For Quick Alerts
  ALLOW NOTIFICATIONS  
  For Daily Alerts

  ಒಂದು ಟ್ಚೀಟ್ ಇಲ್ಲ, ಲಕ್ಷಾಂತರ ಹಿಂಬಾಲಕರು!

  By Mahesh
  |

  ಐದು ವರ್ಷದಲ್ಲಿ ಟ್ವಿಟ್ಟರ್ ಏನೆಲ್ಲಾ ಕಂಡಿರಬಹುದು. ಆದರೆ, ಇದು ಮಾತ್ರ ಕೊಂಚ ವಿಚಿತ್ರವಾಗಿದೆ. ಪಾಪ್ ಗಾಯಕಿ ಬಿಯಾನ್ಸ್ ನೋಲ್ಸ್ ಹೆಸರಿನ ಟ್ವಿಟ್ಟರ್ ಖಾತೆ ಹಿಂಬಾಲಕರ ಸಂಖ್ಯೆ 1,053,480ಗೂ ಮೀರಿದೆ. ಅದರಲ್ಲಿ ಏನು ವಿಶೇಷ ಎಂದರೆ, ಬಿಯಾನ್ಸ್ ಒಂದೇ ಒಂದು ಟ್ವೀಟ್ ಕೂಡಾ ಮಾಡಿಲ್ಲ. ಒಂದು ಟ್ವೀಟ್ ಸಂದೇಶವಿರದೆ ಲಕ್ಷಾಂತರ ಹಿಂಬಾಲಕರನ್ನು ಹೊಂದಿರುವ ಖಾತೆ ಎಂಬ ದಾಖಲೆಯನ್ನು ಬಿಯಾನ್ಸ್ ಬರೆದಿದ್ದಾರೆ.

  ಡೆಸ್ಟಿನಿ ಚೈಲ್ಡ್ ನ ಮೈಕಲ್ ವಿಲಿಯಂ ಹಾಗೂ ಕೆಲ್ಲಿ ರೋಲ್ಯಾಂಡ್ ಅಲ್ಲದೆ ಬಿಯಾನ್ಸ್ ತಂಗಿ ಸೊಲಾಂಜ್ ನೋಲ್ಸ್ ಖಾತೆ ಸೇರಿದಂತೆ 11 ಜನರನ್ನು ಬಿಯಾನ್ಸ್ ಹಿಂಬಾಲಿಸುತ್ತಿದ್ದಾಳೆ. ವಿಶೇಷ ಎಂದರೆ ಇವೆಲ್ಲವು ದೃಢೀಕೃತ ಖಾತೆಗಳು. ಆದರೆ ಬಿಯಾನ್ಸ್ ಖಾತೆಗೆ ಲಕ್ಷಾಂತರ ಅಭಿಮಾನಿಗಳ ಬೆಂಬಲ ಸಿಕ್ಕಿದ್ದರೂ ಬಿಯಾನ್ಸ್ ಅವರದ್ದೇ ಖಾತೆ ಎಂಬ ದೃಢೀಕರಣವಾಗಿಲ್ಲ.

  ಇದೇ ರೀತಿ ಲೇಡಿ ಗಾಗಾ ಖಾತೆ ಕೂಡಾ ಅತಿ ಕಡಿಮೆ ಟ್ವೀಟ್ ಇದ್ದರೂ ಹೆಚ್ಚಿನ ಹಿಂಬಾಲಕರನ್ನು ಹೊಂದಿರುವ ದಾಖಲೆ ಮೆರೆಯುವ ಸಮೀಪದಲ್ಲಿದೆ. ಲೇಡಿ ಗಾಗಾಗೆ 9 ಮಿಲಿಯನ್ ಅಭಿಮಾನಿಗಳಿದ್ದು, ಅವರ ಪುಟದಲ್ಲಿ ಇರುವುದು ಕೇವಲ 646 ಟ್ವೀಟ್ ಗಳು ಮಾತ್ರ.

  ಹಾಲಿವುಡ್ ನಟಿ, ಸಿಂಗರ್ ಬಿಯಾನ್ಸ್ ನೋಲ್ಸ್ ಇಪ್ಪತ್ತೊಂಬತ್ತು ವರ್ಷ ವಯಸ್ಸಿನ ಅಮೆರಿಕನ್ ಬೆಡಗಿ, ಮಿಲಿಯನ್ ಗಟ್ಟಲೆ ಹಣಗಳಿಸಿ ಯಶಸ್ವಿಯಾಗಿರುವ ಹಾಡುಗಾರ್ತಿ.ಸೆಕ್ಸಿ ಜಾಹೀರಾತುಗಳ ನಟಿಸುವಲ್ಲಿ ಕುಖ್ಯಾತಿ ಪಡೆದಿರುವ ಈಕೆ, ಡೆಸ್ಟಿನಿ ಚೈಡ್ ತಂಡದ ಮಾಜಿ ಸದಸ್ಯೆ ಗಾಯಕಿ, ಗೀತ ಸಾಹಿತಿ, ವಸ್ತ್ರ ವಿನ್ಯಾಸಗಾರ್ತಿ ಕೂಡಾ. ಇತ್ತಿಚೆಗೆ ಜಾಹೀರಾತು ವಿಡಿಯೋದಲ್ಲಿ ಪ್ರಚೋದನಕಾರಿಯಾಗಿ ಕಾಣಿಸಿಕೊಂಡಿದ್ದರು. ಈ ಜಾಹೀರಾತಿಗೆ ನಿರ್ಬಂಧ ಕೂಡಾ ಹೇರಲಾಗಿತ್ತು. ಒಟ್ಟಾರೆ ಬಿಯಾನ್ಸ್ ಜನಪ್ರಿಯತೆ ಮಾತ್ರ ಎಗ್ಗಿಲ್ಲದೆ ಏರುತ್ತಲೇ ಇದೆ.

  English summary
  Popular Singer Beyonce Knowles Twitter account yet to see first tweet but She has over a million followers. Beyonce account which Twitter has yet to verify is following trusted 11 account including Beyonce sister Solange Knowles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X