂಟ್ ಭೋಗ್ಯಕ್ಕೆ ಸಿಗಲಿದೆ. ಜೊತೆಗೆ ಆಕೆಯ ಖರ್ಚುವೆಚ್ಚಗಳು ಹಾಗೂ ಸಂಬಳ, ಭತ್ಯೆಗಳು ಸಿಗಲಿವೆ.

Please Wait while comments are loading...